ಬೆಂಗಳೂರು : ಬಿಸಿಲಿನ ಬೇಗೆಗೆ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಬೇಸಿಗೆ ಬಿಸಿಲು ಹೆಚ್ಚಾದಂತೆ ಹಣ್ಣು, ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ.
ಹಣ್ಣು ತರಕಾರಿಗಳ ಬೆಲೆ ಹೆಚ್ಚಾಗುತ್ತಿದ್ದು, ಸೌತೆ ಕಾಯಿ, ನಿಂಬೆ ಹಣ್ಣು ಸೇರಿದಂತೆ ಅಗತ್ಯ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ.ದಿನದಿಂದ ದಿನಕ್ಕೆ ಬಿಸಿಲಿನ ತಾಪವು ಹೆಚ್ಚಾಗುತ್ತಿದ್ದು, ಬಿಸಿಲಿನ ಪ್ರಮಾಣ ಇದೇ ರೀತಿ ಹೆಚ್ಚಾಗುತ್ತಿದ್ದರೆ ತರಕಾರಿಯ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಬೀನ್ಸ್ ಕೆಜಿಗೆ 60 ರೂ. ಇದ್ದರೆ ಮೂಲಂಗಿ 35 ರೂ, ಹಾಗಲಕಾಯಿ 60 ರೂ, ಈರುಳ್ಳಿ 40 ರೂ. ಬೆಂಡೆಕಾಯಿ 30 ರೂ. ಬೆಳ್ಳಳ್ಳಿ 300 ರೂ. ಮೆಣಸಿನಕಾಯಿ 60 ರೂ, ನುಗ್ಗೆಕಾಯಿ 80 ರೂ.ಗೆ ಮಾರಟವಾಗುತ್ತಿದೆ.