ಮಂಡ್ಯ: ರಾಜ್ಯದಲ್ಲಿ ಮತ್ತೊಂದು ಕೀಚಕ ಕೃತ್ಯ ಎನ್ನುವಂತೆ 8 ವರ್ಷದ ಬಾಲಕಿಯ ಮೇಲೆ ಮೂವರು ಗ್ಯಾಂಗ್ ರೇಪ್ ಮಾಡಿರುವಂತ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯೊಬ್ಬಳಿಗೆ ಕೇಕ್ ಕೊಡಿಸಿ, ಚಾಕು ತೋರಿಸಿ ಶಾಲಾ ಆವರಣದಲ್ಲೇ ಮೂವರು ಕಾಮುಕರು ಗ್ಯಾಂಗ್ ರೇಪ್ ಮಾಡಿದ್ದಾರೆ.
ಜನವರಿ 31ರಂದು ನಡೆದಿದ್ದಂತ ಘಟನೆಯ ಬಳಿ 2 ದಿನ ಕಳೆದರೂ 8 ವರ್ಷದ ಬಾಲಕಿಗೆ ಹೊಟ್ಟೆನೋವು, ರಕ್ತಸ್ತ್ರಾವ ಕಡಿಮೆಯಾಗದ ಕಾರಣ ಬಾಲಕಿಯ ಚಿಕ್ಕಮ್ಮ ವಿಚಾರಿಸಿದಾಗ ಕೀಚಕ ಕೃತ್ಯ ಹೊರ ಬಂದಿದೆ.
ಅಸ್ವಸ್ಥಗೊಂಡ ಬಾಲಕಿಯನ್ನು ಮಂಡ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಮಂಡ್ಯ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
SHOCKING : ಈ `ಎಣ್ಣೆ’ ಸೇವನೆಯಿಂದ ಮಧುಮೇಹ, ಕ್ಯಾನ್ಸರ್, ಹೃದಯಾಘಾತದ ಅಪಾಯ ಹೆಚ್ಚಳ.!