ಬೆಂಗಳೂರು: 2024-25ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ ಪೂರ್ವಭಾವಿ ಚಟುವಟಿಕೆಗಳ ಭಾಗವಾಗಿ ಡಿಸೆಂಬರ್ 2024ರ ಅಂತ್ಯಕ್ಕೆ ಶಿಕ್ಷಕರ ಅಂತಿಮ ವೇಯ್ಟೇಡ್ ಅಂಕಗಳನ್ನು ತಂತ್ರಾಂಶದಲ್ಲಿ ಪ್ರಕಟಿಸಲಾಗಿದೆ ಎಂಬುದಾಗಿ ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.
ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿದ್ದು, 2024-25ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ, ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರಾಥಮಿಕ / ಪ್ರೌಢಶಾಲಾ ಸಹಶಿಕ್ಷಕರ ಮತ್ತು ಮುಖ್ಯ ಶಿಕ್ಷಕರುಗಳ, ಡಿಸೆಂಬರ್ ತಿಂಗಳವರೆಗೂ ನವೀಕರಿಸಿದ ಶಿಕ್ಷಕರ ಸೇವಾ ವಿವರದ ಆಧಾರದ ಮೇಲೆ ಗಣನೆಗೆ ತೆಗೆದುಕೊಂಡು ಕರಡು ವೇಯ್‌ಡ್ ಅಂಕಗಳನ್ನು, ಇ.ಇ.ಡಿ.ಎಸ್. ತಂತ್ರಾಂಶದಲ್ಲಿನ ಶಿಕ್ಷಕರ ಲಾಗಿನ್‌ನಲ್ಲಿ ಹಾಗೂ ಇಲಾಖಾ ವೆಬ್‌ಸೈಟ್ ನಲ್ಲಿ ಉಲ್ಲೇಖ 3 ರಲ್ಲಿ ಪ್ರಕಟಿಸಿ, ಸೇವಾ ಮಾಹಿತಿಯ ಇಂದೀಕರಣಕ್ಕಾಗಿ ದಿನಾಂಕ : 20-03-2025 ರವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು ಎಂದು ತಿಳಿಸಿದೆ.
ಮುಂದುವರೆದು, ಉಲ್ಲೇಖ 4 ರಲ್ಲಿ ಇಇಡಿಎಸ್‌ನಲ್ಲಿ ಎಲ್ಲಾ ನೌಕರರ ಮಾಹಿತಿಯನ್ನು ಇಂದೀಕರಣ ಮಾಡಲು ದಿನಾಂಕ : 28-03-2025 ರವರೆಗೆ ಮತ್ತೊಮ್ಮೆ ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಅಲ್ಲದೇ ಉಲ್ಲೇಖ 5 ರಲ್ಲಿ ಇಇಡಿಎಸ್‌ನಲ್ಲಿ ಇಂದೀಕರಣಕ್ಕಾಗಿ ಈ ಹಿಂದೆ ಹಲವಾರು ಬಾರಿ ಕಾಲಾವಕಾಶವನ್ನು ಕಲ್ಪಿಸಲಾಗಿರುತ್ತದೆ ಎಂದು ಹೇಳಿದೆ.
ವರ್ಗಾವಣೆಗೆ ಸಂಬಂಧಿಸಿದ ವಿವಿಧ ಕಾರ್ಯಗಳ ನಿರ್ವಹಿಸಬೇಕಾಗಿರುವುದರಿಂದ ಮತ್ತು ಈಗಾಗಲೇ ಇಇಡಿಎಸ್‌ನಲ್ಲಿ ಮಾಹಿತಿ ಇಂದೀಕರಣಕ್ಕಾಗಿ ಸಾಕಷ್ಟು ಕಾಲಾವಕಾಶವನ್ನು ನೀಡಿರುವುದರಿಂದ ಇನ್ನೂ ಮುಂದೆ ಇಇಡಿಎಸ್‌ನಲ್ಲಿ ಇಂದೀಕರಣ / ತಿದ್ದುಪಡಿ / ಬದಲಾವಣೆಯನ್ನು ವರ್ಗಾವಣೆಗೆ ಪರಿಗಣಿಸಲಾಗುವುದಿಲ್ಲ ಎಂದಿದೆ.
ಅಂತಿಮವಾಗಿ ಪ್ರಕಟಿಸಲ್ಪಟ್ಟ ಸೇವಾ ಅಂಕಗಳನ್ನೇ ಪ್ರಸಕ್ತ ಸಾಲಿನಲ್ಲಿ ನಡೆಯುವ ವರ್ಗಾವಣೆಯ ಎಲ್ಲಾ ಪ್ರಕ್ರಿಯೆಗಾಗಿ ಪರಿಗಣಿಸಲಾಗುವುದೆಂದು ತಿಳಿಸಲಾಗಿದೆ ಹಾಗೂ ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರಾಥಮಿಕ / ಪ್ರೌಢಶಾಲಾ ಸಹಶಿಕ್ಷಕರ ಮತ್ತು ಮುಖ್ಯ ಶಿಕ್ಷಕರುಗಳ ಅಂತಿಮ ಸೇವಾ ಅಂಕಗಳನ್ನು (weighted score) ಇ.ಇ.ಡಿ.ಎಸ್. ತಂತ್ರಾಂಶದಲ್ಲಿನ ಶಿಕ್ಷಕರ ಲಾಗಿನ್, ಕ್ಷೇತ್ರಶಿಕ್ಷಣಾಧಿಕಾರಿಗಳ / ಉಪನಿರ್ದೇಶಕರ ಲಾಗಿನ್ ಹಾಗೂ ಇಲಾಖಾ ವೆಬ್‌ಸೈಟ್‌ನಲ್ಲಿ ಪುಕಟಿಸಲಾಗಿದೆ ಎಂದು ತಿಳಿಸುತ್ತಾ, ಸದರಿ ಮಾಹಿತಿಯನ್ನು ಎಲ್ಲಾ ಶಿಕ್ಷಕರಿಗೆ ತಲುಪಿಸಲು ಕ್ರಮವಹಿಸುವಂತೆ ಇಲಾಖೆಯ ಎಲ್ಲಾ ಕಛೇರಿಯ ಮುಖ್ಯಸ್ಥರಿಗೆ ಕೋರಿದ್ದಾರೆ.
ಐಪಿಎಲ್ 2025 ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳ ಸ್ಥಳ ಪ್ರಕಟಿಸಿದ ಬಿಸಿಸಿಐ | IPL 2025
GOOD NEWS: ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಮೀಕ್ಷೆ: ಆನ್‌ಲೈನ್ ಮೂಲಕ ಸ್ವಯಂಘೋಷಣೆಗೆ ಅವಕಾಶ