ಬೆಳಗಾವಿ: ಜಿಲ್ಲೆಯಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ರುದ್ರೇಶ್ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ಪ್ರಕರಣ ಸಂಬಂಧ ಅನಾಮಧೇಯ ಪತ್ರವೊಂದು ಪತ್ತೆಯಾಗಿದೆ. ಅದರಲ್ಲಿ ಇದು ಆತ್ಮಹತ್ಯೆ ಅಲ್ಲ. ಇದು ಕೊಲೆ. ಈ ಕೇಸ್ ಮುಚ್ಚಿಹಾಕಬಾರದು. ಸತ್ತವರಿಗೆ ನ್ಯಾಯ ಸಿಗಬೇಕು ಎಂಬುದಾಗಿ ಆಗ್ರಹಿಸಲಾಗಿದೆ.
ಈ ಸಂಬಂಧ ಬೆಳಗಾವಿಯ ಪೊಲೀಸ್ ಕಮೀಷನರ್, ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರಿಗೆ, ರಾಜ್ಯಪಾಲರಿಗೂ ಪತ್ರವನ್ನು ಅಡ್ರೆಸ್ ಮಾಡಲಾಗಿದೆ. ಅದರಲ್ಲಿ ಬೆಳಗಾವಿ ತಹಶೀಲ್ದಾರ ಕಚೇರಿಯ ಕ್ಲಾರ್ಕ್ ರುದ್ರಣ್ಣ ಯಡವಣ್ಣನವರ ಇವರ ಕೊಲೆಗೆ ತಹಶೀಲ್ದಾರ ಜೀಪ ಗಾಡಿ ಡ್ರೈವರನಾದ ಯಲ್ಲಪ್ಪ ಬಡಸದ ಇವನೇ ಮೂಲ ಸೂತ್ರದಾರ. ಅದು ಸೂಸೈಡ ಅಲ್ಲ. ಯಲ್ಲಪ್ಪನಿಗೆ ವಿಚಾರಣೆ ಮಾಡಿದರೇ ಕೊಲೆ ರಹಸ್ಯ ಹೊರ ಬರುತ್ತದೆ ಎಂದಿದ್ದಾರೆ.
ಇನ್ನೂ ಯಲ್ಲಪ್ಪನ ಹೆಂಡತಿಯು ಅನೈತಿಕ ಸಂಬಂಧ ಇಟ್ಟುಕೊಂಡು ಅವನ ಎಲ್ಲಾ ದುಡ್ಡು ಹೊಡದಿರುತ್ತಾಳೆ. ಸತ್ತವನಿಗೆ ನ್ಯಾಯ ಸಿಗಬೇಕು. ಕೇಸ್ ಮುಚ್ಚಿ ಹಾಕಬಾರದು ಎಂಬುದಾಗಿ ಆಗ್ರಹಿಸಿದ್ದಾರೆ.
BREAKING: ಚಿರತೆ ದಾಳಿಯಲ್ಲಿ ಮಹಿಳೆ ಸಾವು ಕೇಸ್: ಮೃತರ ಕುಟುಂಬಕ್ಕೆ 15 ಲಕ್ಷ ಪರಿಹಾರ – ACF ಘೋಷಣೆ
‘ಒಂದೇ ದಿನದಲ್ಲಿ 5 ಲಕ್ಷ ನಾಗರಿಕರು ಪ್ರಯಾಣ’ : ಇತಿಹಾಸ ನಿರ್ಮಿಸಿದ ‘ಭಾರತೀಯ ವಾಯುಯಾನ’