ಬೆಂಗಳೂರು: ಮಾವ, ಅಳಿಯ ಜಗಳ ಮಾಡುತ್ತಿದ್ದಂತ ವೇಳೆಯಲ್ಲಿ, ಜಗಳವನ್ನು ಬಿಡಿಸೋದಕ್ಕೆ ಹೋದಂತ ಕಾನ್ಸ್ ಟೇಬಲ್ ಒಬ್ಬರಿಗೆ ಚಾಕುವಿನಿಂದ ಇರಿದಿರುವಂತ ಘಟನೆ ಬೆಂಗಳೂರಲ್ಲಿ ನಡೆದಿದೆ.
ಬೆಂಗಳೂರಿನ ಚಾಮರಾಜಪೇಟೆಯ ವಾಲ್ಮೀಕಿ ನಗರದಲ್ಲಿ ನಿನ್ನೆ ರಾತ್ರಿ ನಡೆದಿರುವಂತ ಘಟನೆ ಇದಾಗಿದೆ. ಅಳಿಯ ತಬ್ರೇಜ್, ಮಾವ ಮೊಹಮ್ಮದ್ ಶಫೀವುಲ್ಲಾ ಮಧ್ಯೆ ಜಗಳ ನಡೆಯುತ್ತಿತ್ತು. ಮೊದಲ ಪತ್ನಿಯಿಂದ ವಿಚ್ಛೇದನವನ್ನು ಆರೋಪಿ ತಬ್ರೇಜ್ ಪಾಷಾ ಪಡೆದಿದ್ದನು.
ಮಗಳಿಗೆ ಬೇರೆ ಮದುವೆ ಮಾಡಲು ಸಿದ್ಧತೆಯನ್ನು ಮಾವ ಶಫೀವುಲ್ಲಾ ನಡೆಸುತ್ತಿದ್ದರು. ಇದೇ ಸಿಟ್ಟಿನಿಂದ ಸಂಬಂಧಿಕರು, ಮಾವನ ಜೊತೆ ಜಗಳವನ್ನು ಅಳಿಯ ತಬ್ರೇಜ್ ನಡೆಸುತ್ತಿದ್ದನು. ಬಾಟಲಿಯಿಂದ ಮಾವನ ತಲೆಗೆ ತಬ್ರೇಜ್, ಉಳಿದ ಆರೋಪಿಗಳು ಹೊಡೆದಿದ್ದಾರೆ.
ಈ ಗಲಾಟೆ ಗಮನಿಸಿದಂತ ಗಸ್ತಿನಲ್ಲಿದ್ದಂತ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಕೈಯಲ್ಲಿದ್ದಂತ ಡ್ಯಾಗರ್ ನಿಂದ ಕಾನ್ಸ್ ಟೇಬಲ್ ಸಂತೋಷ್ ಗೆ ಇರಿದಿದ್ದಾರೆ. ಚಾಕು ಇರಿತಕ್ಕೆ ಒಳಗಾದಂತ ಸಂತೋಷ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಳಿಯ ತಬ್ರೇಜ್ ಬಾಟಲ್ ನಿಂದ ಹಲ್ಲೆ ನಡೆಸಿದ್ದರಿಂದ ಅತ್ತೆ ತಲೆಗೆ ಗಾಯವಾಗಿದೆ. ಚಿಕಿತ್ಸೆ ಪಡೆದು ಪೊಲೀಸ್ ಠಾಣೆಗೆ ತೆರಳಿ ಮಾವ ಶಫೀವುಲ್ಲಾ ದೂರು ನೀಡಿದ್ದಾರೆ. ಚಾಮರಾಜಪೇಟೆ ಪೊಲೀಸರು ತಬ್ರೇಜ್, ಅಬರಿಸ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.