ಚಿತ್ರದುರ್ಗ: ರಾಜ್ಯದಲ್ಲಿ ಮಕ್ಕಳ ಪೋಷಕರೇ ಬೆಚ್ಚಿ ಬೀಳಿಸುವಂತ ಘಟನೆಯೊಂದು ನಡೆದಿದೆ. ಅದೇ ಬಾಲಕಿಯೊಬ್ಬಳನ್ನು ಚಾಕೋಲೇಟ್ ಕೊಡಿಸೋದಾಗಿ ಆಮಿಷ ಒಡ್ಡಿ, ಕರೆದೊಯ್ದ ವ್ಯಕ್ತಿಯೊಬ್ಬ, ಕತ್ತುಕೊಯ್ದು ಹತ್ಯೆಗೆ ಯತ್ನಿಸಿದ್ದಾನೆ. ಅದು ಎಲ್ಲಿ ಅಂತ ಮುಂದೆ ಓದಿ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಸಿಂಗನಹಳ್ಳಿಯಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದಂತ ಬಾಲಕಿಗೆ ಅದೇ ಗ್ರಾಮದ ಹನುಮಂತಪ್ಪ ಎಂಬಾತ ಚಾಕೋಲೇಟ್ ಆಸೆಯನ್ನು ತೋರಿಸಿದ್ದಾರೆ.
ಹನುಮಂತಪ್ಪ ತೋರಿಸಿದಂತ ಚಾಕೋಲೇಟ್ ಆಸೆಗಾಗಿ, ಬಾಲಕಿ ಹೇಗೂ ತಮ್ಮೂರಿನವೇ ಅಲ್ವ ಅತಂ ಆತನೊಂದಿಗೆ ತೆರಳಿದ್ದಾಳೆ. ಆತ ಬಾಲಕಿಯನ್ನು ಊರಿನ ಸಮೀಪದ ಜಮೀನಿಗೆ ಕರೆದುಕೊಂಡು ಹೋಗಿ, ಕತ್ತು ಕೊಯ್ದಿದ್ದಾನೆ.
ಹನುಮಂತಪ್ಪ ಬಾಲಕಿಯನ್ನು ಕತ್ತುಕೊಯ್ಯುತ್ತಿದ್ದಂತೆ, ಕಿರುಚಾಡಿದ್ದಾಳೆ. ಇದನ್ನು ಕೇಳಿದಂತ ಅಕ್ಕಪಕ್ಕದ ಜಮೀನಿನಲ್ಲಿ ಇದ್ದಂತ ಜನರು ಓಡಿ ಬಂದಿದ್ದಾರೆ. ಇದನ್ನು ಕಂಡು ಹನುಮಂತಪ್ಪ ಸ್ಥಳದಿಂದ ಕಾಲು ಕಿತ್ತಿದ್ದಾನೆ.
ಕತ್ತುಕೊಯ್ದಿದ್ದರಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಂತ ಬಾಲಕಿಯನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಿದ ಕಾರಣ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಸಂಬಂಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇರಳ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಯು.ಎಲ್.ಭಟ್ ನಿಧನ | UL Bhat passes away