ಬೆಂಗಳೂರು: ನಗರದಲ್ಲಿ ವೈದ್ಯರ ಎಡವಟ್ಟಿಗೆ ಬಾಣಂತಿಯೊಬ್ಬರ ಬಲಿಯಾಗಿರುವಂತ ಘಟನೆ ನಡೆದಿದೆ. ಬೆಂಗಳೂರಿನ ಕೋಣನಕುಂಟೆ ಕ್ರಾಸ್ ನಲ್ಲಿರುವಂತ ಆಸ್ಟ್ರಾ ಆಸ್ಪತ್ರೆಯಲ್ಲಿ ಸಿಜೇರಿಯನ್ ವೇಳೆಯಲ್ಲಿ ವೈದ್ಯರ ಎಡವಟ್ಟಿಗೆ ಬಾಣಂತಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರಿನ ಕೋಣನಕುಂಟೆ ಕ್ರಾಸ್ ಬಳಿಯ ಆಸ್ಟ್ರಾ ಆಸ್ಪತ್ರೆಗೆ ಕನಕಪುರ ಮೂಲದ ತನುಶ್ರೀ(23) ಎಂಬುವರನ್ನು ಹೆರಿಗೆಗಾಗಿ ನಿನ್ನೆ ರಾತ್ರಿ ದಾಖಲಿಸಲಾಗಿತ್ತು. ನಾರ್ಮಲ್ ಕಷ್ಟವಿದೆ. ಸಿಜೇರಿಯನ್ ಮಾಡಬೇಕು ಎಂಬುದಾಗಿ ವೈದ್ಯರು ತಿಳಿಸಿದಾಗ ಅದಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು.
ಕಳೆದ ಮಧ್ಯರಾತ್ರಿ ಗರ್ಭಿಣಿಗೆ ಸಿಜೇರಿಯನ್ ಮಾಡಿ ಮಗುವನ್ನು ತೆಗೆಯುವ ವೇಳೆಯಲ್ಲಿ ವೈದ್ಯರ ಎಡವಟ್ಟಿಗೆ ಬಾಣಂತಿ ಸಾವನ್ನಪ್ಪಿದ್ದಾರೆ. ಆದರೇ ತಾಯಿ ಸಾವನ್ನಪ್ಪಿದ್ದಾರೆ. ಈ ವಿಷಯವನ್ನು ತಿಳಿಸದಂತ ಆಸ್ಟ್ರಾ ಆಸ್ಪತ್ರೆಯ ವೈದ್ಯರು, ಮೊದಲು ಬಿಲ್ ಕಟ್ಟುವಂತೆ ಕುಟುಂಬಸ್ಥರಿಗೆ ಸೂಚಿಸಿದ್ದಾರೆ. ಬಿಲ್ ಸಂಪೂರ್ಣ ಕಟ್ಟಿದ ಬಳಿಕ ತಾಯಿ ಸಾವನ್ನಪ್ಪಿರುವಂತ ವಿಷಯವನ್ನು ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವಿನ ವಿಚಾರ ತಿಳಿದಂತ ಕುಟುಂಬಸ್ಥರು ಆಸ್ಪತ್ರೆಯ ಬಳಿಯಲ್ಲಿ ಪ್ರತಿಭಟನೆ ನಡೆಸಿದರು. ರಸ್ತೆ ತಡೆ ನಡೆಸಿ, ಆಸ್ಟ್ರಾ ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಆಸ್ಟ್ರಾ ಆಸ್ಪತ್ರೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಬಾಣಂತಿ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂಬುದಾಗಿ ಧರಣಿ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಕೋಣನಕುಂಟೆ ಠಾಣೆಯ ಪೊಲೀಸರು ಕುಟುಂಬಸ್ಥರನ್ನು ಮನವೊಲಿಸಿದರು. ಅಲ್ಲದೇ ಬಾಣಂತಿ ಸಾವಿನ ಬಗ್ಗೆ ಖಚಿತ ಮಾಹಿತಿ ತಿಳಿಯಲು ಶವ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ಮೃತ ದೇಹವನ್ನು ಸ್ಥಳಾಂತರಿಸಲಾಗಿದೆ. ಆ ನಂತ್ರ ಮೃತ ಬಾಣಂತಿ ತನುಶ್ರೀ ಪಾರ್ಥೀವ ಶರೀರವನ್ನು ಕುಟುಂಬಸ್ಥರು ಶವ ಸಂಸ್ಕಾರಕ್ಕೆ ಕೊಂಡೊಯ್ದಿದ್ದಾರೆ ಎನ್ನಲಾಗುತ್ತಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಡಿಸಿಎಂ ಡಿ.ಕೆ ಶಿವಕುಮಾರ್ ರೈಡ್ ಮಾಡಿದ ಸ್ಕೂಟರ್ ಮೇಲಿದೆ 34 ಕೇಸ್, ₹18,500 ದಂಡ ಬಾಕಿ!
SHOCKING : ಅಂತರ್ಜಾತಿ ವಿವಾಹವಾಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ!