ಬೆಂಗಳೂರು: ರಾಜ್ಯ ಹೆದ್ದಾರಿಗಳು ಹಾದು ಹೋಗುವ ನಗರ, ಪಟ್ಟಣ, ಗ್ರಾಮಗಳ ಪರಿಮಿತಿ ಹಾಗೂ ಇತರೆ ಆಕ್ಷೇಪಿತ ಪ್ರದೇಶಗಳಿಗೆ ಅನ್ವಯಿಸುವಂತೆ ನಿಗದಿಪಡಿಸಿದ್ದ ಕಟ್ಟಡ ರೇಖೆಯನ್ನು ಜಿಲ್ಲಾ ಮುಖ್ಯ ರಸ್ತೆಗಳಿಗೂ ಅನ್ವಯಿಸುವಂತೆ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.
ಈ ಕುರಿತು ಲೋಕೋಪಯೋಗಿ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಯವರು ನಡವಳಿಯನ್ನು ಹೊರಡಿಸಿದ್ದು, ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿಗಳಲ್ಲಿ ಬರುವ ಸಿಟಿ ಕಾರ್ಪೊರೇಷನ್, ಸಿಟಿ ಮುನಿಸಿಪಲ್ ಕೌನ್ಸಿಲ್, ಟೌನ್ ಮುನಿಸಿಪಲ್ ಕೌನ್ಸಿಲ್, ಟೌನ್ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಪರಿಮಿತಿಗಳಲ್ಲಿ ರಾಜ್ಯ ಹೆದ್ದಾರಿಯ ದಾಖಲಿತ ರಸ್ತೆ ಭೂಗಡಿಯ ಅಂಚಿನಿಂದ ಕಟ್ಟಡಗಳ ರೇಖೆಯ ಅಂತರವನ್ನು ಮೇಲೆ ಕ್ರಮ ಸಂಖ್ಯೆ (1)ರಲ್ಲಿ ಓದಲಾದ ಆದೇಶದಲ್ಲಿ ನಿಗಧಿಗೊಳಿಸಿ ಆದೇಶಿಸಲಾಗಿತ್ತು. ಸದರಿ ಆದೇಶವು ಇದುವರೆವಿಗೂ ಚಾಲ್ತಿಯಲ್ಲಿರುತ್ತದೆ. ಹಾಗೂ ಸದರಿ ಆದೇಶದಲ್ಲಿ ತಿಳಿಸಿರುವಂತೆ ಕಟ್ಟಡ ರೇಖೆಗಳನ್ನು ಗುರುತಿಸುವ ಬಗ್ಗೆ ಹೆಚ್ಚುವರಿ ಸ್ಪಷ್ಟನೆಯನ್ನು ಮೇಲೆ ಕ್ರಮ ಸಂಖ್ಯೆ (2)ರಲ್ಲಿ ಓದಲಾದ ಸುತ್ತೋಲೆಯಲ್ಲಿ ನೀಡಲಾಗಿರುತ್ತದೆ ಎಂದಿದ್ದಾರೆ.
ದಿನಾಂಕ:18.10.2004 ರ ಆದೇಶವು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಾಜ್ಯ ಹೆದ್ದಾರಿಗಳಿಗೆ ಮಾತ್ರ ಅನ್ವಯಿಸುತ್ತಿದ್ದು ಸದರಿ ಇಲಾಖೆ ವ್ಯಾಪ್ತಿಯಲ್ಲಿರುವ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಬರುವ ಸಿಟಿ ಕಾರ್ಪೊರೇಷನ್, ಸಿಟಿ ಮುನಿಸಿಪಲ್ ಕೌನ್ಸಿಲ್, ಟೌನ್ ಮುನಿಸಿಪಲ್ ಕೌನ್ಸಿಲ್, ಟೌನ್ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಪರಿಮಿತಿಗಳಲ್ಲಿ ಜಿಲ್ಲಾ ಮುಖ್ಯ ರಸ್ತೆಗಳ ದಾಖಲಿತ ರಸ್ತೆ ಭೂಗಡಿಯ ಅಂಚಿನಿಂದ ಕಟ್ಟಡ ರೇಖೆಯನ್ನು ಯಾವ ಅಂತರದಲ್ಲಿ ನಿಗಧಿಗೊಳಿಸಬೇಕೆಂಬ ಬಗ್ಗೆ ಇಲಾಖೆಯಲ್ಲಿ ಯಾವುದೇ ಮಾನದಂಡಗಳು ಇಲ್ಲದಿರುವುದನ್ನು ಹಾಗೂ ಸದರಿ ಆದೇಶದಲ್ಲಿ ಗ್ರಾಮ ಪಂಚಾಯತ್ ಪರಿಮಿತಿ ಎಂದು ತಿಳಿಸಿದ್ದು ಅದನ್ನು ನಿಖರವಾಗಿ ತಿಳಿಸುವ ಅಗತ್ಯತೆ ಇದೆಯೆಂದು ಜನಪ್ರತಿನಿಧಿಗಳು ಹಾಗೂ ಹಲವಾರು ಇಲಾಖೆಗಳು ಪುಸ್ತಾಪಿಸುತ್ತಿರುತ್ತಾರೆ ಎಂದು ತಿಳಿಸಿದ್ದಾರೆ.
ಮೇಲೆ ಕ್ರಮ ಸಂಖ್ಯೆ (3)ರಲ್ಲಿ ಓದಲಾದ ಪತ್ರದಲ್ಲಿ ಈ ಬಗ್ಗೆ Board of Chief Engineers ಸಭೆಯಲ್ಲಿ ಚರ್ಚಿಸಿ ಸೂಕ್ತ ಶಿಫಾರಸ್ಸು ನೀಡುವಂತೆ ಕೋರಲಾಗಿ ಮೇಲೆ ಕ್ರಮ ಸಂಖ್ಯೆ (4)ರಲ್ಲಿ ಓದಲಾದ ನಡವಳಿಯಲ್ಲಿ PWD 23 RDF 2004, ದಿನಾಂಕ:18.10.2004 ರ ಆದೇಶವನ್ನು ಜಿಲ್ಲಾ ಮುಖ್ಯ ರಸ್ತೆಗಳಿಗೂ ಹಾಗೂ ಆದೇಶದಲ್ಲಿರುವ ಗ್ರಾಮ ಪಂಚಾಯತ್ ಪರಿಮಿತಿ ಎಂಬುದನ್ನು ಪ್ರತೀ ಗ್ರಾಮ ಠಾಣಾದಲ್ಲಿ ಎಂದು ಅನ್ವಯ ಮಾಡಲು ಶಿಫಾರಸ್ಸು ಮಾಡಿರುತ್ತಾರೆ ಎಂಬುದಾಗಿ ಹೇಳಿದ್ದಾರೆ.
ಅದರಂತೆ PWD 23 RDF 2004, ದಿನಾಂಕ:18.10.2004 ರಂದು ಹೊರಡಿಸಿರುವ ಆದೇಶವನ್ನು ಈ ಕೆಳಕಂಡಂತೆ ಪರಿಷ್ಕರಿಸಿ ಆದೇಶಿಸುವುದು ಸೂಕ್ತವೆಂದು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶಿಸಿದ್ದಾರೆ.
ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ:PWD 23 RDF 2004 ದಿನಾಂಕ:18.10.2004 ರಲ್ಲಿ ರಾಜ್ಯ ಹೆದ್ದಾರಿಗೆ ಸಂಬಂಧಿಸಿದಂತೆ ದಾಖಲಿತ ರಸ್ತೆಯ ಭೂಗಡಿಯ ಅಂಚಿನಿಂದ ನಿಗಧಿಗೊಳಿಸಲಾಗಿದ್ದ ಕಟ್ಟಡ ರೇಖೆಯು ರಾಜ್ಯ ಹೆದ್ದಾರಿಯ ಜೊತೆಗೆ ಜಿಲ್ಲಾ ಮುಖ್ಯ ರಸ್ತೆಗಳಿಗೂ ಈ ಕೆಳಕಂಡಂತೆ ಅನ್ವಯಿಸುತ್ತದೆ.
1. ಸಿಟಿ ಕಾರ್ಪೊರೇಷನ್, ಸಿಟಿ ಮುನ್ಸಿಪಲ್ ಕೌನ್ಸಿಲ್, ಟೌನ್ ಮುನ್ಸಿಪಲ್ ಕೌನ್ಸಿಲ್, ಟೌನ್ ಪಂಚಾಯತಿ, ಗ್ರಾಮ ಪಂಚಾಯತಿಯ ಪ್ರತೀ ಗ್ರಾಮಠಾಣಾ ಪರಿಮಿತಿ : 6 ಮೀಟರ್
2. ಸಿಟಿ ಕಾರ್ಪೊರೇಷನ್ ಪರಿಮಿತಿಯಿಂದ 15 ಕಿ.ಮೀ. ದೂರದವರೆಗೆ: 12 ಮೀಟರ್
ಮೇಲ್ಕಂಡ ಪರಿಮಿತಿಗಳನ್ನು ನಿಗಧಿಪಡಿಸಿ ನೀಡುವುದು ಆಯಾ ಸ್ಥಳೀಯ ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ. ಹಾಗೂ ಕರ್ನಾಟಕ ಹೆದ್ದಾರಿ ಕಾಯ್ದೆ 1964 ರ ಸೆಕ್ಷನ್ 4 ರ ಪ್ರಕಾರ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್‌ಗಳನ್ನು ಹೆದ್ದಾರಿ ಪ್ರಾಧಿಕಾರಿ ಎಂದು ಘೋಷಣೆ ಮಾಡಲಾಗಿದ್ದು, ದಾಖಲಿತ ರಸ್ತೆಯ ಭೂಗಡಿಯ ಅಂಚನ್ನು ಗುರುತಿಸುವುದು ಆಯಾ ಕಾರ್ಯಪಾಲಕ ಇಂಜಿನಿಯರ್‌ಗಳ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದೆ.
BREAKING: ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ: ಹೊತ್ತಿ ಉರಿಯುತ್ತಿರುವ ಟೈರ್ ಅಂಗಡಿ, ಬೆಂಕಿ ನಂದಿಸಲು ಹರಸಾಹಸ