ಶಿವಮೊಗ್ಗ: ಜಿಲ್ಲೆಯ ಉಳ್ಳೂರಿನ ಮತ್ತಿಭಾವಿ ಗ್ರಾಮದ ರೈತರೊಬ್ಬರು ತಮ್ಮ ಮನೆಯ ಮುಂದಿನ ಗದ್ದೆಯಲ್ಲಿ ನಿಲ್ಲಿಸಿದ್ದಂತ ಟಿಲ್ಲರ್ ನ ಇಂಧನ ಟ್ಯಾಂಕ್ ಕ್ಯಾಪ್ ತೆರೆದು ಉಪ್ಪು ಸುರಿದು ಕಿಡಿಗೇಡಿ ಕೃತ್ಯ ಎಸಗಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಜಿರೆ ಗ್ರಾಮದ ಮತ್ತಿಭಾವಿಯ ರೈತ ಪ್ರೇಮ್ ಕುಮಾರ್ ತಮ್ಮ ಗದ್ದೆಯಲ್ಲಿ ಟಿಲ್ಲರ್ ನಿಲ್ಲಿಸಿದ್ದರು. ಜುಲೈ.7ರಂದು ರಾತ್ರಿ ಕಿಡಿಗೇಡಿಗಳು ಟಿಲ್ಲರ್ ಇಂಧನ ಟ್ಯಾಂಕ್ ಓಪನ್ ಮಾಡಿ ಹಾಳಾಗಲಿ ಎಂಬ ಉದ್ದೇಶದಿಂದ ಉಪ್ಪ ಹಾಕಿದ್ದಾರೆ.
ಬೆಳಗ್ಗೆ ಎದ್ದು ಟಿಲ್ಲರ್ ಬಳಿ ತೆರಳಿದಾಗ ಇಂಧನ ಟ್ಯಾಂಕರ್ ಮೇಲೆ ಉಪ್ಪು ಬಿದ್ದೀರೋದು ಕಂಡು ಬಂದಿದೆ. ಪರಿಶೀಲಿಸಿದಾಗ ಇಂಧನ ಟ್ಯಾಂಕರ್ ಒಳಗೆ ಉಪ್ಪು ಸುರಿದಿರುವುದು ತಿಳಿದು ಬಂದಿದೆ. ಕಿಡಿಗೇಡಿಗಳ ಕೃತ್ಯಕ್ಕೆ ರೈತ ಪ್ರೇಮ್ ಕುಮಾರ್ ಶಾಕ್ ಆಗಿದ್ದಾರೆ. ಅಲ್ಲದೇ ಕಿಡಿಗೇಡಿಗಳ ಕೃತ್ಯದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಅಂದಹಾಗೇ ಲಕ್ಷಾಂತರ ಮೌಲ್ಯದ ಟಿಲ್ಲರ್ ಇದಾಗಿದ್ದು, ಇದೀಗ ಇಂಧನ ಟ್ಯಾಂಕರ್ ಒಳಗೆ ಉಪ್ಪು ಹಾಕಿರುವುದರಿಂದ ರಿಪೇರಿ ಮಾಡೋದಕ್ಕೆ ಸಾವಿರಾರು ರೂಪಾಯಿ ಖರ್ಚಾಗಲಿದೆ. ಹೀಗಾಗಿ ರೈತ ಪ್ರೇಮ್ ಕುಮಾರ್ ಕಿಡಿಗೇಡಿಗಳು ಮಾಡಿದಂತ ಕೃತ್ಯದಿಂದಾಗಿ ಸಂಕಷ್ಟಕ್ಕೆ ಈಡಾಗಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಕಾಂಗ್ರೆಸ್ ಪಕ್ಷದಿಂದ ಸಿಎಂ ಪರಮಾಪ್ತ ಜಿ.ವಿ ಸೀತಾರಾಮ್ 6 ವರ್ಷ ಉಚ್ಚಾಟನೆ
ಬೆಂಗಳೂರಲ್ಲಿ ಮರದ ಕೊಂಬೆ ಮುರಿದು ವೃದ್ಧನ ಸೊಂಟದ ಮೂಳೆ ಮುರಿತ : ‘BBMP’ ಸಿಬ್ಬಂದಿ ವಿರುದ್ಧ ‘FIR’ ದಾಖಲು