ಬೆಂಗಳೂರು : ರಾಜ್ಯ ಸರ್ಕಾರಿ ನೌಕರರ ಅಮಾನತ್ತಿಗೆ ಸಂಬಂಧಿಸಿದಂತೆ ಕೋರ್ಟ್ ತಡೆಯಾಜ್ಞೆ ನೀಡಿದ ಬಗ್ಗೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿಟ್ಟು ಸಕ್ಷಮ ಪ್ರಾಧಿಕಾರವು ಹೊರಡಿಸಿದ ಆದೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದ ಸಂದರ್ಭದಲ್ಲಿ ಅವನಿಗೆ ಸ್ಥಳನಿಯುಕ್ತಿ ಬಗ್ಗೆ ಆದೇಶ ಹೊರಡಿಸಲಾಗಿದೆ.
1. ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿರಿಸಿ ಸಕ್ಷಮ ಪ್ರಾಧಿಕಾರವು ಹೊರಡಿಸಿದ ಆದೇಶಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದಿಂದ ಸ್ಥಳನಿಯುಕ್ತಿ ಆದೇಶ (Order of Posting) ಪಡೆಯದೆ, ಅಮಾನತ್ತಿನಲ್ಲಿರಿಸುವ ಪೂರ್ವದಲ್ಲಿ ಅವನು ಹೊಂದಿದ್ದ ಹುದ್ದೆಯ ಪ್ರಭಾರವನ್ನು ತಾನಾಗಿಯೇ ವಹಿಸಿಕೊಂಡಿರುವ/ವಹಿಸಿಕೊಳ್ಳುತ್ತಿರುವ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿರುತ್ತವೆ. ಈ ಹಿನ್ನೆಲೆಯಲ್ಲಿ, ಸೃಷ್ಟಿಕರಣ ನೀಡುವುದು ಅಗತ್ಯವೆಂದು ಭಾವಿಸಿದೆ.
2. ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿರಿಸಿ ಹೊರಡಿಸಲಾದ ಆದೇಶವನ್ನು ಮಾನ್ಯ ನ್ಯಾಯಾಲವು ರದ್ದುಪಡಿಸಿದ ಸಂದರ್ಭದಲ್ಲಿ ಅವನಿಗೆ ಸ್ಥಳನಿಯುಕ್ತಿ ಆದೇಶ (Order of Posting) ನೀಡುವುದಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ದಿನಾಂಕ:11.10.1989 ರ ಅಧಿಕೃತ ಜ್ಞಾಪನದಲ್ಲಿ ವಿವರವಾದ ಸೂಚನೆಗಳನ್ನು ನೀಡಲಾಗಿರುತ್ತದೆ. ಸದರಿ ಅಧಿಕೃತ ಜ್ಞಾಪನದ ಕಂಡಿಕೆ 3 ಮತ್ತು 4 ನ್ನು ಈ ಕೆಳಗೆ ಉದ್ಧರಿಸಿದೆ:
“3. When orders of suspension are quashed by a Court of Law, the competent authority which issued the suspension order has also the right to consider whether an appeal should be filed against the orders of the Court or to implement the said order. It is no doubt appreciated that when orders of suspension are quashed by the Tribunal, the authority which placed the Government servant under suspension is duty bound to take decision within the time stipulated for going in appeal, failing which that authority subjects itself to attack for contempt of Court. The competent authority may have, in some cases atleast, justifiable cause for delay in implementing the order of the Tribunal and that authority may even seek extension of time from the Tribunal itself, giving reasons. In the event of occurrence of a gap between the date of order of the Tribunal quashing suspension and the date of revocation of the suspension by the suspending authority and thereafter the Government servant reporting to duty in the place of his posting, that gap will in any case be treated as duty for all purpose, if otherwise eligible.
4. In view of the above position, a Government servant under suspension cannot and accordingly should not assume his post automatically on the ground that the suspension order has been quashed. If any Government servant reports to duty in violation of these clarifications it will be considered as an act of misconduct on his part. Suspending authority should after considering the issue as discussed at para 3 of this O.M., issue the order revoking the suspension and appointment against a post. Any decision in this regard should be taken expeditiously”.
3. ಮೇಲ್ಕಂಡ ಹಿನ್ನೆಲೆಯಲ್ಲಿ, ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿರಿಸಿ ಸಕ್ಷಮ ಪ್ರಾಧಿಕಾರವು ಹೊರಡಿಸಿದ ಆದೇಶಕ್ಕೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದ ಸಂದರ್ಭದಲ್ಲಿಯೂ ಸಹ ಉಲ್ಲೇಖಿತ ದಿನಾಂಕ:11.10.1989 ರ ಅಧಿಕೃತ ಜ್ಞಾಪನದಲ್ಲಿ ನೀಡಲಾದ ಸೂಚನೆಗಳನ್ನು ಯಥಾವತ್ತಾಗಿ ಅನುಸರಿಸಿ ಕ್ರಮ ತೆಗೆದುಕೊಳ್ಳತಕ್ಕದ್ದೆಂದು ಈ ಮೂಲಕ ಸ್ಪಷ್ಟಿಕರಿಸಲಾಗಿದೆ.
4. ಸರ್ಕಾರದ ಎಲ್ಲಾ ಅಪರ ಮುಖ್ಯಕಾರ್ಯದರ್ಶಿ / ಪ್ರಧಾನಕಾರ್ಯದರ್ಶಿ /ಕಾರ್ಯದರ್ಶಿ ರವರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ನೇಮಕಾತಿ ಹಾಗೂ ಶಿಸ್ತು ಪ್ರಾಧಿಕಾರಿಗಳಿಗೆ ಈ ಸೂಚನೆಗಳನ್ನು ತಿಳಿಸಿ, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಲು ಕೋರಿದೆ.
BREAKING: ಅಭಿಮಾನ್ ಸ್ಟುಡಿಯೋ ಷರತ್ತು ಉಲ್ಲಂಘನೆ ಆಗಿದ್ದರಿಂದ ಭೂಮಿ ಮರು ವಶಕ್ಕೆ: ಸಚಿವ ಈಶ್ವರ್ ಖಂಡ್ರೆ
‘ಹೊಸ ಆನ್ಲೈನ್ ಗೇಮಿಂಗ್ ಕಾಯ್ದೆಗೆ ನ್ಯಾಯಾಲಯಗಳು ಅಡ್ಡಿಯಾಗಲು ಸಾಧ್ಯವಿಲ್ಲ’: ಕರ್ನಾಟಕ ಹೈಕೋರ್ಟ್ ಗೆ ಕೇಂದ್ರ ಸರ್ಕಾರ