Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರಧಾನಿ ಮೋದಿಯವರ 12 ವರ್ಷದ ಆಡಳಿತದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿ: ಸಂಸದ ಬಿ.ವೈ.ರಾಘವೇಂದ್ರ

ಸಾಗರದ ಉಳ್ಳೂರು-ತ್ಯಾಗರ್ತಿ ವಿದ್ಯುತ್ ಲೈನ್ ಕಾಮಗಾರಿ ತ್ವರಿತವಾಗಿ ಮುಗಿಸಿ: MP ಬಿವೈ ರಾಘವೇಂದ್ರಗೆ ಗ್ರಾಮಸ್ಥರ ಮನವಿ

ಪ್ರಧಾನಿ ಮೋದಿ ಸಾಧನೆ ಅನನ್ಯ, ಶಿವಮೊಗ್ಗ ಜಿಲ್ಲೆಗೆ ರೈಲ್ವೆ ಅಭಿವೃದ್ಧಿಗೆ ಸಿಂಹಪಾಲು: ಸಂಸದ ಬಿ.ವೈ.ರಾಘವೇಂದ್ರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬೆಂಗಳೂರು ಜನತೆಗೆ ಮತ್ತೊಂದು ಶಾಕ್: BMTC ದೈನಿಕ, ಮಾಸಿಕ ‘ಪಾಸ್ ದರ’ ಹೆಚ್ಚಳ, ನಾಳೆಯಿಂದಲೇ ಜಾರಿ | BMTC Bus Pass
KARNATAKA

BREAKING: ಬೆಂಗಳೂರು ಜನತೆಗೆ ಮತ್ತೊಂದು ಶಾಕ್: BMTC ದೈನಿಕ, ಮಾಸಿಕ ‘ಪಾಸ್ ದರ’ ಹೆಚ್ಚಳ, ನಾಳೆಯಿಂದಲೇ ಜಾರಿ | BMTC Bus Pass

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಸಾರಿಗೆ ಬಸ್ ದರವನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಶಾಕ್ ನೀಡಲಾಗಿತ್ತು. ಈ ಬೆನ್ನಲ್ಲೇ ಬೆಂಗಳೂರು ಜನತೆಗೆ ಮತ್ತೊಂದು ಶಾಕ್ ಎನ್ನುವಂತೆ ಬಿಎಂಟಿಸಿ ದೈನಿಕ ಹಾಗೂ ಮಾಸಿಕ ಬಸ್ ಪಾಸ್ ದರ ಹೆಚ್ಚಳ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ನೂತನ ಹೆಚ್ಚಳ ದರ ನಾಳೆಯಿಂದಲೇ ಜಾರಿಗೆ ಬರುತ್ತಿರುವುದಾಗಿ ತಿಳಿಸಿದೆ.

ಇಂದು ಬಿಎಂಟಿಸಿಯಿಂದ ಆದೇಶ ಹೊರಡಿಸಲಾಗಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿವಿಧ ವರ್ಗದ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಿತರಣೆ ಮಾಡುತ್ತಿದೆ. ಪ್ರಯಾಣಿಕರ ಬಸ್ ಟಿಕೆಟ್ ದರ ಪರಿಷ್ಕರಣೆಯಾದ ಹಿನ್ನಲೆಯಲ್ಲಿ ಸಂಸ್ಥೆಯ ಆರ್ಥಿ ದೃಷ್ಠಿಯಿಂದ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳ ದರಗಳನ್ನು ಹೆಚ್ಚಳ ಮಾಡುತ್ತಿದೆ. ದಿನಾಂಕ 09-01-2025ರಿಂದ ನೂತನ ಹೆಚ್ಚಳ ದರವು ಜಾರಿಯಾಗಲಿದೆ ಎಂದಿದೆ.

ಹೀಗಿದೆ ಪಾಸ್ ದರ ಹೆಚ್ಚಳದ ವಿವರ

  • ಸಾಮಾನ್ಯ ದೈನಿಕ ಪಾಸು ರೂ.70 ಇದ್ದದ್ದನ್ನು ರೂ.80ಕ್ಕೆ ಹೆಚ್ಚಳ ಮಾಡಲಾಗಿದೆ.
  • ಸಾಮಾನ್ಯ ಸಾಪ್ತಾಹಿಕ ವಾರದ ಪಾಸು ದರ ರೂ.300ರಿಂದ ರೂ.350ಕ್ಕೆ ಹೆಚ್ಚಳ ಮಾಡಲಾಗಿದೆ.
  • ಹಿರಿಯ ನಾಗರೀಕರ ಸಾಮಾನ್ಯ ಮಾಸಿಕ ಪಾಸು ದರ ರೂ.945 ಇದ್ದದ್ದನ್ನು ರೂ.1080ಕ್ಕೆ ಹೆಚ್ಚಳ ಮಾಡಲಾಗಿದೆ.
  • ಸಾಮಾನ್ಯ ಮಾಸಿಕ ಪಾಸು ದರ ರೂ.1050ರಿಂದ ರೂ.1200ಕ್ಕೆ ಹೆಚ್ಚಳ
  • ನೈಸ್ ರಸ್ತೆಯ ಸಾಮಾನ್ಯ ಮಾಸಿಕ ಪಾಸು ಟೋಲ್ ಶುಲ್ಕ ಒಳಗೊಂಡಂತೆ ರೂ.2200 ರಿಂದ ರೂ.2350ಕ್ಕೆ ಏರಿಕೆ ಮಾಡಲಾಗಿದೆ.

ರೂ.140/- ವಜ್ರ ದೈವಿಕ ಪಾಸು ಮತ್ತು ರೂ.2000/- ವಜ್ರ ಮಾಸಿಕ ಪಾಸು ಹೊಂದಿರುವ ಪ್ರಯಾಣಿಕರು ಸದಲಿ ಸೇವೆಯಲ್ಲಿ ಕೆಂ.ಬ.ನಿಲ್ದಾಣ/ಈ ಮಾರ್ಗದ ಇತರೆ ಬಸ್ ನಿಲುಗಡೆಗಳಿಂದ ಚಿಕ್ಕಬಳ್ಳಾಪುರದವರೆಗೂ ಹಾಗೂ ಚಿಕ್ಕಬಳ್ಳಾಪುರದಿಂದ ಕಂ.ಬ.ನಿಲ್ದಾಣದವರೆಗೂ ಪ್ರಯಾಣಿಸಲು ಹೆಚ್ಚುವಲ್ಲಿಯಾಗಿ ಪ್ರತಿ ಸುತ್ತುವಳಿಗೆ ರೂ.40/- (ಜಿಎಸ್ಟಿ ಒಳಗೊಂಡು) ಹಾಗೂ ಅನ್ವಯವಾಗುವ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯ.

ಸದರಿ ಪಾಸುದಾರರು, ಪಾಪಿನೊಂದಿಗೆ ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ಹಾಗೂ ಚಿಕ್ಕಬಳ್ಳಾಪುರದಿಂದ ದೇವನಹಳ್ಳಿಗೆ ಪ್ರಯಾಣಿಸಬೇಕಾದಲ್ಲಿ ಪ್ರತಿ ಸುತ್ತುವಳಗೆ ರೂ.40/- (ಜಿ.ಎಸ್.ಟಿ ಒಳಗೊಂಡು) ಹೆಚ್ಚುವರಿಯಾಗಿ ಪಾವತಿಸುವುದು.

ಸಾಮಾನ್ಯ ಮಾಸಿಕ ಪಾಸುದಾರರು ಈ ಸೇವೆಗಳಲ್ಲ ಸಾವಿನೊಂದಿಗೆ ಪ್ರಯಾಣಿಸಲು ಅವಕಾಶವಿರುವುದಿಲ್ಲ.

ಮೇಲ್ಕಂಡ ಎಲ್ಲಾ ಪಾಸುದಾರರು. ಟೋಲ್ ಮಾರ್ಗಗಳಲ್ಲಿ ಅನ್ವಯವಾಗುವ ಟೋಲ್ ಶುಲ್ಕಗಳನ್ನು ಪಾವತಿಸುವುದು ಕಡ್ಡಾಯವಾಗಿರುತ್ತದೆ.

ಸಂಸ್ಥೆಯು ವಿತರಿಸುವ ಯಾವುದೇ ಪಾಸುಗಳನ್ನು, ಸಂಸ್ಥೆಯ ವಿಶೇಷ (ಉದಾ: ಬೆಂಗಳೂರು ದರ್ಶಿನಿ, ಈಶ ಫೌಂಡೇಶನ್, ವಂಡರ್‌ಲಾ..) ಸೇವೆಗಳಲ್ಲಿ ಮಾನ್ಯ ಇರುವುದಿಲ್ಲ.

ಪರಿಷ್ಕೃತ ದರದ ಪಾಸುಗಳು ಸರಬರಾಜುಗೊಳ್ಳುವವರೆಗೆ ಪ್ರಸ್ತುತ ಇರುವ ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳ ಮೇಲೆ ಪರಿಷ್ಕೃತ ಪಾಲನ ದರದ ಮೊಹರು/ಸ್ಟಿಕ್ಟರ್‌ಗಳನ್ನು ಹಾಕಿ ವಿತರಣೆ ಮಾಡಲು ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಆರ್ಥಿಕ ಸಲಹೆಗಾರರು ಕಡ್ಡಾಯವಾಗಿ ಕ್ರಮ ಕೈಗೊಳ್ಳುವುದು.

ಪರಿಷ್ಕೃತ ಪಾಸಿನ ದರಗಳನ್ನು ಇ.ಟಿ.ಎಂ ಯಂತ್ರದಲ್ಲಿ ಹಾಗೂ ಟುಮ್ಯಾಕ್ ಮೊಬೈಲ್ ಆಫ್ (ಡಿಜಿಟಲ್ ಪಾಸುಗಳು) ನಲ್ಲಿ ಅಳವಡಿಸಲು ಮುಖ್ಯ ಗಣಕ ವ್ಯವಸ್ಥಾಪಕರು ಅಗತ್ಯ ಕ್ರಮ ಕೈಗೊಳ್ಳುವುದು.

ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿಗಳು ಪರಿಷ್ಕೃತ ದರಗಳ ಪಾಸುಗಳನ್ನು ಸರಬರಾಜುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾಲಿಗಳು, ಹಿಲಿಯ/ಘಟಕ ವ್ಯವಸ್ಥಾಪಕರುಗಳು ಹಾಗೂ ಬಸ್ ನಿಲ್ದಾಣಾಧಿಕಾಲಗಳು ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳ ದರ ಪರಿಷ್ಕರಣೆಯ ಬಗ್ಗೆ ಸೂಚನಾ ಫಲಕದಲ್ಲಿ ಪ್ರಕಟಸಿ ನಿರ್ವಾಹಕ/ಚಾಲಕ/ಚಾಲಕ ಕಂ ನಿರ್ವಾಹಕ ಹಾಗೂ ಇತರ ಸಂಬಂಧಪಟ್ಟವರ ಗಮನಕ್ಕೆ ತಂದು ಸಾಮಾನ್ಯ ಸ್ಥಾಯಿ ಆದೇಶ ಜಾಲಿಯಲ್ಲಿ ಯಾವುದೇ ತಪ್ಪುಗಳಿಗೆ ಅವಕಾಶವಾಗದಂತೆ ಎಚ್ಚರವಹಿಸುವುದು ಅಂತ ತಿಳಿಸಿದೆ.

ವರದಿ: ವಸಂತ ಬಿ ಈಶ್ವರಗೆರೆ

ಭರ್ತಿಯಾದ ಬಯಲು ಸೀಮೆಯ ಜೀವನಾಡಿ ‘ವಿವಿ ಸಾಗರ’ ಅಣೆಕಟ್ಟು: ಬಾಗಿನ ಅರ್ಪಣೆಗೆ ಸಿಎಂ, ಡಿಸಿಎಂಗೆ ಆಹ್ವಾನ

ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳಕ್ಕೆ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

ಮುಂಬೈನಲ್ಲಿ ಮೊದಲ HMPV ವೈರಸ್ ಕೇಸ್ ಪತ್ತೆ: ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆ | HMPV Case

Share. Facebook Twitter LinkedIn WhatsApp Email

Related Posts

ಪ್ರಧಾನಿ ಮೋದಿಯವರ 12 ವರ್ಷದ ಆಡಳಿತದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿ: ಸಂಸದ ಬಿ.ವೈ.ರಾಘವೇಂದ್ರ

2 Mins Read

ಸಾಗರದ ಉಳ್ಳೂರು-ತ್ಯಾಗರ್ತಿ ವಿದ್ಯುತ್ ಲೈನ್ ಕಾಮಗಾರಿ ತ್ವರಿತವಾಗಿ ಮುಗಿಸಿ: MP ಬಿವೈ ರಾಘವೇಂದ್ರಗೆ ಗ್ರಾಮಸ್ಥರ ಮನವಿ

2 Mins Read

ಪ್ರಧಾನಿ ಮೋದಿ ಸಾಧನೆ ಅನನ್ಯ, ಶಿವಮೊಗ್ಗ ಜಿಲ್ಲೆಗೆ ರೈಲ್ವೆ ಅಭಿವೃದ್ಧಿಗೆ ಸಿಂಹಪಾಲು: ಸಂಸದ ಬಿ.ವೈ.ರಾಘವೇಂದ್ರ

2 Mins Read
Recent News

ಪ್ರಧಾನಿ ಮೋದಿಯವರ 12 ವರ್ಷದ ಆಡಳಿತದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿ: ಸಂಸದ ಬಿ.ವೈ.ರಾಘವೇಂದ್ರ

ಸಾಗರದ ಉಳ್ಳೂರು-ತ್ಯಾಗರ್ತಿ ವಿದ್ಯುತ್ ಲೈನ್ ಕಾಮಗಾರಿ ತ್ವರಿತವಾಗಿ ಮುಗಿಸಿ: MP ಬಿವೈ ರಾಘವೇಂದ್ರಗೆ ಗ್ರಾಮಸ್ಥರ ಮನವಿ

ಪ್ರಧಾನಿ ಮೋದಿ ಸಾಧನೆ ಅನನ್ಯ, ಶಿವಮೊಗ್ಗ ಜಿಲ್ಲೆಗೆ ರೈಲ್ವೆ ಅಭಿವೃದ್ಧಿಗೆ ಸಿಂಹಪಾಲು: ಸಂಸದ ಬಿ.ವೈ.ರಾಘವೇಂದ್ರ

ಸಾಗರದ ಮಾರಿಕಾಂಬೆ ಸನ್ನಿಧಿಗೆ ಮಂಗಳೂರು ಡಿಆರ್ ರಮೇಶ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ: ಪ್ರತಿಷ್ಠಾನದಿಂದ ಸನ್ಮಾನ

State News
KARNATAKA

ಪ್ರಧಾನಿ ಮೋದಿಯವರ 12 ವರ್ಷದ ಆಡಳಿತದಲ್ಲಿ ದೇಶದ ಸರ್ವಾಂಗೀಣ ಅಭಿವೃದ್ಧಿ: ಸಂಸದ ಬಿ.ವೈ.ರಾಘವೇಂದ್ರ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಕೇಂದ್ರ ಸರ್ಕಾರದ ಸಾಲು ಸಾಲು ಅಭಿವೃದ್ಧಿ ಕೆಲಸಗಳು ಜನರನ್ನು ತಲುಪಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಹನ್ನೆರಡು ವರ್ಷಗಳ…

ಸಾಗರದ ಉಳ್ಳೂರು-ತ್ಯಾಗರ್ತಿ ವಿದ್ಯುತ್ ಲೈನ್ ಕಾಮಗಾರಿ ತ್ವರಿತವಾಗಿ ಮುಗಿಸಿ: MP ಬಿವೈ ರಾಘವೇಂದ್ರಗೆ ಗ್ರಾಮಸ್ಥರ ಮನವಿ

ಪ್ರಧಾನಿ ಮೋದಿ ಸಾಧನೆ ಅನನ್ಯ, ಶಿವಮೊಗ್ಗ ಜಿಲ್ಲೆಗೆ ರೈಲ್ವೆ ಅಭಿವೃದ್ಧಿಗೆ ಸಿಂಹಪಾಲು: ಸಂಸದ ಬಿ.ವೈ.ರಾಘವೇಂದ್ರ

ಸಾಗರದ ಮಾರಿಕಾಂಬೆ ಸನ್ನಿಧಿಗೆ ಮಂಗಳೂರು ಡಿಆರ್ ರಮೇಶ್ ಭೇಟಿ, ವಿಶೇಷ ಪೂಜೆ ಸಲ್ಲಿಕೆ: ಪ್ರತಿಷ್ಠಾನದಿಂದ ಸನ್ಮಾನ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.