Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ‘ಬ್ಲ್ಯಾಕ್ ಸಂಡೆ’: ಪ್ರತ್ಯೇಕ ಅಪಘಾತಗಳಲ್ಲಿ 10 ಮಂದಿ ಸಾವು

23/03/2026 5:53 AM

ಕೇಂದ್ರದ ಆದೇಶದ ಬೆನ್ನಲ್ಲೇ ಹೋಟೆಲ್ ಗಳಿಗೆ ಇಂದಿನಿಂದ ಗ್ಯಾಸ್ ಪೂರೈಕೆ ಹೆಚ್ಚಳ : 12 ದಿನಗಳ ಸಂಕಷ್ಟಕ್ಕೆ ಪರಿಹಾರ !

23/03/2026 5:48 AM

BIG NEWS : 114 ದೇಶಗಳ ಶಾಲಾ ಮಕ್ಕಳಿಗೆ `ಮೊಬೈಲ್ ಬಳಕೆ ಬ್ಯಾನ್’ : ಯುನೆಸ್ಕೋ ವರದಿ

23/03/2026 5:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ: 34,863 ಖಾಲಿ ಹುದ್ದೆಗಳ ಭರ್ತಿಗೆ ಸಿಎಂ ಸಿದ್ಧರಾಮಯ್ಯ ಸೂಚನೆ | Karnataka Government Jobs
KARNATAKA

ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ: 34,863 ಖಾಲಿ ಹುದ್ದೆಗಳ ಭರ್ತಿಗೆ ಸಿಎಂ ಸಿದ್ಧರಾಮಯ್ಯ ಸೂಚನೆ | Karnataka Government Jobs

By kannadanewsnow0907/10/2024 6:24 PM

ಬೆಂಗಳೂರು : ರಾಜ್ಯದಲ್ಲಿ ನೇಮಕಾತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತಂದು ಯುಪಿಎಸ್ಸಿ ಮಾದರಿಯಲ್ಲಿ ಏಕರೀತಿಯ ನೇಮಕಾತಿ ವ್ಯವಸ್ಥೆಯನ್ನು ಜಾರಿಗೊಳಿಸುವ ಕುರಿತು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ಅವರು ಇಂದು ಕೃಷ್ಣಾದಲ್ಲಿ ಸರ್ಕಾರದ ಹಂತದಲ್ಲಿ ವಿವಿಧ ಇಲಾಖೆಗಳ ನೇಮಕಾತಿಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು.

ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಕಳೆದ ವಾರ ಎಲ್ಲಾ ನೇಮಕಾತಿ ಪ್ರಾಧಿಕಾರಗಳ ಸಭೆಯನ್ನು ನಡೆಸಲಾಗಿದೆ. ಸಭೆಯಲ್ಲಿ ಕೈಗೊಂಡಿರುವ ಶಿಫಾರಸುಗಳನ್ನು ಪರಿಶೀಲಿಸಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

ಯುಪಿಎಸ್ಸಿಯಲ್ಲಿ ಕೇವಲ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ಹುದ್ದೆಗಳನ್ನು ಮಾಡಲು ನೇಮಕಾತಿ ಮಾಡಲಾಗುತ್ತಿದೆ. ಇದೇ ರೀತಿ ಕೆಪಿಎಸ್‌ಸಿ ಕೇವಲ ಗ್ರೂಪ್‌ ಎ ಮತ್ತು ಬಿ ಮಾತ್ರ ನೇಮಕಾತಿ ಪ್ರಕ್ರಿಯೆ ನಡೆಸಿ, ಗ್ರೂಪ್‌ ಸಿಯಂತಹ ಬೇರೆ ನೇಮಕಾತಿಗಳನ್ನು ಕೆಇಎ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ.

371ಜೆ ಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿರುವ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು 2023ರಲ್ಲಿ ಹೊರಡಿಸಿರುವ ಸುತ್ತೋಲೆಯನ್ನು ಅನುಸರಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

ಖಾಲಿ ಹುದ್ದೆ ನೇಮಕಾತಿಗೆ ಕಾಲಮಿತಿ: ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 34,863 ಹುದ್ದೆಗಳನ್ನು ತುಂಬಲು ಕಾಲ ಮಿತಿಯನ್ನು ನಿಗದಿಪಡಿಸಿಕೊಂಡು ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಅಗತ್ಯ ಸೇವೆಗಳ ಇಲಾಖೆಗಳಲ್ಲಿ ನೇಮಕಾತಿಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಅವರು ಸೂಚಿಸಿದರು.

ನೇಮಕಾತಿ ಕ್ಯಾಲೆಂಡರ್:‌ ನೇಮಕಾತಿ ಕುರಿತಾಗಿ ವಾರ್ಷಿಕ ಕ್ಯಾಲೆಂಡರ್‌ ಸಿದ್ಧಪಡಿಸಲು ಇರುವ ತೊಡಕುಗಳನ್ನು ನಿವಾರಿಸಬೇಕು. ಆರ್ಥಿಕ ವರ್ಷದ ಆರಂಭದಲ್ಲಿ ಆಯಾ ಇಲಾಖೆಗಳು ನೇಮಕಾತಿಗೆ ಖಾಲಿಯಿರುವ ಹುದ್ದೆಗಳ ಕುರಿತು ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಬೇಕು. ಕಾಲಮಿತಿಯೊಳಗಾಗಿ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದುಕೊಂಡು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವ ಕುರಿತಾಗಿ ಏಕರೀತಿಯ ಕ್ಯಾಲೆಂಡರ್‌ ಸಿದ್ಧಪಡಿಸಬೇಕು ಎಂದು ಹೇಳಿದರು.

ಕೇರಳ ಮಾದರಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವ ಕುರಿತು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

ಪಿಎಸ್‌ಐ ನೇಮಕಾತಿಯಲ್ಲಿ ದೈಹಿಕ ಪರೀಕ್ಷೆಯನ್ನು ಮೊದಲು ನಡೆಸಲಾಗುತ್ತಿದ್ದು, ಅಬಕಾರಿ ಇಲಾಖೆ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆಯನ್ನು ಮೊದಲು ಮಾಡಲಾಗುತ್ತದೆ. ಅಬಕಾರಿ ಇಲಾಖೆ ಮಾದರಿಯನ್ನು ಪಿಎಸ್‌ಐ ನೇಮಕಾತಿಯಲ್ಲೂ ಅನುಸರಿಸುವ ಕುರಿತು ಪರಿಶೀಲನೆ ನಡೆಸಲು ಸೂಚನೆ ನೀಡಿದರು.

ರಾಜ್ಯದಲ್ಲಿ 41 ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಯಾಗದ ಕಾರಣ ನೇಮಕಾತಿ ವಿಳಂಬವಾಗುತ್ತಿದೆ. ಕೆಲವು ಇಲಾಖೆಗಳಲ್ಲಿ ಹಲವು ದಶಕಗಳಿಂದ ಸಿ ಅಂಡ್‌ ಆರ್‌ ತಿದ್ದುಪಡಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳಿಗೆ ಅನುಕೂಲವಾಗುವಂತೆ ಮಾದರಿ ಸಿ ಅಂಡ್‌ ಆರ್‌ ಸಿದ್ಧಪಡಿಸಲು ಸೂಚನೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೃಷ್ಣಾದಲ್ಲಿ ಸರ್ಕಾರದ ಹಂತದಲ್ಲಿ ವಿವಿಧ ಇಲಾಖೆಗಳ ನೇಮಕಾತಿಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಚಿವರಾದ‌ ಜಿ.ಪರಮೇಶ್ವರ, ಹೆಚ್.ಕೆ.ಪಾಟೀಲ್‌, ಪ್ರಿಯಾಂಕ ಖರ್ಗೆ, ದಿನೇಶ ಗುಂಡೂರಾವ್‌, ಡಾ.ಶರಣ ಪ್ರಕಾಶ ಪಾಟೀಲ್‌, ಮಧು ಬಂಗಾರಪ್ಪ, ಭೈರತಿ ಸುರೇಶ್, ಡಾ.ಎಂ.ಸಿ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಕಾನೂನು ಸಲಹೆಗಾರ ಎ.ಎಸ್.‌ ಪೊನ್ನಣ್ಣ, ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

JOB ALERT: ಕನ್ನಡಿಗರಿಗೆ ಸಿಹಿಸುದ್ದಿ: ರೈಲ್ವೆ ಇಲಾಖೆಯ 12 ಲಕ್ಷ ಹುದ್ದೆಗಳ ಭರ್ತಿಗೆ ಅಧಿಸೂಚನೆ, ಕನ್ನಡದಲ್ಲೇ ಪರೀಕ್ಷೆ

ಮೈಸೂರು ದಸರಾ ವೀಕ್ಷಣೆಗೆ ತೆರಳೋರಿಗೆ ಗುಡ್ ನ್ಯೂಸ್: ದಸರಾ ವಿಶೇಷ KSRTC ಬಸ್ ಕಾರ್ಯಾಚರಣೆಗೆ ಚಾಲನೆ

ಜಾತಿಗಣತಿ ವರದಿ ಇಟ್ಟುಕೊಂಡು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿ: HDK ಸವಾಲು

BREAKING: ಜಾತಿಗಣತಿ ವರದಿ ಜಾರಿ ವಿಚಾರ: ಅ.18ರಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ- ಸಿಎಂ ಸಿದ್ಧರಾಮಯ್ಯ

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ‘ಬ್ಲ್ಯಾಕ್ ಸಂಡೆ’: ಪ್ರತ್ಯೇಕ ಅಪಘಾತಗಳಲ್ಲಿ 10 ಮಂದಿ ಸಾವು

23/03/2026 5:53 AM1 Min Read

ಕೇಂದ್ರದ ಆದೇಶದ ಬೆನ್ನಲ್ಲೇ ಹೋಟೆಲ್ ಗಳಿಗೆ ಇಂದಿನಿಂದ ಗ್ಯಾಸ್ ಪೂರೈಕೆ ಹೆಚ್ಚಳ : 12 ದಿನಗಳ ಸಂಕಷ್ಟಕ್ಕೆ ಪರಿಹಾರ !

23/03/2026 5:48 AM1 Min Read

BIG NEWS : 114 ದೇಶಗಳ ಶಾಲಾ ಮಕ್ಕಳಿಗೆ `ಮೊಬೈಲ್ ಬಳಕೆ ಬ್ಯಾನ್’ : ಯುನೆಸ್ಕೋ ವರದಿ

23/03/2026 5:43 AM1 Min Read
Recent News

ರಾಜ್ಯದಲ್ಲಿ ‘ಬ್ಲ್ಯಾಕ್ ಸಂಡೆ’: ಪ್ರತ್ಯೇಕ ಅಪಘಾತಗಳಲ್ಲಿ 10 ಮಂದಿ ಸಾವು

23/03/2026 5:53 AM

ಕೇಂದ್ರದ ಆದೇಶದ ಬೆನ್ನಲ್ಲೇ ಹೋಟೆಲ್ ಗಳಿಗೆ ಇಂದಿನಿಂದ ಗ್ಯಾಸ್ ಪೂರೈಕೆ ಹೆಚ್ಚಳ : 12 ದಿನಗಳ ಸಂಕಷ್ಟಕ್ಕೆ ಪರಿಹಾರ !

23/03/2026 5:48 AM

BIG NEWS : 114 ದೇಶಗಳ ಶಾಲಾ ಮಕ್ಕಳಿಗೆ `ಮೊಬೈಲ್ ಬಳಕೆ ಬ್ಯಾನ್’ : ಯುನೆಸ್ಕೋ ವರದಿ

23/03/2026 5:43 AM

ಉಪಸಮರಕ್ಕೆ ವೇದಿಕೆ ಸಜ್ಜು: ಇಂದು ನಾಮಪತ್ರ ಸಲ್ಲಿಕೆ, ಕಣದಲ್ಲಿ ಕೈ-ಕಮಲ ಪೈಪೋಟಿ

23/03/2026 5:37 AM
State News
KARNATAKA

ರಾಜ್ಯದಲ್ಲಿ ‘ಬ್ಲ್ಯಾಕ್ ಸಂಡೆ’: ಪ್ರತ್ಯೇಕ ಅಪಘಾತಗಳಲ್ಲಿ 10 ಮಂದಿ ಸಾವು

By kannadanewsnow5723/03/2026 5:53 AM KARNATAKA 1 Min Read

ಬೆಂಗಳೂರು: ರಾಜ್ಯದ ವಿವಿಧೆಡೆ ಭಾನುವಾರ ನಡೆದ ಸರಣಿ ಅಪಘಾತಗಳು ಮತ್ತು ದುರಂತಗಳಲ್ಲಿ ಒಟ್ಟು 10 ಜನರು ಮೃತಪಟ್ಟಿದ್ದಾರೆ. ರಸ್ತೆ ಅಪಘಾತಗಳಲ್ಲಿ…

ಕೇಂದ್ರದ ಆದೇಶದ ಬೆನ್ನಲ್ಲೇ ಹೋಟೆಲ್ ಗಳಿಗೆ ಇಂದಿನಿಂದ ಗ್ಯಾಸ್ ಪೂರೈಕೆ ಹೆಚ್ಚಳ : 12 ದಿನಗಳ ಸಂಕಷ್ಟಕ್ಕೆ ಪರಿಹಾರ !

23/03/2026 5:48 AM

BIG NEWS : 114 ದೇಶಗಳ ಶಾಲಾ ಮಕ್ಕಳಿಗೆ `ಮೊಬೈಲ್ ಬಳಕೆ ಬ್ಯಾನ್’ : ಯುನೆಸ್ಕೋ ವರದಿ

23/03/2026 5:43 AM

ಉಪಸಮರಕ್ಕೆ ವೇದಿಕೆ ಸಜ್ಜು: ಇಂದು ನಾಮಪತ್ರ ಸಲ್ಲಿಕೆ, ಕಣದಲ್ಲಿ ಕೈ-ಕಮಲ ಪೈಪೋಟಿ

23/03/2026 5:37 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.