ಮಂಗಳೂರು: ಬಿಜೆಪಿಯಿಂದ ನಡೆಸಲಾಗುತ್ತಿರುವಂತ ಧರ್ಮಸ್ಥಳದಲ್ಲಿನ ಸಮಾವೇಶದ ಭಾಷಣದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಮಹಾ ಎಡವಟ್ಟು ಮಾಡಿದದಾರೆ. ಬಿವೈ ವಿಜಯೇಂದ್ರ ಬದಲು ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿಯವರೇ ಎಂಬುದಾಗಿ ಉಲ್ಲೇಖಿಸಿದ್ದು ಎಲ್ಲರನ್ನು ಗೊಂದಲಕ್ಕೆ ದೂಡಿತ್ತು.
ರಾಜ್ಯ ಬಿಜೆಪಿ ನಾಯಕರಿಂದ ಧರ್ಮಸ್ಥಳ ಚಲೋ ಬಳಿಕ, ಇಂದು ಧರ್ಮಸ್ಥಳದಲ್ಲಿ ಸಮಾವೇಶ ನಡೆಸಲಾಗುತ್ತಿದೆ. ಎಸ್ ಡಿ ಎಂ ಕಾಲೇಜು ಆವರಣದಲ್ಲಿ ನಡೆಯುತ್ತಿರುವಂತ ಧರ್ಮಸ್ಥಳ ಚಲೋ ಯಾತ್ರೆಯ ಸಮಾವೇಶದಲ್ಲಿ ಇಂದು ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿದರು.
ತಮ್ಮ ಭಾಷಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರೇ ಎಂಬುದಾಗಿ ಕರೆದು ಗೊಂದಲಕ್ಕೆ ದೂಡಿದರು. ಬಳಿಕ ಎಚ್ಚೆತ್ತುಕೊಂಡಂತ ಅವರು, ಕ್ಷಮಿಸಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರೇ ಎಂಬುದಾಗಿ ತಮ್ಮ ತಪ್ಪು ತಿದ್ದಿಕೊಂಡು ಭಾಷಣ ಮುಂದುವರೆಸಿದರು.
ಹಾಸನ ಜಿಲ್ಲೆಗೆ ‘ಗ್ಯಾರಂಟಿ ಯೋಜನೆ’ಗಳಿಗಾಗಿ 3105.78 ಕೋಟಿ ಹಣ ಬಿಡುಗಡೆ: ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ