ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಸ್ವತ್ತು ಅಕ್ರಮವಾಗಿ ಆಕ್ರಮಿಸಿಕೊಳ್ಳೋದು, ಮಾರಾಟ ಮಾಡೋದು, ಕಬಳಿಸೋದು, ಸ್ವಾಧೀನ ಮಾಡೋದು ಅಪರಾಧ. ಆ ಎಲ್ಲಾ ಅಪರಾಧಗಳಿಗೆ ಸಾರ್ವಜನಿಕರಿಗೆ ಏನೆಲ್ಲ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ ಎನ್ನುವ ಬಗ್ಗೆ ಉಪಯುಕ್ತ ಮಾಹಿತಿ ಮುಂದಿದೆ ಓದಿ.
ಈ ಸಂಬಂಧ ಕರ್ನಾಟಕ ಭೂ ಕಂದಾಯ ಅಧಿನಿಯ 1964ರ 192-ಎ ಅಡಿಯಲ್ಲಿ ಸರ್ಕಾರಿ ಸ್ವತ್ತಿನ ಕುರಿತಂತೆ ಮಹತ್ವದ ಮಾಹಿತಿ ನೀಡಲಾಗಿದೆ. ಈ ಕಾಯ್ದೆಯಲ್ಲಿ ಏನೇ ಒಳೊಳಗೊಂಡಿದ್ದರೂ ಅಥವಾ ನಿಯಮಗಳನ್ನು ಏನೇ ಇದ್ದರೂ ಯಾವನೊಬ್ಬ ವ್ಯಕ್ತಿ, ಈ ಕೆಳಗಿನ ಪಟ್ಟಿ ಕಲಂ(2)ರಲ್ಲಿ ನಿರ್ದಿಷ್ಟ ಪಡಿಸಲಾದ ಅಪರಾಧ ಎಸಗಿದರೇ ನ್ಯಾಹಿಕ ದಂಡಾಧಿಕಾರಿಗಳು ಪ್ರಥಮ ದರ್ಜೆಯವರಿಂದ ವಿಚಾರಣೆ ನಡೆಸಿ ಈ ಕೆಳಗಿನಂತೆ ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ.
- ಸರ್ಕಾರಿ ಸ್ವತ್ತನ್ನು ಅಕ್ರಮವಾಗಿ ಆಕ್ರಮಿಸಿ, ಸರ್ಕಾರಿ ಸ್ವತ್ತೆಂದು ಗೊತ್ತಿದ್ದು ಹೊಂದಿದ್ದರೇ, ಪರಂತು ಈ ಮೇಲ್ಕಂಡ ಉಪಬಂಧವು ಜಮ್ಮಾ ಕೊಡಗು ಜಿಲ್ಲೆಯಲ್ಲಿನ ಭಾನೆ ಸ್ವತ್ತುಗಳು ಮತ್ತು ಕಲಮು 94ಎ, 94ಬಿ ಮತ್ತು 94ಸಿ ರಡಿಯಲ್ಲಿ ಸ್ಥಾಪಿಸಲಾದ ಸಮಿತಿಗಳ ಮುಂದೆ ಕ್ರಮಬದ್ಧಗೊಳಿಸಲು ಅರ್ಜಿಗಳು ವಿಲೇ ಇದ್ದರೆ ಅನ್ವಯವಾಗತಕ್ಕದ್ದಲ್ಲ ಎಂದಿದೆ. ಈ ಮೇಲಿನ ಅಪರಾಧಕ್ಕೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 5000 ದಂಡವನ್ನು ವಿಧಿಸಬಹುದಾಗಿದೆ.
- ಸರ್ಕಾರಿ ಸ್ವತ್ತನ್ನು ಮಾರಾಟ ಮಾಡಲು, ಅಡಮಾನ ಮಾಡಲು, ದಾನದ ಮೂಲಕ ಹಸ್ತಾಂತರಿಸಲು ದಸ್ತಾವೇಜುಗಳನ್ನು ಸೃಷ್ಠಿಸಿ ವಂಚಿಸಿದ್ದರೇ 3 ವರ್ಷ ಜೈಲು ಮತ್ತು 10,000 ದಂಡ ವಿಧಿಸಬಹುದಾಗಿದೆ.
- ಸರ್ಕಾರಿ ಸ್ವತ್ತನ್ನು ಕಬಳಿಸುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದರೇ 3 ವರ್ಷ ಜೈಲು ಮತ್ತು 5000 ದಂಡ ವಿಧಿಸಬಹುದಾಗಿದೆ.
- ಸರ್ಕಾರಿ ಸ್ವತ್ತುಗಳ ಅಕ್ರಮ ಸ್ವಾಧೀನತೆ, ಇವುಗಳ ತೆರವು ಮತ್ತಿತರ ಕಾರ್ಯಗಳನ್ನು ನಿರ್ವಹಿಸಲು ಅಧಿಕೃತನಾದ ಕಂದಾಯ ಅಧಿಕಾರಿ ಕ್ರಮ ಕೈಗೊಳ್ಳಲು ವಿಫಲನಾರೇ 3 ವರ್ಷಗಳ ಕಾರಗೃಹ ವಾಸ ಮತ್ತು 10,000 ದಂಡ ವಿಧಿಸಲಿದೆ.
- ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಭೂ ಪರಿವರ್ತನೆ ಮಾಡದೆ ಮತ್ತು ಸಂಬಂಧಿಸಿದ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೇ ಮಾರಾಟ ಮಾಡಿದರೇ 3 ವರ್ಷಗಳ ಕಾರಾಗೃಹ ವಾಸ ಮತ್ತು 10,000 ದಂಡ ಬೀಳಲಿದೆ.
- ಕೃಷಿ ಭೂಮಿಯನ್ನ ಕೃಷಿಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತನೆ ಮಾಡಲು ನಕಲಿ ದಾಖಲೆ ಸೃಷ್ಟಿಸಿದ್ದರೇ 1 ವರ್ಷ ಜೈಲು ಮತ್ತು 5000 ದಂಡ ವಿಧಸಬಹುದಾಗಿದೆ.
- ಅಕ್ರಮ ಭೂ ಪರಿವರ್ತನೆ ಮತ್ತು ಕಡತಗಳ ನಿರ್ವಹಣೆ ಮಾಡುವ ಹೊಣೆ ಹೊತ್ತ ಸಾರ್ವಜನಿಕ ನೌಕರ ಅಂತಹ ಹೊಣೆಯನ್ನು ಸಕ್ಷಮ ಪ್ರಾಧಿಕಾರಕ್ಕೆ ವರದಿ ಮಾಡುವ ಕ್ರಮ ಕೈಗೊಳ್ಳಲು ವಿಫಲವಾದರೇ 3 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 10000 ದಂಡ ವಿಧಿಸಬಹುದಾಗಿದೆ.
- ಈ ಕಾಯ್ದೆಯ ಉಪ ಬಂಧಗಳಿಗೆ ವಿರುದ್ಧವಾಗಿ ಆದೇಶ ಮಾಡಿದ್ದೇ ಆದಲ್ಲಿ ಅಂತಹ ಅಧಿಕಾರಿಯ ವಿರುದ್ಧವೂ 5000 ದಂಡ ವಿಧಿಸಿ, ನಂತ್ರದ ಅಪರಾಧಗಳಿಗೆ 5 ಪಟ್ಟು ದಂಡವನ್ನು ವಿಧಿಸಬಹುದಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ
BREAKING : ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ `ಯುವನಿಧಿ’ ವಿಶೇಷ ನೋಂದಣಿ ಅಭಿಯಾನ : ಸರ್ಕಾರ ಮಹತ್ವದ ಆದೇಶ.!
ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ: ಪತಿ, ಅತ್ತೆಯ ವಿರುದ್ಧ ಕುಟುಂಬಸ್ಥರಿಂದ ಕೊಲೆ ಆರೋಪ