ಹುಬ್ಬಳ್ಳಿ: ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಕ್ಷಿಣ ಮಧ್ಯ ರೈಲ್ವೆಯು ಕಾಚಿಗುಡ – ಯಶವಂತಪುರ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್’ಪ್ರೆಸ್ (ಸಂಖ್ಯೆ 20703/20704) ರೈಲುಗಳಿಗೆ ಶಾಶ್ವತವಾಗಿ ಬೋಗಿಗಳನ್ನು ಹೆಚ್ಚಿಸಲು ನಿರ್ಧರಿಸಿರುವುದಾಗಿ ಹುಬ್ಬಳ್ಳಿಯ ನೈರುತ್ಯ ರೈಲ್ವೆಯು ತಿಳಿಸಿದೆ.
ಪ್ರಸ್ತುತ, ಈ ವಂದೇ ಭಾರತ್ ರೈಲು 8 ಬೋಗಿಗಳೊಂದಿಗೆ ಸಂಚರಿಸುತ್ತಿದೆ. ಇನ್ನು ಮುಂದೆ, ಇದನ್ನು 16 ಬೋಗಿಗಳಿಗೆ ಖಾಯಂ ಆಗಿ ವಿಸ್ತರಿಸಲಾಗುವುದು. ಇದರಿಂದ ಈ ಜನಪ್ರಿಯ ರೈಲಿನ ಸಾಮರ್ಥ್ಯ ದ್ವಿಗುಣಗೊಳ್ಳಲಿದ್ದು, ಪ್ರಯಾಣಿಕರ ಪ್ರಯಾಣ ಇನ್ನಷ್ಟು ಆರಾಮದಾಯಕವಾಗಲಿದೆ.
ಈ ಹೆಚ್ಚುವರಿ ವ್ಯವಸ್ಥೆಯು ಕಾಚಿಗುಡದಿಂದ (ರೈಲು ಸಂಖ್ಯೆ 20703) ಜುಲೈ 10, 2025 ರಿಂದ ಮತ್ತು ಯಶವಂತಪುರದಿಂದ (ರೈಲು ಸಂಖ್ಯೆ 20704) ಜುಲೈ 10, 2025 ರಿಂದ ಜಾರಿಗೆ ಬರಲಿದೆ.
BREAKING: ಕಾಮಗಾರಿ ಬಿಲ್ ಗೆ 5 ಪರ್ಸೆಂಟ್ ಲಂಚ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್
BREAKING: ರಾಜ್ಯದಲ್ಲಿ ಬಂಧಿತ ಮೂವರು ಶಂಕಿತ ಉಗ್ರರಿಗೆ 6 ದಿನ NIA ಕಸ್ಟಡಿಗೆ ನೀಡಿ ಕೋರ್ಟ್ ಆದೇಶ