ಬೆಳಗಾವಿ: ಶಾಲೆ ಬಿಟ್ಟ ಮೇಲೆ ಬ್ಯಾಗ್ ತಗೆದುಕೊಂಡು ಬರುವಂತೆ ಸಹಪಾಠಿಗಳು ಹೇಳಿದ ಮಾತನ್ನು ಕೇಳದಿದ್ದಕ್ಕೇ ಸಿಟ್ಟಾಗಿ ವಿದ್ಯಾರ್ಥಿಗೆ ಚಾಕುವಿನಿಂದ ಇರಿದಿರುವಂತ ಘಟನೆ ಗೋಕಾಕ್ ನಲ್ಲಿ ನಡೆದಿದೆ.
ಬೆಳಗಾವಿಯ ಗೋಕಾಕ್ ವಾಲ್ಮೀಕಿ ಮೈದಾನದಲ್ಲಿ ಶಾಲೆ ಬಿಟ್ಟಾಗ ತನ್ನ ಬ್ಯಾಗ್ ತರುವಂತೆ 10ನೇ ಕ್ಲಾಸ್ ವಿದ್ಯಾರ್ಥಿಗೆ ಸಹಪಾಠಿಗಳು ತಿಳಿಸಿದ್ದರು. ಆದರೇ ಶಾಲೆ ಬಿಟ್ಟ ನಂತ್ರ ವಿದ್ಯಾರ್ಥಿ ಸಹಪಾಠಿಗಳು ಹೇಳಿದಂತೆ ಅವರ ಬ್ಯಾಗ್ ತರೋದಕ್ಕೆ ನಿರಾಕರಿಸಿ ತಂದಿರಲಿಲ್ಲ.
ಇದೇ ಕಾರಣಕ್ಕೆ ಮೈದಾನದಲ್ಲಿ ಜಗಳಕ್ಕೆ ಇಳಿದಂತ ಅಪ್ರಾಪ್ತ ಬಾಲಕರು, ವಿದ್ಯಾರ್ಥಿಯ ಮೇಲೆ ಚಾಕುವಿನಿಂದ ಇರಿದಿದ್ದಾರೆ. ಕುತ್ತಿಗೆ, ಮೈಮೇಲೆ ಚಾಕು ಇರಿದು ಸ್ಥಳದಿಂದ ಅಪ್ರಾಪ್ತ ಸಹಪಾಠಿಗಳು ಪರಾರಿಯಾಗಿದ್ದಾರೆ.
ಚಾಕು ಇರಿತಕ್ಕೆ ಒಳಗಾಗಿದ್ದಂತ 10ನೇ ತರಗತಿ ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಗೋಕಾಕ್ ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಬಾಹ್ಯಾಕಾಶದಿಂದ ಸ್ಮಾರ್ಟ್ ಫೋನ್ ಮೂಲಕ ‘ಧ್ವನಿ ಕರೆ’ ಸಕ್ರಿಯಕ್ಕೆ ಇಸ್ರೋದಿಂದ ‘ಯುಎಸ್ ಉಪಗ್ರಹ’ ಉಡಾವಣೆ