ಬೆಂಗಳೂರು: ನೀವು ಇರುವಂತ ಸ್ಥಳಕ್ಕೆ ತೆರಳೋದಕ್ಕೆ, ನಿಮಗೆ ಪರಿಚಿತ ಸ್ಥಳಕ್ಕೆ ತೆರಳೋದಕ್ಕೆ ಎಷ್ಟು ಮೀಟರ್ ಆಗಲಿದೆ, ಅದಕ್ಕೆ ಎಷ್ಟು ದುಡ್ಡು ಕೊಡಬೇಕು ಎಂಬುದು ಗೊತ್ತಿರುತ್ತದೆ. ಹೀಗೆ ತಿಳಿಸಿದ್ದಂತ ಹೊರ ರಾಜ್ಯದ ಯುವತಿಯೊಬ್ಬಳು ಕ್ಯಾಬ್ ಸಿಗದೇ ಇದ್ದಾಗ ಆಟೋದಲ್ಲಿ ಅದೇ ದರ ಕೊಡುವುದಾಗಿ ಹೊರಟಿದ್ದಾಳೆ. ಆದರೇ ಸ್ಥಳಕ್ಕೆ ತಲುಪಿದಾಗ ಆಟೋ ಚಾಲಕ ತೋರಿದ ನಡೆ, ಯುವತಿಯೊಂದಿಗೆ ವರ್ತಿಸಿದಂತ ವರ್ತನೆ ಆಘಾತಕಾರಿಯಾಗಿತ್ತು. ಅದೇನು ಅಂತ ಮುಂದೆ ಓದಿ.
ಬೆಂಗಳೂರಿನ ಸಿಲ್ಕ್ ಬೋರ್ಡ್ ನಿಂದ ಲುಲು ಮಾಲ್ ಗೆ ತೆರಳೋದಕ್ಕೆ ಕ್ಯಾಬ್ ಮೂಲಕ ತೆರಳೋದಕ್ಕೆ ಚೆನ್ನೈ ಮೂಲದ ಯುವತಿಯೊಬ್ಬಳು ಹುಡುಕಾಡಿದ್ದಾರೆ. ಅದು ಲಭ್ಯವಿಲ್ಲದೇ ಅಲ್ಲೇ ಕಾಯುತ್ತಿದ್ದಾಗ ಸಮೀಪದಲ್ಲಿದ್ದಂತ ಆಟೋ ನಿಲ್ದಾಣದ ಆಟೋ ಚಾಲಕ ಕ್ಯಾಬ್ ದರದಲ್ಲೇ ಹಣ ಕೊಡಿ ಎಂಬುದಾಗಿ ಹೇಳಿ ಆಟೋವೊಂದರಲ್ಲಿ ಕೂರಿಸಿ ಯುವತಿಯನ್ನು ಕಳುಹಿಸಿದ್ದಾರೆ.
ಯುವತಿ ಬನ್ನೇರುಘಟ್ಟ ರಸ್ತೆಗೆ ಬರುತ್ತಿದ್ದ ವೇಳೆಗಾಗಲೇ ಕೆಎ 05, ಎಎಲ್ 9980 ಎಂಬಂತ ಆಟೋದ ಮೀಟರ್ 26 ಕಿಲೋಮೀಟರ್ ತೋರಿಸಿ, ರೂ.340 ದರ ತೋರಿಸಿದೆ. ಯುವತಿ ಲುಲೂ ಮಾಲ್ ಗೆ ನಾನು ಏರಿದಂತ ಸ್ಥಳದಿಂತ 270 ರೂಪಾಯಿ ಕ್ಯಾಬ್ ನಲ್ಲಿ ಆಗುತ್ತದೆ. ಈಗ ನೋಡಿದ್ರೆ 340 ತೋರಿಸುತ್ತಿದೆ. ಯಾಕೆ ಮೀಟರ್ ಸರಿ ಇಲ್ವ ಅಂತ ಪ್ರಶ್ನಿಸಿದ್ದಾಳೆ.
ಇದರಿಂದ ಮಾತಿಗೆ ಮಾತು ಬೆಳೆದು ಆಟೋ ಚಾಲಕ ಗುಡ್ಡೆ ಭರತ್ ಎಂಬುವರು ಯುವತಿಯೊಂದಿಗೆ ಮೀಟರ್ ಸರಿಯಾಗೇ ಇದೆ. ನೀವು ಒಂದೂವರೆ ಪಟ್ಟು ದರ ಪಾವತಿಸಬೇಕು ಅಂತ ಹೇಳಿದ್ದಾರೆ. ಅದನ್ನು ಯುವತಿ ನಿರಾಕರಿಸಿದ್ದಾಳೆ. ನಾನು ಕೊಡುವುದೇ 300. ಕಾರಣ ಕ್ಯಾಬ್ ನಲ್ಲಿ ಬಂದಿದ್ದರೂ 270 ಆಗುತ್ತಿತ್ತು ಎಂಬುದಾಗಿ ತಿಳಿಸಿದ್ದಾಳೆ.
ಈ ವೇಳೆ ಸಿಟ್ಟಾದಂತ ಆಟೋ ಚಾಲಕ ಗುಡ್ಡೆ ಭರತ್ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಯುವತಿ ತನ್ನ ಮೊಬೈಲ್ ನಿಂದ ಆಟೋ ಚಾಲಕನ ದರ್ಪವನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆ. ವೀಡಿಯೋ ಮಾಡುವ ವೇಳೆಯಲ್ಲಿ ಆಟೋ ಚಾಲಕ ಯುವತಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆದರೇ ಅದು ಸಾಧ್ಯವಾಗಿಲ್ಲ. ಈ ಎಲ್ಲಾ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು, ಬೆಂಗಳೂರು ನಗರ ಪೊಲೀಸರು ಸೂಕ್ತ ಕ್ರಮಕ್ಕೆ ಯುವತಿ ಒತ್ತಾಯಿಸಿದ್ದಾರೆ.
ಬಿಜೆಪಿ ಗೋಡ್ಸೆ ಭಾರತ ಮಾಡಲು ಹೊರಟಿದೆ, ಈ ಷಡ್ಯಂತ್ರವನ್ನು ನಾವು ಸೋಲಿಸಬೇಕು: ಸಿಎಂ ಸಿದ್ಧರಾಮಯ್ಯ
ಗಮನಿಸಿ : ಆಧಾರ್ ಕಾರ್ಡ್‌ನಲ್ಲಿ `ವಿಳಾಸ’ವನ್ನು ಎಷ್ಟು ಬಾರಿ ಬದಲಾಯಿಸಬಹುದು! ಇಲ್ಲಿದೆ ಮಾಹಿತಿ