ಚಿಕ್ಕಮಗಳೂರು: ಮಂಡ್ಯದ ನಾಗಮಂಗಲದ ಘಟನೆ ಮಾಸುವ ಮುನ್ನವೇ ಮತ್ತೊಂದು ಗಲಭೆಗೆ ಕಾರಣವಾಗುವಂತೆ ಚಿಕ್ಕಮಗಳೂರಲ್ಲಿ ಪ್ಯಾಲಿಸ್ತೀನ್ ಧ್ವಜವನ್ನು ಹಿಡಿದಂತ ಯುವಕರು, ಬೈಕ್ ನಲ್ಲಿ ನಗರದ ಪ್ರಮುಖ ರಸ್ತೆಯಲ್ಲಿ ರೌಂಡ್ಸ್ ಹೊಡೆದಿರುವುದಾಗಿ ತಿಳಿದು ಬಂದಿದೆ.
ಚಿಕ್ಕಮಗಳೂರು ನಗರದಲ್ಲಿ ಈದ್ ಮಿಲಾದ್ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದೆ. ಈ ಸಂದರ್ಭದಲ್ಲಿಯೇ ಚಿಕ್ಕಮಗಳೂರಿನ ಪ್ರಮುಖ ರಸ್ತೆಗಳಲ್ಲಿ ಅನ್ಯ ಕೋಮಿನ ಯುವಕರು ಪ್ಯಾಲಿಸ್ತೀನ್ ಧ್ವಜ ಹಿಡಿದು ಬೈಕ್ ನಲ್ಲಿ ರೌಂಡ್ಸ್ ಮಾಡಿರುವಂತ ವೀಡಿಯೋ ವೈರಲ್ ಆಗಿದೆ.
ವೀಡಿಯೋ ವೈರಲ್ ಆಗುತ್ತಿದ್ದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಚಿಕ್ಕಮಗಳೂರು ನಗರ ಠಾಣೆಯ ಎದುರು ಜಮಾಯಿಸಿ, ಪ್ಯಾಲಿಸ್ತೀನ್ ಧ್ವಜ ಹಿಡಿದು ಬೈಕ್ ನಲ್ಲಿ ರೌಂಡ್ಸ್ ಮಾಡಿದಂತ ಯುವಕರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಧರಣಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಕೂಡ ಕಂಡು ಬಂದಿದೆ.