Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿಧಾನಸೌಧದ ‘ಸಾರಥಿಗಳ’ ಮೌನ ರೋದನೆ: ‘ಮೂಲಭೂತ ಸೌಕರ್ಯ’ಕ್ಕಾಗಿ ‘ಶಾಸಕ ಸುರೇಶ್ ಕುಮಾರ್’ ಆಗ್ರಹ

18/03/2026 5:33 PM

‘ಪವಿತ್ರ ಗಂಗಾ ನದಿ’ಯಲ್ಲೇ ಇಫ್ತಾರ್ ಕೂಡ, ಬಿರಿಯಾನಿ ಪಾರ್ಟಿ: ಧಾರ್ಮಿಕ ಭಾವನೆಗೆ ಧಕ್ಕೆ ತಂದ 14 ಮಂದಿ ಅರೆಸ್ಟ್!

18/03/2026 5:12 PM

ಆನೆ ಕಂದಕ, ಸೌರಬೇಲಿ ಸಮರ್ಪಕ ನಿರ್ವಹಣೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ

18/03/2026 4:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸಿ: ವಿಧಾನಸಭೆಯಲ್ಲಿ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಆಗ್ರಹ
KARNATAKA

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸಿ: ವಿಧಾನಸಭೆಯಲ್ಲಿ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಆಗ್ರಹ

By kannadanewsnow0918/03/2026 4:40 PM

ಬೆಂಗಳೂರು: 2026-27ನೇ ಸಾಲಿನ ಬಜೆಟ್‌ ಅಧಿವೇಶದನದಲ್ಲಿ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಪರ ಸದನದಲ್ಲಿ ದನಿ ಎತ್ತಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ 1) ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ ಕೆಲಸದ ಸರಾಸರಿ ಗಂಟೆಗಳೆಷ್ಟು? ಪ್ರಸ್ತುತ ಸೇವೆಯಲ್ಲಿರುವ ಕಾರ್ಯಕರ್ತೆಯರ ಸಂಖ್ಯೆಯೆಷ್ಟು? 2) ಈ ಕಾರ್ಯಕರ್ತೆಯರಿಗೆ ಸರ್ಕಾರ ಪ್ರತಿ ತಿಂಗಳಿಗೆ ನೀಡುವ ವೇತನ ಎಷ್ಟು? 3) ಇವರುಗಳ ವೇತನವನ್ನು ಕೊನೆಯ ಬಾರಿಗೆ ಹೆಚ್ಚಿಸಿದ ದಿನಾಂಕ ಯಾವುದು? 4) ಇವರುಗಳು ಸಮಾಜಕ್ಕೆ ನೀಡುತ್ತಿರುವ ಅಮೂಲ್ಯ ಸೇವೆಯನ್ನು ಗಮನದಲ್ಲಿಟ್ಟುಕೊಂಡು 2026-27ನೇ ಹಣಕಾಸು ವರ್ಷದಲ್ಲಿ ಅವರ ವೇತನವನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳುವುದೇ? ಎಂದು ಪ್ರಶ್ನಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರಿಗೆ ಅತಿ ಹೆಚ್ಚು ಜವಾಬ್ದಾರಿಗಳಿವೆ. ಅಂಗನವಾಡಿ ಕಾರ್ಯಕರ್ತೆಯರು ಮಹಿಳೆಯರು, ಮಕ್ಕಳು ಮತ್ತು ಗರ್ಭಿಣಿಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುತ್ತಾರೆ. ಮನೆಮನೆಗಳಿಗೆ ಯೋಜನೆಗಳನ್ನು ತಲುಪಿಸಲು ಕೆಲಸ ಮಾಡುತ್ತಾರೆ. 6 ತಿಂಗಳಿಂದ 6 ವಯಸ್ಸಿನ ಪೋಷಣ ಆಹಾರಗಳನ್ನು ಯಾವ ರೀತಿ ಕೊಡಬೇಕು ಎಂಬುದರ ಕುರಿತು ಜನರಿಗೆ ಮಾಹಿತಿ ಕೊಡುತ್ತಾರೆ. ಗರ್ಭಿಣಿಯರು ಮತ್ತು ತಾಯಂದಿರಿಗೆ ಆರೋಗ್ಯ ಮತ್ತು ಪೋಷಣೆ ಸಲಹೆ ಕೊಡುತ್ತಾರೆ. ಇಂತಹ ಹಲವಾರು ಕಾರ್ಯಗಳನ್ನು ಕಾರ್ಯಕರ್ತೆಯರು ಮಾಡುತ್ತಾರೆ ಎಂದರು.

ಸಮಸ್ಯೆಗಳೇನೆಂದರೆ, ಅವರಿಗೆ ಸಂಬಳ ಕಡಿಮೆ. ಸಮಯಕ್ಕೆ ಸರಿಯಾಗಿ ಸಂಬಳ ಆಗುವುದಿಲ್ಲ. ಇದು ಮುಖ್ಯ ಸಮಸ್ಯೆಯಾಗಿದೆ. ಮತ್ತು ಅವರಿಗೆ ಯಾವುದೇ ತರದ ಸರ್ಕಾರಿ ಉದ್ಯೋಗ ಮಾನ್ಯತೆ ಇಲ್ಲ. ಆದರೂ ಇವುಗಳ ನಡುವೆ ಅವರು ಯಾವುದೇ ಸರ್ಕಾರಿ ಸೇವೆಗಳಿದ್ದರೂ ಅವುಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸವನ್ನು ಮಾಡಬೇಕು. ಕೆಲವೆಡೆ ಆಹಾರವನ್ನು ತಲುಪಿಸುವುದು ತುಂಬಾ ವಿಳಂಬವಾಗುತ್ತಿದೆ ಎಂದು ದರ್ಶನ್‌ ಪುಟ್ಟಣ್ಣಯ್ಯ ಸದನದ ಗಮನ ಸೆಳೆದರು.

ಆಶಾ ಕಾರ್ಯಕರ್ತೆಯರು ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾರೆ ಮತ್ತು ಸರ್ಕಾರದ ಸೇವೆಗಳಾದ ಐಸಿಡಿಎಸ್‌, ಎನ್‌ ಎಚ್‌ ಎಮ್‌, ಎ ಎನ್‌ ಸಿ, ಪಿ ಎಚ್‌ ಸಿ ಸೇವೆಗಳ ಜೊತೆಗೆ ಲಸಿಕೆಗಳನ್ನು ಹಾಕುವ ಕೆಲಸವನ್ನು ಕೂಡ ಅವರು ಮಾಡುತ್ತಾರೆ. ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೂಡ ಸಹಾಯಕರಾಗಿ ಕೆಲಸ ಮಾಡುತ್ತಾರೆ ಎಂದು ಸಚಿವರ ಗಮನ ಸೆಳೆದರು.

ಹೀಗೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಕಡೆಯ ಹಳ್ಳಿಯ ಕೊನೆಯ ವ್ಯಕ್ತಿಗೆ ತಳಮಟ್ಟದಲ್ಲಿ ಬಹುಮುಖ್ಯ ಸೇವೆಗಳನ್ನು ಒದಗಿಸುತ್ತಾರೆ. ಇವರಿಗೆ ಸಂಬಳ ಹೆಚ್ಚಳ ಮತ್ತು ಆರೋಗ್ಯ ಭದ್ರತೆಯನ್ನು ಒದಗಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ದರ್ಶನ್‌ ಪುಟ್ಟಣ್ಣಯ್ಯನವರ ಪ್ರಶ್ನೆಗೆ ಉತ್ತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಮಾಡುವ ಕೆಲಸದಲ್ಲಿ ಯಾವುದೇ ಪ್ರಶ್ನೆ ಇಲ್ಲ. ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರಿ ಯೋಜನೆಗಳನ್ನು ಜನರಿಗೆ ಕೊಂಡೊಯ್ಯುವ ಕೊಂಡಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಸರ್ಕಾರದ ಯಾವುದೇ ಯೋಜನೆಗಳು, ಏನೇ ಕೆಲಸ ಇದ್ದರು ಬಹಳಷ್ಟು ಉತ್ತಮ ರೀತಿಯಲ್ಲಿ ಹಳ್ಳಿಮಟ್ಟದಲ್ಲಿ ಸರ್ಕಾರಕ್ಕೆ ಒಳ್ಳೆಯ ಹೆಸರನ್ನು ತಂದುಕೊಡುವವರು ಆಶಾ, ಅಂಗನವಾಡಿ ಕಾರ್ಯಕರ್ತೆಯರು ಎಂದರು.

ದರ್ಶನ್‌ ಪುಟ್ಟಣ್ಣಯ್ಯನವರು ಹೇಳಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡಬೇಕು. ನಾನು ಬಹಳ ಹೆಮ್ಮೆಯಿಂದ ಹೇಳಲು ಬಯಸುವುದೇನೆಂದರೆ, ಕರ್ನಾಟಕ ರಾಜ್ಯ ಇಡೀ ದೇಶದಲ್ಲಿ ಅತ್ಯಧಿಕ ಗೌರವ ಧನವನ್ನು ಕೊಡುತ್ತಿದೆ. ಹರಿಯಾಣ, ತೆಲಂಗಾಣ, ಕೇರಳ ನಂತರ ನಮ್ಮ ರಾಜ್ಯವಿದೆ. ಕೇಂದ್ರ ಸರ್ಕಾರ ಕೇವಲ 2,700 ರೂ. ಮಾತ್ರ ಪಾವತಿಸುತ್ತದೆ. ಆದರೂ ಗೌರವಧನ ಪಾವತಿಯಲ್ಲಿ ಇಡೀ ದೇಶದಲ್ಲೇ ನಮ್ಮ ರಾಜ್ಯ 4ನೇ ಸ್ಥಾನದಲ್ಲಿದೆ ಎಂದರು.

ಕಳೆದ ಏಪ್ರಿಲ್‌ ನಲ್ಲಿ ನಮ್ಮ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ 1,000 ರೂ. ಸಹಾಯಕಿಯರಿಗೆ 750 ರೂ.ಗಳಷ್ಟನ್ನು ಕಳೆದ ಬಜೆಟ್‌ ನಲ್ಲೇ ಘೋಷಣೆ ಮಾಡಿ ಅದನ್ನು ಈಗಾಗಲೇ ಜಾರಿಗೆ ತಂದಿದ್ದೇವೆ. ಅವರು ಮಾಡುತ್ತಿರುವ ಕೆಲಸದಲ್ಲಿ ನಮಗೆ ಯಾವುದೇ ಸಂಶಯವಿಲ್ಲ. ಅವರು ಮಾಡುತ್ತಿರುವ ಸೇವೆ ಇದು (ಗೌರವ ಧನ) ಸಾಲುತ್ತಿಲ್ಲ. ಇನ್ನೂ ಜಾಸ್ತಿ ಆಗಬೇಕು ಎನ್ನುವುದು ಅವರ ಬೇಡಿಕೆ. ಈಗಾಗಲೇ ನಾವು ಆರ್ಥಿಕ ಇಲಾಖೆಯೊಂದಿಗೆ ಮತ್ತೆ ಪ್ರಸ್ತಾವನೆ ಇಟ್ಟಿದ್ದೇವೆ ಎಂದರು.

ಅದರ ಜೊತೆಗೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಆರೋಗ್ಯ ಮತ್ತು ಸೇವಾ ಭದ್ರತೆ ಬಗ್ಗೆ ದರ್ಶನ್‌ ಪುಟ್ಟಣ್ಣಯ್ಯ ಕೇಳಿದರು. ಅದರ ಕುರಿತು ನಿರ್ದಿಷ್ಟವಾಗಿ ಕೇಳಿದರೆ ನಾನು ಉತ್ತರಿಸುತ್ತೇನೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್‌ ಪುಟ್ಟಣ್ಣಯ್ಯ, ಸೇವಾ ಭದ್ರತೆ ಬಗ್ಗೆ ಯಾವುದೇ ರೀತಿಯ ಸೌಲಭ್ಯ ಸಿಕ್ಕಿಲ್ಲ. ಉದ್ಯೋಗ ಭದ್ರತೆ ಯಾವುದೂ ಇಲ್ಲ. ಅವರಿಗೆ ಯಾವ ರೀತಿಯಲ್ಲಾದರೂ ಸರ್ಕಾರದ ಕಡೆಯಿಂದ ಭದ್ರತೆ ಕೊಡಿ. ಅವರಿಗೆ ಕೊಡುತ್ತಿರುವ ಗೌರವ ಧನ ದೇಶದಲ್ಲೇ ಹೆಚ್ಚಿರಬಹುದು. ಆದರೂ ಅವರಿಗೆ ಕನಿಷ್ಠ ವೇತನವೂ ಅವರಿಗೆ ಸಿಗುತ್ತಿಲ್ಲ. ಇದರಿಂದ ತುಂಬಾ ಕಷ್ಟ ಆಗುತ್ತದೆ. ಮನೆಮನೆಗೆ ಹೋಗಿ ಅವರು, ಸಮೀಕ್ಷೆ ಮಾಡಿ ಕೆಲಸ ಮಾಡುತ್ತಿರುವುದರಿಂದ ನಿಮಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಅವರಿಗೆ ಸೇವಾ ಭದ್ರತೆಯನ್ನು ಯಾವ ರೀತಿ ಕೊಡುತ್ತೀರಿ ಎಂದು ತಿಳಿಸಿ ಎಂದು ಕೋರಿದರು.

ಈ ವೇಳೆ ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಔರಾದ್‌ ಶಾಸಕ ಪ್ರಭು ಚೌಹಾಣ್‌, ನಮಗೂ ಎಲ್ಲರೂ ಮನವಿ ಪತ್ರವನ್ನು ಕೊಟ್ಟಿದ್ದಾರೆ. ದರ್ಶನ್‌ ಪುಟ್ಟಣ್ಣಯ್ಯನವರು ಬಹಳ ಮುಖ್ಯವಾದ ವಿಷಯವನ್ನು ಸದನದಲ್ಲಿ ಮಂಡಿಸಿದ್ದಾರೆ. ತಾವು ಅತಿ ಹೆಚ್ಚು ಗೌರವ ಧನ ಕೊಡುತ್ತಿರುವುದಾಗಿ ಹೇಳಿದ್ದೀರಿ. ಆದರೆ ಅವರು ಎಲ್ಲ ಶಾಸಕರ ಮನೆಗಳಿಗೆ ಹೋಗಿ ಮನವಿ ಕೊಟ್ಟಿದ್ದಾರೆ. ಅದಕ್ಕಾಗಿ ಗೌರವ ಧನವನ್ನು ಹೆಚ್ಚಿಸಬೇಕು. ಜೊತೆಗೆ ದರ್ಶನ್‌ ಪುಟ್ಟಣ್ಣಯ್ಯನವರು ಬಹಳ ವಿವರವಾಗಿ ಹೇಳಿದ್ದಾರೆ. ಆ ಮನವಿಯನ್ನು ಪರಿಗಣಿಸಬೇಕು. ಅವರು ಎಲ್ಲ ಕಡೆ ಕೆಲಸ ಮಾಡುತ್ತಾರೆ ಎಂದು ನೀವೇ ಒಪ್ಪಿಕೊಂಡಿದ್ದೀರಿ. ಅವರ ವೇತನವನ್ನು ಹೆಚ್ಚಿಸಿ ಎಂದು ಒತ್ತಾಯಿಸಿದರು.

ಈ ವೇಳೆ ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಬಸವ ಕಲ್ಯಾಣ ಶಾಸಕ ಶರಣು ಸಲಗರ, ಅಂಗನವಾಡಿ ಕಾರ್ಯಕರ್ತೆಯರ ಪೈಕಿ ಕೆಲವರು 85, 95 % ಅಂಕಗಳನ್ನು ಗಳಿಸಿದವರು ಶಿಕ್ಷಕಿಯರಾಗಿದ್ದಾರೆ. ಅವರು ಬಹಳ ಪ್ರತಿಭಾವಂತರಿದ್ದಾರೆ. ಅವರ ಪ್ರತಿಭೆ 15 ಮಕ್ಕಳಲ್ಲಿ ಉಪಯೋಗವಾಗುವುದಕ್ಕಿಂತ ಕೆ ಪಿ ಎಸ್‌ ಶಾಲೆಗಳಲ್ಲಿ ಅವರ ಅಗತ್ಯವಿದೆ. ಇಲ್ಲಿ ಇಂಗ್ಲಿಷ್‌ ಕಲಿಸುವವರು ಬೇಕಾಗಿದ್ದಾರೆ. ಗಣಿತ, ವಿಜ್ಞಾನ, ಇಂಗ್ಲಿಷ್‌ ಅನ್ನು ನಿರರ್ಗಳವಾಗಿ ಅವರು ಬೋಧಿಸಬಲ್ಲರು. 4 ವರ್ಷ ಅವರು ಅಲ್ಲೇ ಉಳಿದರೆ ಅವರು ಕಲಿತದ್ದೂ ಮರೆತುಹೋಗುತ್ತದೆ. ಆದ್ದರಿಂದ ಅವರಿಗೆ ಕೆ ಪಿ ಎಸ್‌ ಶಾಲೆಗಳಲ್ಲಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಚರ್ಚೆಗೆ ಉತ್ತರಿಸಿದ ಲಕ್ಷ್ಮೀ ಹೆಬ್ಬಾಳ್ಕರ್‌, ಶಾಸಕರಿಗೆ ಮನವಿ ಕೊಟ್ಟಿರುವಂತೆ ಆಶಾ, ಅಂಗನವಾಡಿ ಕಾರ್ಯರ್ತೆಯರು ನಮಗೂ ಮನವಿ ಕೊಟ್ಟಿದ್ದಾರೆ. ಅವರು ಬಹಳಷ್ಟು ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ಗೌರವಧನವನ್ನು ಹೆಚ್ಚಳ ಮಾಡಬೇಕು. ಆದರೆ ಇದಕ್ಕೆ ಕೇಂದ್ರ ಸರ್ಕಾರ ಕೂಡ ನೆರವು ನೀಡಬೇಕಾಗುತ್ತದೆ. ಕೇವಲ ರಾಜ್ಯ ಸರ್ಕಾರದ ಕಡೆಗೆ ಬೆರಳು ತೋರಿಸಿದರೆ ಏನೂ ಆಗದು. ತಮಗೆ ಹೇಳುತ್ತಿರುವಂತೆ 9,800 ರೂ.ಗಳನ್ನು ಕೊಡುವ ವ್ಯವಸ್ಥೆಯನ್ನು ನಾವು ಮಾಡಿದ್ದೇವೆ. ಕೇಂದ್ರದಿಂದ ಕೊಡುತ್ತಿರುವುದು ಕೇವಲ 2,700 ರೂ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಡೆಯುವ ಕಾರ್ಯಕ್ರಮಗಳು ಮುಖ್ಯ ಎಂದರು.

ಅಂಗನವಾಡಿಗಳನ್ನು ಆರಂಭಿಸಿದವರು ಇಂದಿರಾ ಗಾಂಧಿಯವರು. ಬಡವರ ಮಕ್ಕಳಿಗೆ ಪೌಷ್ಟಿಕಾಂಶದ ಜೊತೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಆಶಯದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ ಕೇಂದ್ರ ಸರ್ಕಾರಕ್ಕೆ ನಾವು ಪದೇಪದೇ ಮನವಿ ಮಾಡಿದರೂ ಹೇಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ನಮಗೆ ಮನವಿ ಕೊಡುತ್ತಿದ್ದಾರೋ ಅದೇ ರೀತಿಯಲ್ಲಿ ನಾನು ವೈಯಕ್ತಿಕವಾಗಿ ಹೋಗಿ ಕೇಂದ್ರ ಮಂತ್ರಿಗಳಿಗೆ ಭೇಟಿಯಾಗಿ ಮನವಿ ಮಾಡಿದ್ದೇನೆ. ಬೇರೆ ಬೇರೆ ರಾಜ್ಯಗಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ಕೂಡ ಮನವಿ ಮಾಡಿದ್ದೇವೆ. ಆದರೆ ಇನ್ನೂ ನಮ್ಮ ಮನವಿಯನ್ನು ಪುರಸ್ಕರಿಸುತ್ತಿಲ್ಲ. ಅವರು ಸ್ವಲ್ಪ ಹೆಚ್ಚಿಸಿದರೆ ನಾವೂ ಕೂಡ ಒಂದು ಹೆಜ್ಜೆ ಮುಂದೆ ಹೋಗಬಹುದು ಎಂದರು.

ನಂತರ ಶರಣು ಸಲಗರ ಅವರ ಮನವಿ ಕುರಿತು ಪ್ರತಿಕ್ರಿಯೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್‌, ದ್ವೀತೀಯ ಪಿಯುಸಿ ಓದಿದವರು ಅಂಗನವಾಡಿ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಈಗ ನಾವು ಎಲ್‌ ಕೆ ಜಿ ಮತ್ತು ಯು ಕೆ ಜಿಯನ್ನು ಆರಂಭಿಸಿದ್ದೇವೆ. ಈಗಾಗಲೇ ಸುಮಾರು 5,000 ಅಂಗನವಾಡಿಗಳಲ್ಲಿ ಸರ್ಕಾರಿ ಮಾಂಟೆಸ್ಸರಿಗಳನ್ನು ಆರಂಭಿಸಿದ್ದೇವೆ. 5,000 ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಲು ತಯಾರಿ ಮಾಡಿದ್ದೇವೆ. ಗುಣಮಟ್ಟದ ಶಿಕ್ಷಣ ಅಂಗನವಾಡಿಯಲ್ಲೂ ಬೇಕು. ಯಾಕೆಂದರೆ ಅಂಗನವಾಡಿಗೆ ಬರುವವರು ಯಾರು? ಅಂಗನವಾಡಿಯಲ್ಲಿ ನಾವಿಲ್ಲೇ ಕೆಲಸ ಮಾಡುತ್ತೇವೆ ಎಂದು ಅರ್ಜಿ ಹಾಕಿ ಆನ್‌ ಲೈನ್‌ ಮೆರಿಟ್‌ ಮೂಲಕ ಅವರು ಆಯ್ಕೆಯಾಗಿದ್ದಾರೆ. ಇದರಿಂದ ಅದು ಅವರಿಗೆ ಬಿಟ್ಟ ವಿಷಯ. ನೀವು ಅಲ್ಲಿ ಹೋಗಿ ಇಲ್ಲಿ ಹೋಗಿ ಕೆಲಸ ಮಾಡಿ ಎಂದು ಹೇಳಲಿಕ್ಕೆ ಆಗುವುದಿಲ್ಲ. ಬಿ.ಎ., ಎಂ.ಎ., ಆಗಿರುವ ಸುಮಾರು 17,000 ಪದವೀಧರರು ಅಂಗನವಾಡಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮಗೂ ಗುಣಮಟ್ಟವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.

ಈ ವೇಳೆ ಚರ್ಚೆಯಲ್ಲಿ ಪ್ರವೇಶಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ, ಅಂಗನವಾಡಿಯಲ್ಲಿ 12,000 ರೂ. ಪ್ರತಿ ತಿಂಗಳು ಗೌರವ ಧನ ನೀಡಲಾಗುತ್ತಿದೆ. ಇದರಲ್ಲಿ ರಾಜ್ಯದ ಪಾಲು 9,300 ರೂ. ಕೇಂದ್ರ ಸರ್ಕಾರದ ಪಾಲು 2,700 ರೂ. ಆಶಾ ಕಾರ್ಯಕರ್ತೆಯರಿಗೆ 8,000 ರೂ. ಪ್ರತಿ ತಿಂಗಳು ಗೌರವ ಧನ, ಇದರಲ್ಲಿ 6,000 ರೂ. ರಾಜ್ಯದ ಪಾಲು, ಕೇಂದ್ರದ ಪಾಲು 2,000 ರೂ. ಅದೇ ರೀತಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕರ್ತರಿಗೆ 4,000 ರೂ. ಗೌರವಧನ ಕೊಡಲಾಗುತ್ತಿದೆ ಎಂದರು.

ಹೀಗೆ ಎಷ್ಟು ಎಂದು ನಾವೇ (ರಾಜ್ಯ ಸರ್ಕಾರ) ಖರ್ಚು ಮಾಡುವುದು? ಎಲ್ಲದಕ್ಕೂ ನಾವೇ ಖರ್ಚು ಮಾಡುತ್ತಿದ್ದೇವೆ. ಹೆಸರು ಮಾತ್ರ ಕೇಂದ್ರ ಸರ್ಕಾರದ್ದು, ಮೋದಿಯವರ ಫೋಟೋ ಹಾಕಿಕೊಂಡು ಎಲ್ಲ ಕಡೆ ಮಾಡುತ್ತಿದ್ದಾರೆ. ಜೆಜೆಎಂಗೂ (ರಾಷ್ಟ್ರೀಯ ಜಲ ಜೀವನ ಮಿಷನ್) ನಾವೇ ಕೊಡುತ್ತಿರುವುದು. 15ನೇ ಹಣಕಾಸು ವರದಿ ಪ್ರಕಾರವೂ ನಾವೇ ಕೊಡುತ್ತಿದ್ದೇವೆ, ಇದರಲ್ಲೂ ನಾವೇ ಹೆಚ್ಚಿನ ಪಾಲು ಕೊಡುತ್ತಿದ್ದೇವೆ. ನಾವು ಕೊಡೋಣ. ಆದರೆ ಕನಿಷ್ಠ ಶೇ 50 – 50 ಹಂಚಿಕೆ ಶೇ 60 – 40 ಹಂಚಿಕೆ ಏನಾದರೂ ಇದ್ದರೆ ಎಲ್ಲರಿಗೂ ಅನುಕೂಲವಾಗುತ್ತದೆ. ನಮ್ಮ ರಾಜ್ಯ ಸರ್ಕಾರಕ್ಕೂ ಅನುಕೂಲ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೂ ಅನುಕೂಲವಾಗುತ್ತದೆ. ಕೇವಲ ಫೋಟೋ ಹಾಕಿಕೊಳ್ಳಬಾರದು ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಪ್ರಭು ಚೌಹಾಣ್‌ ನಿಮ್ಮ ಫೋಟೋವನ್ನೂ ಹಾಕಿಕೊಳ್ಳಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್‌ ಖರ್ಗೆ, ನಮ್ಮ ಫೋಟೋನೂ ಹಾಕಿಕೊಳ್ಳುತ್ತೇವೆ ಎಂದಿದ್ದಕ್ಕೆ, ಅವಕಾಶ ಕೊಟ್ಟಿಲ್ಲ. ಅದಕ್ಕೆ ಪತ್ರ ಬರೆದ ದಾಖಲೆಯೂ ಇದೆ ಎಂದರು. ಇಲ್ಲಿಗೆ ಸಭಾಧಕ್ಷ ಯು ಟಿ ಖಾದರ್‌ ಚರ್ಚೆ ನಿಲ್ಲಿಸಿದರು.

ಸೇವಾ ಭದ್ರತೆ, ಕನಿಷ್ಠ ವೇತನ ಕುರಿತು ಅಂಗನವಾಡಿ ಕಾರ್ಯಕರ್ತೆಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್

SHOCKING : ರಾಜ್ಯದಲ್ಲಿ ‘ಹೃದಯಾಘಾತಕ್ಕೆ’ ಮತ್ತೊಂದು ಬಲಿ : ಕೋಲಾರದಲ್ಲಿ ಹೆಡ್ ಕಾನ್ಸ್ಟೇಬಲ್ ಸಾವು!

Share. Facebook Twitter LinkedIn WhatsApp Email

Related Posts

ವಿಧಾನಸೌಧದ ‘ಸಾರಥಿಗಳ’ ಮೌನ ರೋದನೆ: ‘ಮೂಲಭೂತ ಸೌಕರ್ಯ’ಕ್ಕಾಗಿ ‘ಶಾಸಕ ಸುರೇಶ್ ಕುಮಾರ್’ ಆಗ್ರಹ

18/03/2026 5:33 PM2 Mins Read

ಆನೆ ಕಂದಕ, ಸೌರಬೇಲಿ ಸಮರ್ಪಕ ನಿರ್ವಹಣೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ

18/03/2026 4:46 PM2 Mins Read

ಚಿಕ್ಕಮಗಳೂರು : ಕೋಮು ಪ್ರಚೋದನೆ ಆರೋಪ : ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೇರಿ 15 ಜನರಿಗೆ ಗಡಿಪಾರು ಆದೇಶ

18/03/2026 4:38 PM1 Min Read
Recent News

ವಿಧಾನಸೌಧದ ‘ಸಾರಥಿಗಳ’ ಮೌನ ರೋದನೆ: ‘ಮೂಲಭೂತ ಸೌಕರ್ಯ’ಕ್ಕಾಗಿ ‘ಶಾಸಕ ಸುರೇಶ್ ಕುಮಾರ್’ ಆಗ್ರಹ

18/03/2026 5:33 PM

‘ಪವಿತ್ರ ಗಂಗಾ ನದಿ’ಯಲ್ಲೇ ಇಫ್ತಾರ್ ಕೂಡ, ಬಿರಿಯಾನಿ ಪಾರ್ಟಿ: ಧಾರ್ಮಿಕ ಭಾವನೆಗೆ ಧಕ್ಕೆ ತಂದ 14 ಮಂದಿ ಅರೆಸ್ಟ್!

18/03/2026 5:12 PM

ಆನೆ ಕಂದಕ, ಸೌರಬೇಲಿ ಸಮರ್ಪಕ ನಿರ್ವಹಣೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ

18/03/2026 4:46 PM

BREAKING : ಚೀನಾಕ್ಕೆ ತೆರಳುತ್ತಿದ್ದ 7 ರಷ್ಯಾದ ‘ತೈಲ ಟ್ಯಾಂಕರ್’ಗಳು ಯು-ಟರ್ನ್, ಭಾರತದತ್ತ ಆಗಮನ

18/03/2026 4:42 PM
State News
KARNATAKA

ವಿಧಾನಸೌಧದ ‘ಸಾರಥಿಗಳ’ ಮೌನ ರೋದನೆ: ‘ಮೂಲಭೂತ ಸೌಕರ್ಯ’ಕ್ಕಾಗಿ ‘ಶಾಸಕ ಸುರೇಶ್ ಕುಮಾರ್’ ಆಗ್ರಹ

By kannadanewsnow0918/03/2026 5:33 PM KARNATAKA 2 Mins Read

ಬೆಂಗಳೂರು: ರಾಜ್ಯದ ಆಡಳಿತ ಶಕ್ತಿ ಕೇಂದ್ರವಾದ ವಿಧಾನಸೌಧದ ಒಳಗೆ ನಾಡಿನ ಭವಿಷ್ಯ ನಿರ್ಧಾರವಾಗುವ ಚರ್ಚೆಗಳು ನಡೆಯುತ್ತಿರುತ್ತವೆ. ಆದರೆ, ಅದೇ ಸೌಧದ…

ಆನೆ ಕಂದಕ, ಸೌರಬೇಲಿ ಸಮರ್ಪಕ ನಿರ್ವಹಣೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ

18/03/2026 4:46 PM

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸಿ: ವಿಧಾನಸಭೆಯಲ್ಲಿ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಆಗ್ರಹ

18/03/2026 4:40 PM

ಚಿಕ್ಕಮಗಳೂರು : ಕೋಮು ಪ್ರಚೋದನೆ ಆರೋಪ : ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೇರಿ 15 ಜನರಿಗೆ ಗಡಿಪಾರು ಆದೇಶ

18/03/2026 4:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.