ಬೆಳಗಾವಿ: ಪಾಪಿ ಮಗನೊಬ್ಬ ತನ್ನ ತಂದೆಯನ್ನು ಆಸ್ಪತ್ರೆಗೆ ಸೇರಿಸಿ ಕಾಲ್ಕಿತ್ತಿದ್ದಾನೆ. ಸೂಕ್ತ ರೀತಿಯ ಚಿಕಿತ್ಸೆ ಸಿಗದೇ ಆಸ್ಪತ್ರೆಯಲ್ಲೇ ಅನಾಥವಾಗಿ ತಂದೆ ಸಾವನ್ನಪ್ಪಿದ್ದಾರೆ. ಇಂತಹ ತಂದೆಯನ್ನು ದೂರದ ಗೋವಾದಿಂದ ಬಂದಂತ ಮಗಳು ಅಂತ್ಯಸಂಸ್ಕಾರ ನೆರವೇರಿಸಿದಂತ ಅಮಾನವೀಯ ಘಟನೆ ರಾಜ್ಯದಲ್ಲಿ ನಡೆದಿದೆ.
ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಅನಾರೋಗ್ಯದಿಂದ ಬಳಲುತ್ತಿದ್ದಂತ ಸತೀಶ್ವರ್ ಅವರನ್ನು ಅವರ ಪುತ್ರ ಸೇರಿಸಿ ಹೋಗಿದ್ದಾನೆ. ಆದರೇ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಕೊಡಿಸಬೇಕಿದ್ದಂತ ಪುತ್ರ ಹೋದ ಬಳಿಕ, ಅನಾಥವಾಗಿದ್ದಂತ ಅವರ ತಂದೆ ಅದೇ ಕೊರಗಿನಲ್ಲಿ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಚಿಕಿತ್ಸೆ ಫಲಿಸದೇ ಸತೀಶ್ವರ್ ಸಾವನ್ನಪ್ಪಿದ್ದಾರೆ.
ಸಾವಿನ ಬಳಿಕ ಸತೀಶ್ವರ್ ಪುತ್ರನನ್ನು ಹುಡುಕುವ ಪ್ರಯತ್ನ ಮಾಡಿದರೂ ಸಿಕ್ಕಿಲ್ಲ. ಕೊನೆಗೆ ಅವರ ಪುತ್ರಿಯನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಗೋವಾದಲ್ಲಿದ್ದಂತ ಸತೀಶ್ವರ್ ಪುತ್ರಿ ಆಗಮಿಸಿ ತಂದೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ. ಈ ಮೂಲಕ ಆಸ್ಪತ್ರೆಯಲ್ಲೇ ಅನಾಥವಾಗಿ ಸತೀಶ್ವರ್ ಸಾವನ್ನಪ್ಪಿದ್ರೇ, ಅವರ ಪುತ್ರಿ ಅಂತ್ಯ ಸಂಸ್ಕಾರ ನಡೆಸಿದಂತ ಹೃದಯ ವಿದ್ರಾವಕ ಘಟನೆ ಬೆಳಗಾವಿಯಲ್ಲಿ ನಡೆದಿದೆ.
GOOD NEWS: ಬೆಂಗಳೂರಿನ ‘ವಿಕ್ಟೋರಿಯಾ ಆಸ್ಪತ್ರೆ’ಯಲ್ಲಿ ಅಂಗಾಂಗ ಸಾಗಾಣೆಯ ಅನುಕೂಲಕ್ಕಾಗಿ ‘ಹೆಲಿಪ್ಯಾಡ್ ನಿರ್ಮಾಣ’
BREAKING : ಮೈಸೂರಲ್ಲಿ 2 ಬೈಕ್ ಗಳ ಮಧ್ಯ ಮುಖಾಮುಖಿ ಡಿಕ್ಕಿ : ಸ್ಥಳದಲ್ಲೇ ಇಬ್ಬರ ಸಾವು, ಮೂವರಿಗೆ ಗಾಯ