ಬೆಂಗಳೂರು: ಬಾಯ್‌ಫ್ರೆಂಡ್ ಜೊತೆಗೆ ಸೇರಿ ಮಗುವಿನ ಮೇಲೆ ತಾಯಿಯಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ವೀರಭದ್ರನಗರದಲ್ಲಿ ನಡೆದಿದೆ ಎನ್ನಲಾಗಿದೆ, ಮಗುವನ್ನು ಕೂಡಿ ಹಾಕಿ ದಿನನಿತ್ಯ ಸ್ಕ್ರಾರೀನ್ ಎನ್ನುವ ಮಹಿಳೆ ಹಲ್ಲೆ ಮಾಡಿದ್ದಾಳೆ ಎನ್ನಲಾಗಿದೆ. ಮಗುವಿನ ಹೊಟ್ಟೆಯನ್ನು ಕಚ್ಚಿ ಸ್ಕ್ರಾರೀನ್ ಗಾಯಗೊಳಿಸಿದ್ದಾಳೆ ಎನ್ನಲಾಗಿದೆ.
ಬೆಂಗಳೂರು ಕೆಫೆ ಸ್ಫೋಟದ ಶಂಕಿತ ಉಗ್ರ ಶಂಕಿತ ಉಗ್ರ ಪಕ್ಕದ ರಾಜ್ಯಕ್ಕೆ ಪರಾರಿ: ವರದಿ
ಅಪರಿಚಿತ ಮಹಿಳೆಯನ್ನು ‘ಡಾರ್ಲಿಂಗ್’ ಎಂದು ಕರೆಯುವುದು ಲೈಂಗಿಕ ಕಿರುಕುಳ: ಹೈಕೋರ್ಟ್ ಮಹತ್ವದ ಅಭಿಪ್ರಾಯ!
ಇನ್ನೂ ಘಟನೆಯ ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತನ್ನ ತಾಯಿ ಹೇಗೆಲ್ಲ ತನ್ನ ನೋಡಿಕೊಳ್ಳುತ್ತಿದ್ದಳು ಎನ್ನುವುದನ್ನು ಕಾಣಬಹುದಾಗಿದೆ. ಇದಲ್ಲದೇ ಕುಕ್ಕರ್‌ನಿಂದ ಅಮ್ಮ ಮತ್ತು ಅಂಕಲ್ ಹೊಡೆದಿದ್ದಾರೆ ಅಂತ ಮಗು ಹೇಳಿದೆ. ಇದಲ್ಲೇ ತನ್ನ ಅಮ್ಮ ನೀನು ನನಗೆ ಬೇಡ ಅಂತ ಹೇಳುತ್ತಾಳೆ ಅಂಥ ಮಗು ಹೇಳಿದೆ. ಇದಲ್ಲದೇ ಸ್ಕ್ರಾರೀನ್ ತನ್ನ ಪ್ರಿಯಕರ ಜೊತೆಗೆ ಸೇರಿ ಈ ಘಟನೆ ಮಾಡಿದ್ದಾಳೆ ಎನ್ನಲಾಗಿದೆ. ಇನ್ನೂ ಪ್ರಿಯಕರ ಸ್ಕ್ರಾರೀನ್ ನನ್ನ ಪ್ರೇಯಸಿ ಅಂತ ಹೇಳಿದೆ. ಸ್ಕ್ರಾರೀನ್ ಇಲ್ಲ ಆತ ನನ್ನ ಅಣ್ಣ ಅಂತ ಹೇಳಿದ್ದಾಳೆ. ತಾಯಿಯ ಈ ವರ್ತನೆಯನ್ನು ನೋಡಿರುವ ಮನೆಯ ಅಕ್ಕ ಪಕ್ಕದವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ನಾನು ಹೀಗೆ ಮಾಡಿಲ್ಲ, ನಾನು ಮಗು ಬುದ್ದಿ ಕಲಿಯಲು ಹೀಗೆ ಮಾಡಿದ್ದೇನೆ. ಮೂರು ನಾಲ್ಕು ತಿಂಗಳಿನಿಂದ ನನಗೆ ಕೆಲಸ ಇರಲಿಲ್ಲ. ಈಗ ನಾನು ಕೆಲಸಕ್ಕೆ ಹೋಗುತ್ತಿದ್ದೇನೆ, ಹೀಗಾಗಿ ಮಗುವನ್ನು ನಾನು ಮನೆಯಲ್ಲಿ ಮಗುವನ್ನು ಬಿಟ್ಟು ಹೋಗಿದ್ದೇನೆ ಅಂತ ಸ್ಕ್ರಾರೀನ್ ಹೇಳಿದ್ದಾಳೆ. ಇದಲ್ಲದೇ ಸ್ಕ್ರಾರೀನ್ ಮೊದಲ ಗಂಡನಿಗೆ ವಿಚ್ಚೇಧನ ನೀಡಿ, ಇನ್ನೊಬ್ಬರ ಜೊತೆಗೆ ಸಂಸಾರ ನಡೆಸುತ್ತಿದ್ದಾಳೆ ಎನ್ನಲಾಗಿದೆ.