ಶಿವಮೊಗ್ಗ: ಸಾಗರ ತಾಲ್ಲೂಕನ್ನು ಜಿಲ್ಲೆ ಮಾಡಬೇಕು ಎಂಬುದಾಗಿ ಕಿಚ್ಚು ಹೆಚ್ಚಾಗಿದೆ. ಸಾಗರ ಜಿಲ್ಲಾ ಹೋರಾಟ ಸಮಿತಿಯಿಂದ ದಿನಾಂಕ 05-09-2025ರಂದು ಮಹತ್ವದ ನಾಗರೀಕರ ಸಭೆಯನ್ನು ಕರೆಯಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಸಾಗರ ಜಿಲ್ಲಾ ಹೋರಾಟ ಸಮಿತಿಯಿಂದ ಮಾಹಿತಿ ಹಂಚಿಕೊಂಡಿದ್ದು, ಕೇಂದ್ರ ಸರ್ಕಾರದ ಜನಗಣತಿ 2026 ಏಪ್ರಿಲ್.1ರಿಂದ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಅದಕ್ಕಿಂತ 3 ತಿಂಗಳ ಮೊದಲೇ ಹೊಸ ಜಿಲ್ಲೆ, ತಾಲ್ಲೂಕು ರಚನೆ ಸೇರಿದಂತೆ ಗಡಿಗಳಿಗೆ ಸಂಬಂಧಿಸಿದ ಯಾವುದೇ ಪ್ರಸ್ತಾವಿತ ಬದಲಾವಣೆಗಳಿದ್ದರೇ, 2025ರ ಡಿಸೆಂಬರ್.31ರೊಳಗೆ ಮುಗಿಸಿಕೊಳ್ಳಿ ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶಿಸಿದೆ ಎಂದಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು ಜಿಲ್ಲೆಯಲ್ಲಿ ಮತ್ತೊಂದು ಜಿಲ್ಲಾ ಕೇಂದ್ರ ಆಗುವ ಅರ್ಹತೆ ಇರುವುದು ಸಾಗರಕ್ಕೆ ಮಾತ್ರ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ದಿನಾಂಕ 05-09-2025ರ ಶುಕ್ರವಾರ ಮಧ್ಯಾಹ್ನ 4 ಗಂಟೆಗೆ ಸಾಗರದ ನಗರಸಭೆ ರಂಗಮಂದಿರದಲ್ಲಿ ಸಾಗರ ಜಿಲ್ಲೆ ರಚನೆಗೆ ಆಗ್ರಹಿಸುವ ಬಗ್ಗೆ ನಾಗರೀಕರ ಸಭೆ ಕರೆಯಲಾಗಿದೆ.
ಈ ನಾಗರೀಕ ಸಭೆಗೆ ಪಕ್ಷಾತೀತ ಹೋರಾಟಕ್ಕೆ ಎಲ್ಲಾ ಸಮಾಜ, ಸಂಘ, ಸಂಸ್ಥೆಗಳು ಭಾಗೀಯಾಗುವಂತೆ ಸಾಗರ ಜಿಲ್ಲಾ ಹೋರಾಟ ಸಮಿತಿಯಿಂದ ಮನವಿ ಮಾಡಲಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು
BREAKING: ಚಿಕ್ಕಬಳ್ಳಾಪುರದಲ್ಲಿ ರೋಗಗ್ರಸ್ತ ಹಂದಿಗಳನ್ನು ಕರೆಗೆ ಬಿಸಾಡಿ ಅಮಾನವೀಯ ಕೃತ್ಯ
ರಾಜ್ಯದ `ಆಸ್ತಿ’ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ `ಡಿಜಿಟಲ್ ರೂಪದಲ್ಲಿ ಸಿಗಲಿವೆ ಭೂದಾಖಲೆ’ಗಳು.!