ಪಂಜಾಬ್: ಆಪರೇಷನ್ ಸಿಂಧೂರ್’ ಕೇವಲ ನಿಯಮಿತ ಸಶಸ್ತ್ರ ಪಡೆಗಳ ಅಭಿಯಾನವಲ್ಲ; ಇದು ಭಾರತದ ನೀತಿ, ಉದ್ದೇಶ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಸಂಗಮವಾಗಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದರು.
ಇಂದು ಪಂಜಾಬ್ ನ ಆಡಂಪುರ ವಾಯುನೆಲೆಯಲ್ಲಿ ಐಎಎಫ್ ವಾಯುಪಡೆಯವರನ್ನುದ್ದೇಶಿಸಿ ಮಾತನಾಡಿದಂತ ಅವರು, ಆಪರೇಷನ್ ಸಿಂಧೂರ್ ಭಾರತದ ನೀತಿ, ಉದ್ದೇಶ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಸಂಗಮವಾಗಿದೆ ಎಂದರು.
#WATCH | At the Adampur Air Base, PM Narendra Modi says "…Operation Sindoor is not a normal military operation. It is the confluence of India's policy, intention and decisiveness. India is the land of Buddha as well as Guru Gobind Singh ji…When the sindoor' of our sisters and… pic.twitter.com/VAaYmMzvF1
— ANI (@ANI) May 13, 2025
ಭಾರತದ ಹೊಸ ರೂಪ, ಅದರ ಹೊಸ ವ್ಯವಸ್ಥೆಯನ್ನು ಜಗತ್ತು ಅರ್ಥಮಾಡಿಕೊಳ್ಳುತ್ತಿದೆ ಎಂದು ಪ್ರಧಾನಿ ಆಡಂಪುರ ವಾಯುನೆಲೆಯಲ್ಲಿ ಐಎಎಫ್ ವಾಯುಪಡೆಯವರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ, “ಮೂರನೆಯದಾಗಿ, ಭಯೋತ್ಪಾದನೆಯನ್ನು ಬೆಂಬಲಿಸುವ ಸರ್ಕಾರ ಮತ್ತು ಭಯೋತ್ಪಾದನೆಯ ಮಾಸ್ಟರ್ಮೈಂಡ್ಗಳನ್ನು ನಾವು ಪ್ರತ್ಯೇಕ ಘಟಕಗಳಾಗಿ ನೋಡುವುದಿಲ್ಲ. ಭಾರತದ ಹೊಸ ರೂಪ, ಅದರ ಹೊಸ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳುವ ಮೂಲಕ ಜಗತ್ತು ಕೂಡ ಮುಂದುವರಿಯುತ್ತಿದೆ” ಎಂದು ಹೇಳಿದರು.