ಮೈಸೂರು: ಜಿಲ್ಲೆಯಲ್ಲಿ ರಾಜ್ಯದಲ್ಲೇ ಬೆಚ್ಚಿ ಬೀಳಿಸುವಂತ ಕೃತ್ಯ ಎನ್ನುವಂತ ಘಟನೆ ನಡೆದಿದೆ. ಲಾಡ್ಜ್ ಒಂದರಲ್ಲಿ ಪ್ರಿಯಕರನೊಬ್ಬ ವಿವಾಹಿತ ಮಹಿಳೆಯ ಬಾಯಿಗೆ ಜಿಲೆಟಿನ್ ಕಡ್ಡಿ ಇರಿಸಿ ಸ್ಪೋಟಿಸಿ ಬರ್ಬರವಾಗಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆ.
ಮೈಸೂರಿನ ಸಾಲಿಗ್ರಾಮ ತಾಲ್ಲೂಕಿನ ಭೇರ್ಯ ಗ್ರಾಮದಲ್ಲಿರುವಂತ ಲಾಡ್ಜ್ ನಲ್ಲಿ ಗೆರಸನಹಳ್ಳಿ ಗ್ರಾಮ ರಕ್ಷಿತಾ(20) ಎಂಬಾಕಿಯನ್ನು ಪ್ರಿಯಕರ ಬಿಳಿಕೆರೆ ಗ್ರಾಮದ ಸಿದ್ಧರಾಜು ಎಂಬಾತನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಕೇರಳ ಮೂಲದ ವ್ಯಕ್ತಿಯನ್ನು ರಕ್ಷಿತಾ ವಿವಾಹವಾಗಿದ್ದರು. ಸಿದ್ಧರಾಜು ಜೊತೆಗೆ ರಕ್ಷಿತಾ ಅನೈತಿಸ ಸಂಬಂಧವನ್ನು ಹೊಂದಿದ್ದರು. ಕಪ್ಪಡಿ ಕ್ಷೇತ್ರಕ್ಕೆ ಹೋಗೋಣ ಎಂಬುದಾಗಿ ಸಿದ್ದರಾಜು ರಕ್ಷಿತಾ ಕರೆತಂದಿದ್ದನು. ಭೇರ್ಯ ಗ್ರಾಮದ ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದನು.
ಲಾಡ್ಜ್ ನಲ್ಲಿ ಅಕ್ಷತಾ ಬಾಯಿಗೆ ಜಿಲೆಟಿನ್ ಕಟ್ಟಿ ಇರಿಸಿ ಸ್ಪೋಟಿಸಿ ಹತ್ಯೆಗೈದಿದ್ದಾನೆ. ಆ ಬಳಿಕ ಮೊಬೈಲ್ ಬ್ಲಾಸ್ಟ್ ಅಂತ ಕೂಗಾಡಿದ್ದಾನೆ. ಆದರೇ ಸ್ಥಳದಲ್ಲಿ ಯಾವುದೇ ಮೊಬೈಲ್ ಇರದ ಕಾರಣ ಅನುಮಾನ ಬಂದಿದೆ. ಮೊಬೈಲ್ ಎಲ್ಲಿ ಎಂಬುದಾಗಿ ಕೇಳಿದಾಗ ಬಿಸಾಕಿದ್ದಾಗಿ ಸುಳ್ಳನ್ನು ಸಿದ್ಧರಾಜು ಹೇಳಿದ್ದನು.
ಸಿದ್ಧರಾಜು ಸುಳ್ಳು ಹೇಳಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ ಲಾಡ್ಜ್ ಸಿಬ್ಬಂದಿ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಸಾಲಿಗ್ರಾಮ ಠಾಣೆಯ ಪೊಲೀಸರು ಬಂದು ಪರಿಶೀಲಿಸಿ, ಸಿದ್ದರಾಜು ವಿಚಾರಣೆ ನಡೆಸಿದಾಗ ವಿವಾಹಿತ ಮಹಿಳೆ ಅಕ್ಷತಾ ಬಾಯಿಗೆ ಜಿಲೆಟಿನ್ ಕಡ್ಡಿ ಇರಿಸಿ ಸ್ಪೋಟಿಸಿದಂತ ವಿಚಾರ ಬಾಯಿ ಬಿಟ್ಟಿದ್ದಾನೆ.
BREAKING: ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್ ಭೀಕರ ದಾಳಿ: ಪತ್ರಕರ್ತ ಸೇರಿದಂತೆ 15 ಮಂದಿ ಸಾವು
BIG NEWS : ಧರ್ಮಸ್ಥಳ ಕೇಸ್ ಶೇ.90ರಷ್ಟು ತನಿಖೆ ಮುಗಿದಿದೆ, ‘NIA, CBI’ ಅಗತ್ಯವಿಲ್ಲ: ಸಚಿವ ರಾಮಲಿಂಗಾರೆಡ್ಡಿ