ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಾಲ್ಕು ದಿನದ ಅಂತರದಲ್ಲಿ ಕಾಡಾನೆಗೆ ಇಬ್ಬರು ಬಲಿಯಾಗಿದ್ದಾರೆ. ಇಂತಹ ಕಾಡಾನೆ ಸೆರೆಹಿಡಿಯಲು ವಿಫಲವಾದಂತ ಅರಣ್ಯ ಇಲಾಖೆ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ. ನಾಳೆ ಬಾಳೆಹೊನ್ನೂರು ಹಾಗೂ ಖಾಂಡ್ಯ ಹೋಬಳಿ ಬಂದ್ ಗೆ ಕರೆ ನೀಡಲಾಗಿದೆ.
ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಇಂದು ಕಾಡಾನೆಗೆ ಮತ್ತೊಂದು ಬಲಿಯಾಗಿದೆ. ಕಾಫಿ ತೋಟಕ್ಕೆ ಹೋಗಿ ವಾಪಾಸ್ ಆಗುತ್ತಿದ್ದಂತ ಅಂಡವಾನೆ ಗ್ರಾಮ ರೈತ ಸುಬ್ಬೇಗೌಡ(55) ಬಲಿಯಾಗಿದ್ದಾನೆ. ಕಳೆದ ನಾಲ್ಕು ದಿನಗಳಲ್ಲಿ ಎರಡನೇ ಬಲಿ ಇದಾಗಿದೆ.
ಕಾಡಾನೆ ಸೆರೆ ಹಿಡಿಯಲು ಮನವಿ ಮಾಡಿದ್ದರೂ ಅರಣ್ಯ ಇಲಾಖೆಯಿಂದ ಮನವಿಗೆ ಸ್ಪಂದಿಸದ ಕಾರಣ, ನಾಳೆ ಬಾಳೆಹೊನ್ನೂರು, ಖಾಂಡ್ಯ ಹೋಬಳಿ ಬಂದ್ ಗೆ ಕರೆ ನೀಡಲಾಗಿದೆ. ನಾಳೆ ಈ ಎರಡು ಹೋಬಳಿಯಲ್ಲಿ ಬಂದ್ ಗೆ ರೈತ ಸಂಘಟನೆ, ಕನ್ನಡ ಸಂಘಟನೆಗಳು ನೀಡಿದ್ದಾವೆ. ಕೊಪ್ಪ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಒಂದು ದಿನದಲ್ಲಿ 50 ಬಾರಿ ಮಾತ್ರ ‘UPI ಆಪ್’ನಲ್ಲಿ ‘ಬ್ಯಾಂಕ್ ಬ್ಯಾಲೆನ್ಸ್ ಚೆಕ್’ಗೆ ಅವಕಾಶ: ಅ.1ರಿಂದ ಹೊಸ ನಿಯಮ
ರಾಜೇಂದ್ರ ಚೋಳ I ಗೌರವಾರ್ಥ ‘1000 ರೂ.ನಾಣ್ಯ’ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ