ಕೋಲಾರ: ಒಂದು ವರ್ಷ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಯಾವುದೇ ಕಂಟಕ ಇಲ್ಲ ಆದರೆ 2025 ರ ಅಗಸ್ಟ್ ನಲ್ಲಿ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರಕ್ಕೆ ಆತಂಕವಿದೆ ಅಂತ ಕೋಲಾರದಲ್ಲಿ ಬಾರ್ಕೂರು ಸಂಸ್ಥಾನ ಮಠದ ಸಂತೋಷ ಗುರೂಜಿ ಭವಿಷ್ಯ ಹೇಳಿದ್ದಾರೆ.
ಅವರು ಕೋಲಾರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ 2025 ರ ಅಗಸ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುವುದು ಖಚಿತ, ಆದರೆ ಕಾಂಗ್ರೆಸ್ ನಲ್ಲಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನಕ್ಕೆ ಏರುವ ಅವಕಾಶ ಕಡಿಮೆ ಇದೆ ಎಂದು ಹೇಳಿದರು.
ಇದೇ ವೇಳೆ ಅವರು ಮೋದಿ ಅವರಿಗೆ ಆರೋಗ್ಯ ಸಮಸ್ಯೆ ಕಾಡಲಿದೆ ಅಂತ ತಿಳಿಸಿದರು. ನಾವೂ ಅವರ ಬೆಂಬಲಕ್ಕೆ ಇದ್ದೇವೆ. ಹಿಂದುಳಿದ ವರ್ಗದವರು ಮಾತ್ರವಲ್ಲ; ಎಲ್ಲಾ ಲಿಂಗಾಯತ ಮಠದ ಸ್ವಾಮೀಜಿಗಳೂ ಸಿದ್ದರಾಮಯ್ಯ ಜೊತೆ ನಿಲ್ಲಬೇಕಿದೆ ಎಂದು ಬಾರ್ಕೂರು ಸಂಸ್ಥಾನ ಮಠದ ಸಂತೋಷ ಗುರೂಜಿ ತಿಳಿಸಿದರು.