Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದಲ್ಲಿ ಪ್ರಾಮಾಣಿಕತೆ ಮೆರೆದ ಬೇಕರಿ ಐಟಂ ವಿತರಕ: ದಾರಿಯಲ್ಲಿ ಸಿಕ್ಕ 6,500 ಪೊಲೀಸರಿಗೆ ನೀಡಿಕೆ

16/05/2025 12:42 PM

BREAKING : `ಆಪರೇಷನ್ ಸಿಂಧೂರ್’ ಹೆಸರು ಇಟ್ಟಿದ್ದು ಪ್ರಧಾನಿ ಮೋದಿ : ರಾಜನಾಥ್ ಸಿಂಗ್ | WATCH VIDEO

16/05/2025 12:37 PM

ಅಂತರ್ಜಾತೀಯ ವಿವಾಹ ಕಿರುಕುಳ ಪ್ರಕರಣ: ವಿಚ್ಛೇದನ ಬೆದರಿಕೆ ಕ್ರೌರ್ಯವಲ್ಲ ಎಂದ ಬಾಂಬೆ ಹೈಕೋರ್ಟ್

16/05/2025 12:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರಿಗೆ ಮಹತ್ವದ ಮಾಹಿತಿ: ನೀವು ಸಮುದ್ರ ದಂಡೆಗೆ ಭೇಟಿ ನೀಡ್ತಿದ್ದೀರಾ.? ಈ ವಿಷಯ ತಿಳಿಯಿರಿ
KARNATAKA

ಸಾರ್ವಜನಿಕರಿಗೆ ಮಹತ್ವದ ಮಾಹಿತಿ: ನೀವು ಸಮುದ್ರ ದಂಡೆಗೆ ಭೇಟಿ ನೀಡ್ತಿದ್ದೀರಾ.? ಈ ವಿಷಯ ತಿಳಿಯಿರಿ

By kannadanewsnow0915/12/2024 5:23 PM

ಬೆಂಗಳೂರು: ಕೆಲ ದಿನಗಳ ಹಿಂದೆ ಮುರುಡೇಶ್ವರಕ್ಕೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದಂತ ಶಾಲಾ ಮಕ್ಕಳು ಸಮುದ್ರಪಾಲಾಗಿ ಹೋಗಿದ್ದರು. ನೀವು ಸಮುದ್ರ ದಂಡೆಗೆ ಪ್ರವಾಸಕ್ಕೆ ತೆರಳುತ್ತಿದ್ದರೇ ಅದಕ್ಕೂ ಮುನ್ನಾ ಈ ಕೆಳಗಿನ ವಿಷಯಗಳು ತಿಳಿದಿರಲಿ. ಅದೇನು ಅಂತ ಮುಂದೆ ಓದಿ.

ಈ ಮಾಹಿತಿಯನ್ನು ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಅವರು ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲಿ ಶಿಕ್ಷಣ ಇಲಾಖೆಯ ಒಂದು ಭಾಗವಾದ ಡಯಟ್ ನ ಮಂಗಳೂರು ಜಿಲ್ಲೆಯ ನಿವೃತ್ತ ಪ್ರವಾಚಕರಾದ (Reader) ದಿವಾಕರ್ ಶೆಟ್ಟಿ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಮಹತ್ವದ ಮಾಹಿತಿ ಇದು ಎಂದು ಹೇಳಿದ್ದಾರೆ.

ಕರ್ನಾಟಕದ ಶಿಕ್ಷಣ ಇಲಾಖೆ ಎಲ್ಲಾ ಶಾಲೆಗಳಿಗೆ ಮತ್ತು ಕಾಲೇಜುಗಳಿಗೆ ಈ ಮಾಹಿತಿಯನ್ನು ಕಳಿಸಿ ಎಲ್ಲರಿಗೂ ಈ ಕುರಿತು ತಿಳುವಳಿಕೆ ಕೊಡುವುದು ಅತ್ಯಗತ್ಯ. ನಾನು ಈ ಮಾಹಿತಿಯನ್ನು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಿಕ್ಷಣ ಇಲಾಖೆಯ ಆಯುಕ್ತರ ಜೊತೆಯೂ ಹಂಚಿಕೊಂಡಿದ್ದೇನೆ ಎಂದಿದ್ದಾರೆ.

ಸಮುದ್ರ ದಂಡೆಗೆ ಭೇಟಿ ನೀಡುವ ಎಲ್ಲರಿಗೂ ಈ ವಿಷಯ ತಿಳಿದಿರಲಿ

ಮೊನ್ನೆ ಒಂದು ಆಘಾತಕಾರಿ ಸುದ್ದಿ ಎಲ್ಲರೂ ಓದಿದ್ದೇವೆ. ಮುರುಡೇಶ್ವರಕ್ಕೆ ಶೈಕ್ಷಣಿಕ ಪ್ರವಾಸಕ್ಕೆ ಬಂದ ಮೂವರು ಮಕ್ಕಳು ಸಮುದ್ರದಲ್ಲಿ ತೇಲಿ ಹೋದರು. ಜನ ಮುಳುಗಿ ಮೃತಪಟ್ಟರು ಎಂದು ಭಾವಿಸಿದ್ದಾರೆ. ಆದರೆ ಅದು ಮುಳುಗಿ ಮೃತಪಟ್ಟದ್ದಲ್ಲ ತೇಲಿ ಹೋದದ್ದು. ಇಂತಹ ಪರಿಸ್ಥಿತಿ ಎದುರಾದಾಗ ನುರಿತ ಈಜುಗಾರರು ಕೂಡಾ ಗಲಿಬಿಲಿಗೊಳ್ಳುತ್ತಾರೆ. ಆ ಗಲಿಬಿಲಿಯಲ್ಲಿ ಏನು ಮಾಡಬೇಕೆಂದು ತಿಳಿಯದೇ ದಡದ ಕಡೆ ಈಜಿ ಸ್ನಾಯು ಸೋಲಿನಿಂದ ಮುಳುಗಿ ಮೃತಪಟ್ಟ ಉದಾಹರಣೆಗಳಿವೆ.

ಬಹಳ ವರ್ಷಗಳ ಹಿಂದೆ ಕುಂದಾಪುರ ಸಮೀಪದ ಕೋಡಿ ಬೀಚ್ ನಲ್ಲಿ ನಮ್ಮ ಶಿಕ್ಷಕರೊಬ್ಬರ ಮಗ ಅವರ ಎದುರೇ ತೇಲಿ ಹೋದದ್ದು ನನಗೇ ಇನ್ನೂ ಮರೆಯುವುದು ಸಾಧ್ಯವಾಗಿಲ್ಲ. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ2022 ರಲ್ಲಿ 77 ಜನ ಈ ಕಾರಣದಿಂದ ಸತ್ತಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಹಾಗಾದರೆ ಈ ಮಕ್ಕಳ ಸಾವಿಗೆ ಕಾರಣವಾದ ಅಂಶದ ಬಗ್ಗೆ ಈ ಹಿಂದೆ ಕೂಡಾ ಬರೆದಿದ್ದೆ. ಇವತ್ತು ಮತ್ತೊಮ್ಮೆ ಬರೆಯುತ್ತಿದ್ದೇ‌ನೆ. ದಯವಿಟ್ಟು ಸಮುದ್ರ ದಂಡೆಗೆ ಭೇಟಿ ನೀಡುವ ಎಲ್ಲರಿಗೂ ಈ ಮಾಹಿತಿ ತಲುಪಿಸುತ್ತೀರಿ ಮತ್ತು ತಲುಪಿಸಬೇಕು ಎಂಬುದೇ ನನ್ನ ಪ್ರಾರ್ಥನೆ ಎಂದಿದ್ದಾರೆ.

ಮಕ್ಕಳನ್ನು ಬಲಿ ತೆಗೆದುಕೊಂಡ ಈ ವಿದ್ಯಮಾನದ ಹೆಸರು “ರಿಪ್ ಪ್ರವಾಹಗಳು” (Rip currents).

ನದಿಗಳಲ್ಲಿ ಇಲ್ಲಿ ಸುಳಿಗಳಿವೆ ಎಂದು ಎಚ್ಚರಿಕೆ ಫಲಕಗಳನ್ನು ಹಾಕಿದ ಹಾಗೆ ಸಮುದ್ರದಲ್ಲಿ ಇಲ್ಲಿ ರಿಪ್ ಪ್ರವಾಹಗಳಿವೆ ಎಂದು ಬೋರ್ಡ್ ಹಾಕಲು ಸಾಧ್ಯವಿಲ್ಲ.

ಏಕೆಂದರೆ ರಿಪ್ ಪ್ರವಾಹಗಳು ನಿರೀಕ್ಷಿತವಲ್ಲ. ಇವು ಏಕಾಏಕಿ ರೂಪಗೊಳ್ಳುತ್ತವೆ. ಆದ್ದರಿಂದ ಯಾವುದೇ ಮುನ್ನೆಚ್ಚರಿಕೆ ಸಾಧ್ಯವಿಲ್ಲ. ಹಾಗಾದರೆ ಈ ಮಾರಕ ಪ್ರವಾಹಗಳು ರೂಪುಗೊಳ್ಳುವುದಾದರೂ ಹೇಗೆ?

ನಾವೆಲ್ಲರೂ ಸಮುದ್ರ ದಂಡೆಗೆ ಹೋಗುವುದದರೂ ಏಕೆ? ಅಲೆಗಳ ಮೋಹಕತೆಗೆ ಮನಸೋತು ಅಲ್ಲವೇ? ಮತ್ತೆ ಮತ್ತೆ ಅಲೆಗಳು ದಡಕ್ಕೆ ಬಂದು ಬಡಿಯುತ್ತಲೇ ಇರುತ್ತವೆ. ಆ ದಡ ಸೋಲುವುದಿಲ್ಲ, ಅಲೆಗಳು ದಣಿಯುವುದಿಲ್ಲ.

ಆ ಏಕಾತಾನತೆಯಲ್ಲಿಯೇ ಅದು ನಿಮಗೆ ನಿತ್ಯ ಸ್ಪೂರ್ತಿಯ ಸೆಲೆ. ಅಲೆಗಳು ಬಂದು ದಡಕ್ಕೆ ಬಡಿಯುವಂತೆ ಮಾಡುವುದು ಗಾಳಿಯ ಶಕ್ತಿ. ಗಾಳಿ ಈ ನೀರನ್ನು ಮಡಚಿ ಅಲೆಗಳಂತೆ ಮಾಡಿ ದಡಕ್ಕೆ ತಂದು ಸುರಿಯುತ್ತದೆ. ದಡದಲ್ಲಿ ಉಂಟಾಗುವ ಈ ನೀರಿನ ಬೆಟ್ಟ ಒಮ್ಮೆಲೇ ಹಿಂದಕ್ಕೆ ಸರಿಯುವ ನೀರು ಅಡ್ಡ ಬರುವ ಸಣ್ಣ ಪುಟ್ಟ ವಸ್ತುಗಳನ್ನು ತನ್ನ ಜೊತೆಗೆ ಒಯ್ಯುತ್ತದೆ.

ಈ ಹಿಂದಿರುಗುವ ನೀರು ಯಾವಾಗಲೂ ಕಡಿಮೆ ಅಡೆತಡೆ ಇರುವ ಜಾಗವನ್ನು ಹುಡುಕುತ್ತವೆ. ಎಲ್ಲಾ ಜಾಗ ಒಂದೇ ಇದ್ದರೆ ಎಲ್ಲಾ ಕಡೆಯಲ್ಲೂ ಒಂದೇ ರೀತಿ ಹರಡುತ್ತದೆ. ಚಿತ್ರವನ್ನು ನೋಡಿ ದಡದ ಮೇಲೆ ಮರಳು ದಿಬ್ಬಗಳಿರುವ ಹಾಗೆ ಸಮುದ್ರದ ಒಳಗೂ ಇರುತ್ತವೆ. ಈ ದಿಬ್ಬಗಳು ಅಖಂಡವಾಗಿರದೇ ಮಧ್ಯದಲ್ಲಿ ಖಾಲಿ ಜಾಗ ಇರಬಹುದು ಮತ್ತು ಈ ಖಾಲಿ ಜಾಗ ಬದಲಾಗುತ್ತದೆ ಕೂಡಾ. ಈ ಖಾಲಿ ಜಾಗದಲ್ಲಿ ಸಮುದ್ರ ಆಳವಾಗಿರುವುದರಿಂದ ನೀರಿನ ಬೆಟ್ಟ ಆ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತದೆ.

ಆದ್ದರಿಂದ ಆ ಕಂಡಿಯ ಆಚೆ ಈಚೆ ಇರುವ ನೀರು ಪ್ರವಾಹದ ರೂಪದಲ್ಲಿ ದಂಡೆ ಸಮಾಂತರವಾಗಿ ವಿರುಧ್ಧ ನೇರದಲ್ಲಿ ಕಂಡಿ ಇರುವ ಕಡೆಗೆ ನುಗ್ಗುತ್ತವೆ. ಕಂಡಿ ಇರುವ ಕಡೆ ಪರಸ್ಪರ ಢಿಕ್ಕಿಯಾಗುವ ಈ ಪ್ರವಾಹಗಳು ಸಮುದ್ರದ ಒಳಗೆ ನುಗ್ಗುತ್ತವೆ. ಈ ಅಭಿಮುಖ ಪ್ರವಾಹಗಳು ಪೂರಕ ಪ್ರವಾಹಗಳು (feeder currents). ಪೂರಕ ಪ್ರವಾಹಗಳು ಒಂದಾಗಿ ರಭಸವಾಗಿ ಸಮುದ್ರದ ಒಳಗೆ ನುಗ್ಗುವ ಭಾಗವೇ ಪ್ರವಾಹದ ಕತ್ತು (neck). ಇದಕ್ಕೆ ಎದುರಾಗಿ ಈಜಿ ಎಂತಹ ಅನುಭವಿ ಈಜುಗಾರನೂ ಕೂಡಾ ದಡ ಸೇರಿದ ಉದಾಹರಣೆಗಳಿಲ್ಲ.

ನಂತರ ಈ ಪ್ರವಾಹ ಚದುರುತ್ತದೆ. ಅದೇ ತಲೆ (head) ತಲೆಯ ಭಾಗದಲ್ಲಿ ಅದು ಹೊರಕ್ಕೆ ಮತ್ತು ದುರ್ಬಲವಾಗುವುದರಿಂದ ಅಲ್ಲಿಂದ ಹೊರಗೆ ಈಜಿ ದಡದ ಕಡೆಗೆ ಈಜಬೇಕು. ಆದರೆ ಈಜೇ ಬಾರದ ಪುಟ್ಟ ಮಕ್ಕಳು ಅನನುಭವಿಗಳು ಬಲು ಬೇಗನೇ ಮುಳುಗಿ ಸಾಯುತ್ತಾರೆ. ಹಾಗಾದರೆ ಈ ಪ್ರವಾಹವನ್ನು ಮುಂಚಿತವಾಗಿ ಗುರುತಿಸುವುದು ಸಾಧ್ಯವಿಲ್ಲವೇ? ಸಾಧ್ಯ. ಆದರೆ ಹೇಗೆ?

ಸಮುದ್ರದ ನೀರು ಸಮುದ್ರದ ಒಳಗೆ ಹೋಗುವ ಬದಲಾಗಿ ಅಡ್ಡಕ್ಕೆ ಚಲಿಸುತ್ತಿದ್ದರೆ ಅದು ನಿಸ್ಸಂಶಯವಾಗಿ ರಿಪ್ ಪ್ರವಾಹ. ಕಸ, ಸಮುದ್ರ ಕಳೆಗಳು ದಡಕ್ಕೆ ಸಮಾಂತರವಾಗಿ ಸಾಗುತ್ತಿದ್ದರೆ ಅದು ರಿಪ್ ಪ್ರವಾಹ. ನೀರು ಚಲನೆಯಲ್ಲಿದ್ದು ಕೆಸರಿನಿಂದ ಕೂಡಿದ್ದರೆ ಅಥವಾ ಕದಡಿದ್ದರೆ ಅದು ರಿಪ್ ಪ್ರವಾಹ.

ರಿಪ್ ಪ್ರವಾಹದಿಂದ ರಕ್ಷಿಸಿಕೊಳ್ಳುವುದು ಹೇಗೆ?

  1. ಯಾವುದೇ ಕಾರಣಕ್ಕೂ ಮಣಕಾಲು ಮಟ್ಟದ ನೀರಿಗಿಂತ ಹೆಚ್ಚಿನ ಆಳಕ್ಕೆ ಮಕ್ಕಳನ್ನು ಹೋಗಲು ಬಿಡಬೇಡಿ.
  2. ಜೀವ ರಕ್ಷಕರಿಲ್ಲದ (lifeguards) ಸಮುದ್ರ ದಂಡೆಗಳಲ್ಲಿ ನೀರಿಗೆ ಇಳಿಯಬೇಡಿ.
  3. ಕೆಲವು ಕಡೆ ಹಳದಿ ಮತ್ತು ಕೆಂಪು ಪತಾಕೆಗಳನ್ನು ಹಾಕಿರುತ್ತಾರೆ ಅಂತಹ ಜಾಗಗಳು ಸುರಕ್ಷಿತ ಮತ್ತು ಅಲ್ಲಿ ತೇಲಿ ಹೋಗುವವರನ್ನು ಗುರುತಿಸುವುದು ಸುಲಭ.
  4. ನೀವು ರಿಪ್ ಪ್ರವಾಹದಲ್ಲಿ ಸಿಲುಕಿ ಹಕಿಕೊಂಡಿದ್ದೀರಿ ಎಂದು ತಿಳಿದ ಕೂಡಲೆ ಪ್ರವಾಹಕ್ಕೆ ಲಂಬವಾಗಿ ಅಂದರೆ ದಂಡೆಗೆ ಸಮಾಂತರವಾಗಿ ಈಜಿ. ಪ್ರವಾಹದಿಂದ ಹೊರ ಬಂದಿದ್ದೀರಿ ಎಂದು ಅರಿವಾದಾಗ ದಂಡೆಯ ಕಡೆಗೆ ಈಜಿ. ಮೊದಲು ಯಾವುದೇ ಕಾರಣಕ್ಕೆ ದಡದ ಕಡೆಗೆ ಈಜಬೇಡಿ. ನ್ಯೂಜಿಲೆಂಡ್ ನ ಮುರಿವಾಲ್ ಬೀಚ್ ನಲ್ಲಿ ರಿಪ್ ಪ್ರವಾಹದಿಂದ ತಪ್ಪಿಸಿಕೊಳ್ಳುವ ಒಂದು ಪದವಿ ಇದೆ ನೀಡುವ ಕಾಲೇಜು ಇದೆ ಎಂದು ನಿಮಗೆ ಗೊತ್ತೇ? ಅಲ್ಲಿನ ತಜ್ಞರ ಪ್ರಕಾರ ನುರಿತ ಈಜುಗಾರ ಕೂಡಾ ಸರಿಯಾಗಿ ಈಜಿದರೆ 300 ಮೀಟರ್‌ನಷ್ಟು ಕಡಲೊಳಗೆ ಒಯ್ಯಲ್ಪಡುತ್ತಾನೆ ಮತ್ತು ದಡವನ್ನು ತಲುಪು ಮತ್ತೆ 400 ಮೀಟರ್ ಈಜಬೇಕಾಗುತ್ತದೆ ಎನ್ನುತ್ತಾರೆ. ಅಂದರೆ ನೀವು ಧೈರ್ಯ ಕಳೆದುಕೊಂಡಿರೋ ನೀವು ಸತ್ತ ಹಾಗೆ.
  5. ಸಮುದ್ರ ದಂಡೆಗೆ ಪ್ರವಾಸ ಹೋಗುವುದಾದರೆ ಮಕ್ಕಳಿಗೆ ಈ ಬಗ್ಗೆ ವಿವರವಾದ ಮಾಹತಿ ನೀಡಿ.

ಲೇಖಕರು: ದಿವಾಕರ ಶೆಟ್ಟಿ, ನಿವೃತ್ತ ಪ್ರಾಚಾರ್ಯರು, ಡಯಟ್, ಮಂಗಳೂರು

ಆನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ ಖಂಡ್ರೆ

ಮಾನವೀಯತೆ ಮೆರೆದ ಶಾಸಕ ಬೇಳೂರು ಗೋಪಾಲಕೃಷ್ಣ: ಗಾಯಾಳುಗಳಿಗೆ ಖುದ್ದು ಮುಂದೆ ನಿಂತು ಚಿಕಿತ್ಸೆ

BREAKING : ಬೆಂಗಳೂರಲ್ಲಿ ಮೊಬೈಲ್ ಕದ್ದು ಪರಾರಿಯಗಲು ಯತ್ನ : ಕಳ್ಳರನ್ನು ಚೇಸ್ ಮಾಡಿ ದಿಗಿಲು ಹಿಡಿಸಿದ ಮಾಜಿ ಕಾರ್ಪೊರೇಟರ್

Share. Facebook Twitter LinkedIn WhatsApp Email

Related Posts

ಸಾಗರದಲ್ಲಿ ಪ್ರಾಮಾಣಿಕತೆ ಮೆರೆದ ಬೇಕರಿ ಐಟಂ ವಿತರಕ: ದಾರಿಯಲ್ಲಿ ಸಿಕ್ಕ 6,500 ಪೊಲೀಸರಿಗೆ ನೀಡಿಕೆ

16/05/2025 12:42 PM1 Min Read

BIG NEWS : `ರೇಷನ್ ಕಾರ್ಡ್’ ನಲ್ಲಿ ಹೆಂಡತಿ, ಮಕ್ಕಳ ಹೆಸರು ಸೇರ್ಪಡೆಗೆ ಇಲ್ಲಿದೆ ಸುಲಭ ವಿಧಾನ | Ration card

16/05/2025 12:30 PM2 Mins Read

BREAKING : ಹುಬ್ಬಳ್ಳಿಯಲ್ಲಿ `ತಿರಂಗಯಾತ್ರೆ’ ಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ | WATCH VIDEO

16/05/2025 12:04 PM1 Min Read
Recent News

ಸಾಗರದಲ್ಲಿ ಪ್ರಾಮಾಣಿಕತೆ ಮೆರೆದ ಬೇಕರಿ ಐಟಂ ವಿತರಕ: ದಾರಿಯಲ್ಲಿ ಸಿಕ್ಕ 6,500 ಪೊಲೀಸರಿಗೆ ನೀಡಿಕೆ

16/05/2025 12:42 PM

BREAKING : `ಆಪರೇಷನ್ ಸಿಂಧೂರ್’ ಹೆಸರು ಇಟ್ಟಿದ್ದು ಪ್ರಧಾನಿ ಮೋದಿ : ರಾಜನಾಥ್ ಸಿಂಗ್ | WATCH VIDEO

16/05/2025 12:37 PM

ಅಂತರ್ಜಾತೀಯ ವಿವಾಹ ಕಿರುಕುಳ ಪ್ರಕರಣ: ವಿಚ್ಛೇದನ ಬೆದರಿಕೆ ಕ್ರೌರ್ಯವಲ್ಲ ಎಂದ ಬಾಂಬೆ ಹೈಕೋರ್ಟ್

16/05/2025 12:31 PM

BIG NEWS : `ರೇಷನ್ ಕಾರ್ಡ್’ ನಲ್ಲಿ ಹೆಂಡತಿ, ಮಕ್ಕಳ ಹೆಸರು ಸೇರ್ಪಡೆಗೆ ಇಲ್ಲಿದೆ ಸುಲಭ ವಿಧಾನ | Ration card

16/05/2025 12:30 PM
State News
KARNATAKA

ಸಾಗರದಲ್ಲಿ ಪ್ರಾಮಾಣಿಕತೆ ಮೆರೆದ ಬೇಕರಿ ಐಟಂ ವಿತರಕ: ದಾರಿಯಲ್ಲಿ ಸಿಕ್ಕ 6,500 ಪೊಲೀಸರಿಗೆ ನೀಡಿಕೆ

By kannadanewsnow0916/05/2025 12:42 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಬೇಕರಿ ಅಂಗಡಿಗಳಿಗೆ ತಿನಿಸು ಸರಬರಾಜು ಮಾಡುವಂತ ವ್ಯಕ್ತಿಗೆ ದಾರಿಯಲ್ಲಿ ರೂ.6,500 ಹಣ ಸಿಕ್ಕಿದೆ. ಅದನ್ನು ಸಾಗರ…

BIG NEWS : `ರೇಷನ್ ಕಾರ್ಡ್’ ನಲ್ಲಿ ಹೆಂಡತಿ, ಮಕ್ಕಳ ಹೆಸರು ಸೇರ್ಪಡೆಗೆ ಇಲ್ಲಿದೆ ಸುಲಭ ವಿಧಾನ | Ration card

16/05/2025 12:30 PM

BREAKING : ಹುಬ್ಬಳ್ಳಿಯಲ್ಲಿ `ತಿರಂಗಯಾತ್ರೆ’ ಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ | WATCH VIDEO

16/05/2025 12:04 PM

BREAKING : `ಇಸ್ಕಾನ್’ ದೇವಾಲಯ ಬೆಂಗಳೂರಿನ ಇಸ್ಕಾನ್ ಸೊಸೈಟಿಗೆ ಸೇರಿದ್ದು : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

16/05/2025 11:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.