ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಲ್ಲಿ ಕಡಿಮೆ ಎಣ್ಣೆ ಹಾಗೂ ಸಕ್ಕರೆ ಸೇವನೆ ಕುರಿತು ಜಾಗೃತಿ ಮೂಡಿಸುವ ಕುರಿತು ಮಾಹಿತಿ ಫಲಕ ಗಳನ್ನು ಅಳವಡಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಭಾರತದಲ್ಲಿ ಆಹಾರ ಪದ್ಧತಿ ಮತ್ತು ಕಡಿಮೆಯಾದ ದೈಹಿಕ ಚಟುವಟಿಕೆಯಿಂದ ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ಬೊಜ್ಜು ತೀವವಾಗಿ ಏರಿಕೆಯಾಗುತ್ತಿದೆ ಎಂದು ತಿಳಿಸಿರುತ್ತಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ( NFHS 2019-21 ) ವರದಿಯ ಪ್ರಕಾರ ನಗರ ಪ್ರದೇಶಗಳಲ್ಲಿ ಐದರಲ್ಲಿ ಒಬ್ಬ ವಯಸ್ಕರು ಅತಿ ತೂಕ ಮತ್ತು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದಿ ಲ್ಯಾನ್ಸೆಟ್ ಜಿಬಿಡಿ 2021 ರ ವರದಿಯು 2025 ರಲ್ಲಿ ಪ್ರಕಟವಾಗಿದ್ದು, ಈ ವರದಿಯ ಪ್ರಕಾರ ಭಾರತದಲ್ಲಿ ಬೊಜ್ಜು ಅಧಿಕ ತೂಕ ಅಥವಾ ಬೊಜ್ಜು ಹೊಂದುವವರು 2021 ರ ಸಾಲಿನಲ್ಲಿ 18 ಕೋಟಿಯಿಂದ 2050 ರ ವೇಳೆಗೆ 44.9 ಕೋಟಿಗೆ ಏರಿಕೆಯಾಗುವ ನಿರೀಕ್ಷೆಯಿದ್ದು ಭಾರತ ದೇಶವು ಜಾಗತಿಕ ಹೊರೆಯಲ್ಲಿ ಎರಡನೇ ಅತಿ ಹೆಚ್ಚು ಅಧಿಕ ತೂಕ ಮತ್ತು ಬೊಜ್ಜು ವಯಸ್ಕರ ಹೊಂದಿರುವ ದೇಶವಾಗಲಿದೆ ಎಂದು ಸೂಚಿಸಲಾಗಿದೆ.
ಸ್ಕೂಲಕಾಯತೆಯಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗಗಳು ಮತ್ತು ಕೆಲವು ಕ್ಯಾನ್ಸರ್ ಗಳಂತಹ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಇದರಿಂದ ಮಾನಸಿಕ ಒತ್ತಡ, ಚಲನಶೀಲತೆ ಮತ್ತು ಜೀವನಶೈಲಿಯು ಹಾಳಾಗುವುದಲ್ಲದೆ ಹೆಚ್ಚಿದ ಆರೋಗ್ಯ ವೆಚ್ಚಗಳು ಭಾರೀ ಆರ್ಥಿಕ ಹೊರೆಯನ್ನು ಹೇರುತ್ತದೆ ಮತ್ತು ಇದು ದೇಶದ ಉತ್ಪಾದಕತೆಯ ಮೇಲೂ ಪರಿಣಾಮ ಬೀರುತ್ತದೆ. ಈ ಪ್ರವೃತ್ತಿಗಳನ್ನು ಹಿಮ್ಮೆಟ್ಟಿಸಲು ಆರಂಭಿಕ ತಡೆಗಟ್ಟುವಿಕೆ ಮತ್ತು ಆರೋಗ್ಯ ಪ್ರಚಾರವು ಅವಶ್ಯಕವಾಗಿರುತ್ತದೆ.
ಶಾಲಾ ಆವರಣದಲ್ಲಿ ಸುಲಭವಾಗಿ ಲಭ್ಯವಿರುವ ಸಕ್ಕರೆ ತಿಂಡಿಗಳು, ಪಾನೀಯಗಳು ಮತ್ತು ಸಂಸ್ಕರಿಸಿದ ಆಹಾರಗಳ ಅತಿಯಾದ ಸೇವನೆಯ ಮೂಲಕ ಮಕ್ಕಳಲ್ಲಿ ಬರಬಹುದಾದ ಟೈಪ್ 2 ಮಧುಮೇಹವನ್ನು ತಡೆಗಟ್ಟಲು, ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಸಕ್ಕರೆ ಮಂಡಳಿಗಳನ್ನು ಸ್ಥಾಪಿಸಿ, ಅಲ್ಲಿ ವಿದ್ಯಾರ್ಥಿಗಳಿಗೆ ಅತಿಯಾದ ಸಕ್ಕರೆ ಸೇವನೆಯ ಅಪಾಯಗಳ ಬಗ್ಗೆ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುವುದು. ಇದು ವಿದ್ಯಾರ್ಥಿಗಳು ಮಾಹಿತಿಯುಕ್ತ ಆಹಾರ ಆಯ್ಕೆಗಳನ್ನು ಮಾಡಲು ಮತ್ತು ದೀರ್ಘಕಾಲೀನ ಆರೋಗ್ಯ ಪ್ರಯೋಜನಗಳನ್ನು ಉತ್ತೇಜಿಸಲು ಅನುವು ಮಾಡಿಕೊಡುತ್ತದೆ. ಶಾಲೆಗಳು ಈ ನಿಟ್ಟಿನಲ್ಲಿ ಜಾಗೃತಿ ವಿಚಾರ ಸಂಕಿರಣಗಳು/ ಕಾರ್ಯಾಗಾರಗಳನ್ನು ಆಯೋಜಿಸಲು ಈ ಮೂಲಕ ಸೂಚಿಸಿದೆ. ಈಗಾಗಲೇ ದಿನಾಂಕ 19.03.2025 ರಂದು ಇಲಾಖೆಯು ಆಹಾರಗಳಲ್ಲಿ 10% ಎಣ್ಣೆ ಕಡಿಮೆ ಬಳಕೆಯ ಬಗ್ಗೆ ಜ್ಞಾಪನಾವನ್ನು ಉಲ್ಲೇಖ-3 ರಲ್ಲಿರುವಂತೆ ಹೊರಡಿಸಲಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಲ್ಲಿ ಕಡಿಮ ಎಣ್ಣೆ ಹಾಗೂ ಸಕ್ಕರೆ ಸೇವನೆ ಕುರಿತು ಜಾಗೃತಿ ಮೂಡಿಸುವ ಕುರಿತು ಮಾಹಿತಿ ಫಲಕಗಳನ್ನು ಅಳವಡಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಲು ತಿಳಿಸಿದೆ:
1. ಶಾಲೆಯ ಆವರಣದಲ್ಲಿ ಸಾರ್ವಜನಿಕವಾಗಿ ಕಾಣುವಂತೆ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸಲು ಸಕ್ಕರೆ ಮತ್ತು ಎಣ್ಣೆಯ ಆಹಾರ ಪದಾರ್ಥಗಳ ಬಗ್ಗೆ ಮತ್ತು ದಿನನಿತ್ಯದ ಆಹಾರಗಳಲ್ಲಿ ಅಡಗಿರುವ ಕೊಬ್ಬುಗಳು ಮತ್ತು ಸಕ್ಕರೆಗಳ ಬಗ್ಗೆ ಸಲಹೆಗಳ= ಪ್ರಮುಖ ಮಾಹಿತಿಯ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸುವುದು. ಈ ಬಗ್ಗೆ ಮಾದರಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ.
2. ಸ್ಕೂಲಕಾಯತೆಯ ವಿರುದ್ಧ ಹೋರಾಡುವ ಬಗ್ಗೆ ದೈನಂದಿನ ಜ್ಞಾಪನಗಳನ್ನು ಬಲಪಡಿಸಲು ಎಲ್ಲಾ ಅಧಿಕೃತ ಲೇಖನ ಸಾಮಗ್ರಿಗಳಲ್ಲಿ (ಲೆಟರ್ಹೆಡ್ಗಳು, ಲಕೋಟೆಗಳು, ನೋಟ್ ಪ್ಯಾಡ್ಗಳು, ಫೋಲ್ಕರ್ಗಳು, ಇತ್ಯಾದಿ) ಮತ್ತು ಪ್ರಕಟಣೆಗಳಲ್ಲಿ ಆರೋಗ್ಯ ಸಂದೇಶಗಳನ್ನು ಮುದ್ರಿಸುವುದು.
3. ಶಾಲೆಗಳಲ್ಲಿ ಪೌಷ್ಟಿಕ, ಆರೋಗ್ಯಕರ ಆಹಾರ ಆಯ್ಕೆಗಳ ಲಭ್ಯತೆ (ಹೆಚ್ಚು ಹಣ್ಣುಗಳು, ತರಕಾರಿಗಳು ಮತ್ತು ಕಡಿಮೆ ಕೊಬ್ಬಿನ ಆಯ್ಕೆಗಳು, ಮತ್ತು ಸಕ್ಕರೆ ಪಾನೀಯಗಳು ಮತ್ತು ಹೆಚ್ಚಿನ ಕೊಬ್ಬಿನ ತಿಂಡಿಗಳ ಲಭ್ಯತೆಯನ್ನು ಸೀಮಿತಗೊಳಿಸುವ ಮೂಲಕ) ಮತ್ತು ಚಟುವಟಿಕೆ ಉಪಕ್ರಮಗಳು (ಮೆಟ್ಟಿಲುಗಳ ಬಳಕೆಯನ್ನು ಪ್ರೋತ್ಸಾಹಿಸುವುದು, ಸಣ್ಣ ವ್ಯಾಯಾಮ ವಿರಾಮಗಳನ್ನು ಆಯೋಜಿಸುವುದು ಮತ್ತು ನಡಿಗೆ ಮಾರ್ಗಗಳನ್ನು ಸುಗಮಗೊಳಿಸುವುದು) ಮೂಲಕ ಆರೋಗ್ಯಕರ ಊಟ ಮತ್ತು ದೈಹಿಕ ಚಟುವಟಿಕೆಯನ್ನು ಉತ್ತೇಜಿಸುವುದು.
4. ಆರೋಗ್ಯಕರ ಆಹಾರ ಆಯ್ಕೆಗಳ, ಎಣ್ಣೆ ಹಾಗೂಸಕ್ಕರೆ ಬಳಕೆ ಮತ್ತು ಜೀವನ ಶೈಲಿ ಆಧಾರಿತ ಆರೋಗ್ಯ ಸಮಸ್ಯೆಗಳ ಕುರಿತು ಸ್ಥಳೀಯ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಅವರ ಸಹಕಾರದೊಂದಿಗೆ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಲ್ಲಿ, ಶಿಕ್ಷಕರಲ್ಲಿ ಅರಿವು ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕ್ರಮ ವಹಿಸಲು ಸೂಚಿಸಿದೆ.
5. ಶಾಲಾ ಹಂತದಲ್ಲಿ “ಆರೋಗ್ಯ ರಾಯಭಾರಿಗಳನ್ನು” ನೇಮಿಸಿ ಶಾಲಾ ಪ್ರಾರ್ಥನಾ ಸಮಯದಲ್ಲಿ ಪ್ರತಿದಿನ ಸಕ್ಕರೆ ಹಾಗೂ ಎಣ್ಣೆ ಆಹಾರ ಪದಾರ್ಥಗಳ ಸೇವನೆ ಕುರಿತು ಮಾಹಿತಿಗಳನ್ನು ಪ್ರಚಾರಗೊಳಿಸುವುದು.
6. ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಂದ ಅನುಭವದ ಕಲಿಕೆಯ ಭಾಗವಾಗಿ ಎಣ್ಣೆ ಹಾಗೂ ಸಕ್ಕರೆಯ ಕುರಿತಾದ ಮಾಹಿತಿಯ ಬೋರ್ಡ್ಗಳನ್ನು, ಪೋಸ್ಟರ್, ರಸಪ್ರಶ್ನೆ ಚರ್ಚಾಸ್ಪರ್ದೆ, ಗಳನ್ನು ಹಮ್ಮಿಕೊಳ್ಳಲು ಪ್ರೋತ್ಸಾಹಿಸುವುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಪೋಸ್ಟರ್ಗಳು, ವೀಡಿಯೊಗಳು ಇತ್ಯಾದಿಗಳನ್ನು ಒಳಗೊಂಡಂತೆ ಸಂಬಂಧಿತ IEC ಸಾಮಗ್ರಿಗಳು https://youtube.com/playlist?list=Ple cE1U0Q6EYEmilGQI44zaplH3k2ki04&feat ನಲ್ಲಿ ಲಭ್ಯವಿರುತ್ತದೆ ಹಾಗೂ ಈ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ iec@fssai.gov.in ಇ-ಮೇಲ್ ಗೆ ಸಂಪರ್ಕಿಸಬಹುದಾಗಿರುತ್ತದೆ.