ರಾಯಚೂರು: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಸನ್ನಿಧಿಯಾಗಿದೆ. ಈ ಮಂತ್ರಾಲಯದಲ್ಲಿ ‘ಪರಿಮಳ ತೀರ್ಥಂ’ ಪುಷ್ಕರಣಿ ಉದ್ಘಾಟನೆಗೊಂಡಿದೆ. ಇದಕ್ಕಾಗಿ ಡಾ. ಕೆ. ಪ್ರಕಾಶ್ ಶೆಟ್ಟಿ ದಂಪತಿಗಳಿಂದ 4 ಕೋಟಿಗಳ ಮಹಾದಾನ ಮಾಡಿದ್ದಾರೆ.
ಇಂದು ಮಂತ್ರಾಲಯದ ಪವಿತ್ರ ಭೂಮಿಯಲ್ಲಿ, ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ, ಭಕ್ತರು ಹಾರೈಸಿದ್ದ ಮಹತ್ವದ ಯೋಜನೆ ಸಾಕಾರಗೊಂಡಿದೆ. ಇಲ್ಲಿಗೆ ತೀರ್ಥಸ್ನಾನಕ್ಕಾಗಿ ಅಗತ್ಯವಾಗಿದ್ದ ‘ಪರಿಮಳ ತೀರ್ಥಂ’ ಪುಷ್ಕರಣಿ ಇಲ್ಲದ ಕೊರತೆಯನ್ನು ನಿವಾರಿಸುವಂತೆ, ಅಲಂಕೃತವಾಗಿ, ಸೌಕರ್ಯ ಸಮೇತ ನಿರ್ಮಿಸಲ್ಪಟ್ಟ ಈ ಅದ್ಭುತ ಪುಷ್ಕರಣಿಯನ್ನು ಉದ್ಘಾಟಿಸಲಾಯಿತು.
ಈ ಮಹತ್ತಾದ ಸೇವೆಯನ್ನು, ಮಂತ್ರಾಲಯದ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಜಿಯವರೊಂದಿಗೆ, ಡಾ. ಕೆ. ಪ್ರಕಾಶ್ ಶೆಟ್ಟಿ ಹಾಗೂ ಅವರ ಪತ್ನಿ ಅಶಾ ಪ್ರಕಾಶ್ ಶೆಟ್ಟಿ ಅವರು ತಮ್ಮ ಹೃದಯಪೂರ್ವಕ ದೇಣಿಗೆಯಿಂದ ನೆರವೇರಿಸಿದ್ದಾರೆ.
ಸುಮಾರು 4 ಕೋಟಿಗಳ ವೆಚ್ಚದಲ್ಲಿ ರೂಪುಗೊಂಡಿರುವ ಈ ಯೋಜನೆ, ಭಕ್ತರ ಆತ್ಮಶಾಂತಿ ಮತ್ತು ಸೌಕರ್ಯಕ್ಕಾಗಿ ನಿರ್ಮಿಸಲ್ಪಟ್ಟ ಒಂದು ಅನನ್ಯ ಕಾಣಿಕೆ. ಇಂದು ಶ್ರೀಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಜಿಯವರ ಸಾನ್ನಿಧ್ಯದಲ್ಲಿ, ಡಾ. ಪ್ರಕಾಶ್ ಶೆಟ್ಟಿ ಮತ್ತು ಅಶಾ ಪ್ರಕಾಶ್ ಶೆಟ್ಟಿ ದಂಪತಿಗಳು ಸ್ವತಃ ಉದ್ಘಾಟನೆ ನೆರವೇರಿಸಿ, ಭಕ್ತ ಸಮುದಾಯಕ್ಕೆ ಈ ಮಹಾನ್ ಕಾಣಿಕೆಯನ್ನು ಅರ್ಪಿಸಿದರು.
ಮಂತ್ರಾಲಯದ ಪವಿತ್ರ ವಾತಾವರಣಕ್ಕೆ ಹೊಸ ಶೋಭೆ ನೀಡುವ ಈ ‘ಪರಿಮಳ ತೀರ್ಥಂ’ ಪುಷ್ಕರಣಿ, ಧರ್ಮ, ಸೇವೆ ಮತ್ತು ದಾನದ ಮೌಲ್ಯಗಳನ್ನು ಜೀವಂತವಾಗಿ ತೋರಿಸುವ ಉದಾಹರಣೆ. ಡಾ. ಪ್ರಕಾಶ್ ಶೆಟ್ಟಿ ಮತ್ತು ಅಶಾ ಪ್ರಕಾಶ್ ಶೆಟ್ಟಿ ದಂಪತಿಗಳ ಈ ಮಹಾದಾನ, ಅವರ ಭಕ್ತಿಭಾವ ಮತ್ತು ಮಾನವೀಯತೆಯ ಜೀವಂತ ನಿದರ್ಶನವಾಗಿದ್ದು, ಮಂತ್ರಾಲಯದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲಿದೆ.
ಆ.15ರಂದು ಶಾಲಾ-ಕಾಲೇಜುಗಳಲ್ಲಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮ ಅನುಷ್ಠಾನ ಕಡ್ಡಾಯ: ರಾಜ್ಯ ಸರ್ಕಾರ ಆದೇಶ
BREAKING: ನ್ಯಾಯಾಲಯದ ಆದೇಶದಂತೆ ನಟ ವಿಷ್ಣುವರ್ಧನ್ ಸಮಾಧಿ ಸ್ಥಳ ತೆರವು: ವಕೀಲ ಕಾರ್ತಿಕ್ ಸ್ಪಷ್ಟನೆ