ಕೋಲಾರ: ಸಂಸಾರ ನಡೆಸೋದಕ್ಕಾಗಿ ಮಾಡಿದಂತ ಸಾಲ ತೀರಿಸಲು ತನ್ನ ಗಂಡು ಮಗುವನ್ನೇ ಹಣಕ್ಕಾಗಿ ಮಾರಾಟ ಮಾಡಿದಂತ ಅಮಾನವೀಯ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರದ ಬಂಗಾರಪೇಟೆ ನಗರದ ನಿವಾಸಿಗಳಾದಂತ ಮುನಿರಾಜು ಹಾಗೂ ಪವಿತ್ರ ದಂಪತಿಗೆ ಮೂರು ತಿಂಗಳ ಮಗು ಇತ್ತು. ಪತಿ ಮುನಿರಾಜು ಸಿಕ್ಕಾಪಟ್ಟೆ ಸಾಲ ಮಾಡಿದ್ದನಂತೆ. ಈ ಸಾಲವನ್ನು ತೀರಿಸೋದಕ್ಕಾಗಿ ತಮ್ಮ ಮೂರು ತಿಂಗಳ ಮಗುವನ್ನೇ ಬಂಗಾರಪೇಟೆಯ ಕೆರೆಕೋಡಿ ನಿವಾಸದ ವಲ್ಲಿ ಎನ್ನುವ ಮಹಿಳೆ ಮೂಲಕ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿದೆ.
ಸಾಲಕ್ಕಾಗಿ ಮಗುವನ್ನು ಮಾರಾಟ ಮಾಡಿದಂತ ಪತಿಯ ವಿರುದ್ಧ ಪತ್ನಿ ಸಿಡಿದೆದ್ದಿದ್ದಾಳೆ. ತನ್ನ ಮಗು ಬೇಕು. ಪತಿ ಹಣಕ್ಕಾಗಿ ಮಾರಾಟ ಮಾಡಿದ್ದಾರೆ. ಕೊಡಿಸಿ ಅಂತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಆಯೋಗ ಹಾಗೂ ಬಂಗಾರಪೇಟೆ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಪತಿ ಮುನಿರಾಜು ಹಾಗೂ ವಲ್ಲಿ ತಮ್ಮ ಮಗುವನ್ನು ಅಪಹರಿಸಿರೋದಾಗಿ ಆರೋಪಿಸಿದ್ದಾರೆ.
ಬಾಗಲಕೋಟೆ : ಕ್ಷುಲ್ಲಕ ಕಾರಣಕ್ಕೆ ಅಪ್ಪ-ಮಗನ ಮಧ್ಯ ಗಲಾಟೆ : ಕೊಡಲಿಯಿಂದ ಮಗನ ಹತ್ಯೆಗೈದ ತಂದೆ