ಬೆಂಗಳೂರು : ಬೆಂಗಳೂರಿನಲ್ಲಿ ಟ್ಯಾಂಕರ್ ಮಾಫಿಯಾಕ್ಕೆ ಕಡಿವಾಣ ಹಾಕಲು ಜಲಮಂಡಳಿಯು ಮುಂದಾಗಿದ್ದು, ೨೪ ಸಾವಿರಕ್ಕೂ ಹೆಚ್ಚು ವಾಟರ್ ಟ್ಯಾಂಕರ್ ಗಳಿಗೂ ದರ ನಿಗದಿ ಮಾಡಿ ಆದೇಶ ಹೊರಡಿಸಿದೆ.
ವಿಷಯಕ್ಕೆ ಸಂಬಂಧಿಸಿದಂತೆ, ಸರ್ಕಾರವು 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದ್ದು, ಉಲ್ಲೇಖ(1)ರ ಪತ್ರದಲ್ಲಿ ಬೆಂಗಳೂರು ನಗರ ನಿವಾಸಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು 24,000 ಲೀಟರ್ ಮತ್ತು ಮೇಲ್ಪಟ್ಟು ಸಾಮರ್ಥ್ಯದ ತಾತ್ಕಾಲಿಕವಾಗಿ ಮೂರು ತಿಂಗಳ ಅವಧಿಗೆ 200 ಖಾಸಗಿ ನೀರಿನ ಟ್ಯಾಂಕರ್ಗಳನ್ನು ಬಾಡಿಗೆ ಮೇರೆಗೆ ಉಪಯೋಗಿಸಲು ಧರವನ್ನು ನಿಗಧಿಪಡಿಸಲು ಕೋರಿರುತ್ತಾರೆ.
ಅದರಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಕುಡಿಯುವ ನೀರನ್ನು ಸಮರ್ಪಕವಾಗಿ ನಿಭಾಯಿಸುವ ದೃಷ್ಟಿಯಿಂದ ದರ ನಿಗಧಿಪಡಿಸಲು ತಾಂತ್ರಿಕ ಸಮಿತಿಯನ್ನು ಉಲ್ಲೇಖ(2)ರಂತೆ ರಚಿಸಿ ಆದೇಶಿಸಲಾಗಿರುತ್ತದೆ. ಮುಂದುವರೆದು ಸದರಿ ತಾಂತ್ರಿಕ ಸಮಿತಿಯೂ ಕುಡಿಯುವ ನೀರಿನ ಖಾಸಗಿ ನೀರಿನ ಟ್ಯಾಂಕರ್ಗಳ ದರ ನಿಗಧಿಪಡಿಸುವ ಬಗ್ಗೆ ಸಾಧಕ-ಬಾಧಕಗಳು, ಲೋಕೋಪಯೋಗಿ ಇಲಾಖೆಯ ಎಸ್.ಆರ್. ದರಗಳು ಮತ್ತು ವಾಸ್ತವಿಕ ಲಭ್ಯವಿರುವ ಅಂಕಿ- ಅಂಶಗಳನ್ನು ಅವಲೋಕಿಸಿ ಸಮಗ್ರ ಮಾಹಿತಿಯೊಂದಿಗೆ ದರಗಳನ್ನು ವಿಶ್ಲೇಶಿಸಿ ದರ ನಿಗಧಿಪಡಿಸುವ ಬಗ್ಗೆ ಉಲ್ಲೇಖ(3)ರಲ್ಲಿ ಸಭಾ ನಡವಳಿ ಸಲ್ಲಿಸಿರುತ್ತಾರೆ. ಸದರಿ ವರದಿಯು ಈ ಕೆಳಕಂಡಂತೆ ಇರುತ್ತದೆ.