ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಕರಡು ಪ್ರವೇಶ ಪತ್ರದ ತಿದ್ದುಪಡಿ ಕುರಿತಂದೆ ಶಾಲಾ ಮುಖ್ಯೋಪಾಧ್ಯಾಯರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ.
ಈ ಸಂಬಂಧ ಮಾಹಿತಿ ಬಿಡುಗಡೆ ಮಾಡಿರುವಂತ ಶಾಲಾ ಶಿಕ್ಷಣ ಇಲಾಖೆಯು, ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಯ 2025ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1ನ್ನು ತೆಗೆದುಕೊಂಡಿರುವ ವಿದ್ಯಾರ್ಥಿಗಳ (ಶಾಲಾ ಅಭ್ಯರ್ಥಿ, ಖಾಸಗಿ ಅಭ್ಯರ್ಥಿ, ಪುನರಾವರ್ತಿತ ಅಭ್ಯರ್ಥಿಗಳು) ಕರಡು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಮತ್ತು ವಿದ್ಯಾರ್ಥಿಗಳ ವಿವರಗಳಲ್ಲಿ ತಿದ್ದುಪಡಿಗಳಿದ್ದಲ್ಲಿ ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡಲು ದಿನಾಂಕ: 27-01-2025 ರಿಂದ ಅವಕಾಶ ಕಲ್ಪಿಸಲಾಗಿದೆ.
ಮಂಡಲಿಯ ಜಾಲತಾಣದ ಶಾಲಾ ಲಾಗಿನ್‌ಲ್ಲಿ ಲಭ್ಯವಿರುವ ತಂತ್ರಾಂಶವನ್ನು ಬಳಸಿ ಎಲ್ಲಾ ಶಾಲೆಗಳ ಮುಖ್ಯಸ್ಥರು ತಮ್ಮ ಶಾಲೆಯ ಕರಡು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ಪರಿಶೀಲಿಸಿ, ಅಗತ್ಯವಿದ್ದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ವಿವರಗಳ ತಿದ್ದುಪಡಿಗಳನ್ನು ಅಪ್‌ಡೇಟ್ ಮಾಡಲು ಸೂಚಿಸಿದೆ. ವಿದ್ಯಾರ್ಥಿಗಳ ವಿವರಗಳನ್ನು ಪರಿಶೀಲಿಸಿ ಅಂತಿಮಗೊಳಿಸಲು ಇದು ಕೊನೆಯ ಅವಕಾಶವಾಗಿದ್ದು, ಇದೇ ವಿವರಗಳು ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರ ಹಾಗೂ ಅಂಕಪಟ್ಟಿಗಳಲ್ಲಿ ನಮೂದಾಗುತ್ತವೆ. ಈ ಕುರಿತು ಏನಾದರೂ ವ್ಯತ್ಯಾಸಗಳು ಕಂಡುಬಂದಲ್ಲಿ ಮುಖ್ಯ ಶಿಕ್ಷಕರನ್ನೇ ಹೊಣೆಗಾರರನ್ನಾಗಿಸಲಾಗುವುದು.
1. ಮಂಡಲಿಯ ಜಾಲತಾಣ https://kseab.karnataka.gov.in ನ ಶಾಲಾ ಲಾಗಿನ್‌ನಲ್ಲಿ ತಂತ್ರಾಂಶ ಲಭ್ಯವಿದೆ.
2. ಮಾನ್ಯ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ರವರ ಸುತ್ತೋಲೆ ಸಂಖ್ಯೆ: DPI-CPIOCT-2(OT)/25/2024-E-159858 22:09-01-2025003 2024-25 ಮಂಡಳಿಗಳು ಆನ್‌ಲೈನ್ ಮೂಲಕ ಪ್ರಥಮ ಮಾನ್ಯತೆ / ಮಾನ್ಯತೆ ನವೀಕರಣಕ್ಕೆ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ದಿನಾಂಕ: 31-01-2025ರವರೆಗೆ ಅವಕಾಶವಿರುತ್ತದೆ ಹಾಗೂ ಉಪನಿರ್ದೇಶಕರು (ಆಡಳಿತ)ರವರು ಪ್ರಸ್ತಾವನೆಗಳನ್ನು ಪರಿಶೀಲಿಸಿ ಮಾನ್ಯತೆ ನವೀಕರಣ ಪತ್ರವನ್ನು ನೀಡಲು ಅಥವಾ ತಿರಸ್ಕರಿಸಿದ್ದಲ್ಲಿ ತಿರಸ್ಕೃತ ಆದೇಶ ನೀಡಲು ದಿನಾಂಕ:07.03.2025 ಕೊನೆಯ ದಿನಾಂಕವಾಗಿರುತ್ತದೆ.
3. 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ-1ಕ್ಕೆ ನೋಂದಾಯಿಸಿದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಿಗೆ ವಿದ್ಯಾರ್ಥಿಗಳ ಮಾಹಿತಿಯನ್ನು ಪರಿಶೀಲಿಸಿ ವಿದ್ಯಾರ್ಥಿಗಳ ವೈಯುಕ್ತಿಕ ಮಾಹಿತಿ ಹಾಗೂ ಪರೀಕ್ಷೆಗೆ ನೋಂದಾಯಿಸಿದ ವಿಷಯಗಳ ಪರಿಶೀಲನೆಗಾಗಿ ಕರಡು ಪ್ರವೇಶ ಪತ್ರಗಳನ್ನು ನೀಡಲಾಗಿದೆ. ಸದರಿ ಕರಡು ಪ್ರವೇಶ ಪತ್ರಗಳನ್ನು ತಿದ್ದುಪಡಿಗಳಿದ್ದಲ್ಲಿ ಅಳವಡಿಸಲು ಮಾತ್ರ ನೀಡಲಾಗಿರುತ್ತದೆ. ಮುಂದಿನ ದಿನಗಳಲ್ಲಿ ಪ್ರಥಮ ಮಾನ್ಯತೆ ಹಾಗೂ ಮಾನ್ಯತೆ ನವೀಕರಣ ಪಡೆದ ಶಾಲೆಗಳಿಗೆ ಮಾತ್ರ ಅಂತಿಮ ಪ್ರವೇಶಪತ್ರಗಳನ್ನು ನೀಡಲಾಗುವುದರಿಂದ ಮಾನ್ಯತೆ ನವೀಕರಣ ಪಡೆಯದ ಶಾಲೆಗಳು ಅಂತಿಮ ದಿನಾಂಕದವರೆಗೆ ಕಾಯದೇ ಕೂಡಲೇ ಮಾನ್ಯತೆ ನವೀಕರಣ ಪಡೆದು ಮಂಡಲಿಗೆ ಸಲ್ಲಿಸಲು ಸೂಚಿಸಿದೆ. ಉಲ್ಲೇಖಿತ ಮಾನ್ಯ ಆಯುಕ್ತರ ಸುತ್ತೋಲೆಯನ್ವಯ ದಿನಾಂಕ:07.03.2025 ಮಾನ್ಯತೆ ನವೀಕರಣ ಪ್ರಮಾಣ ಪತ್ರ ನೀಡಲು ಅಂತಿಮ ದಿನಾಂಕವಾಗಿದ್ದು, ಈ ದಿನಾಂಕದ ಒಳಗೆ ಮಾನ್ಯತೆ ನವೀಕರಣ ನೀಡದ ಶಾಲೆಗಳ ಅಂತಿಮ ಪ್ರವೇಶ ಪತ್ರವನ್ನು ತಡೆಹಿಡಿಯಲಾಗುವುದು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಹತ್ತಿರದ ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಪ್ರೌಢ ಶಾಲೆಗಳ ಮೂಲಕ ಪರೀಕ್ಷೆ-1ಕ್ಕೆ ಹಾಜರುಪಡಿಸಲು ಕ್ರಮವಹಿಸಲಾಗುವುದು.
4. ಶಾಲೆಯ ಮುಖ್ಯಸ್ಥರು ತಮ್ಮ ಶಾಲೆಯ ಎಲ್ಲಾ ಶಿಕ್ಷಕರ ವಿವರಗಳನ್ನು Evaluators Registration 2025 ನಲ್ಲಿ ನೋಂದಣಿ/ಅಪ್‌ಡೇಟ್ ಮಾಡಿ Freeze ಮಾಡಿದ್ದಲ್ಲಿ ಮಾತ್ರ ಕರಡು ಪ್ರವೇಶ ಪತ್ರಗಳು ಡೌನ್‌ಲೋಡ್ ಆಗುತ್ತವೆ.
5. ಶಾಲೆಯ ಮುಖ್ಯಸ್ಥರು ತಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ಪರಿಶೀಲಿಸಿ, ತಮ್ಮ ಶಾಲೆಯಲ್ಲಿ ನೋಂದಣಿಯಾದ ಎಲ್ಲಾ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರಗಳು ಲಭ್ಯವಿರುವ ಬಗ್ಗೆ, ಖಾತ್ರಿಪಡಿಸಿಕೊಳ್ಳುವುದು. ಏನಾದರೂ ವ್ಯತ್ಯಾಸವಿದ್ದಲ್ಲಿ ಮಂಡಲ್ಲಿಯಲ್ಲಿನ ಸಂಬಂಧಿಸಿದ ಜಿಲ್ಲೆಯ ಪರಿಶೀಲನಾ ಶಾಖಾಧಿಕಾರಿಗಳಿಗೆ ಲಿಖಿತವಾಗಿ ಮನವಿಯನ್ನು ಸಲ್ಲಿಸುವುದು.
6. ಕರಡು ಪ್ರವೇಶ ಪತ್ರದಲ್ಲಿನ 8 ಅಂಶಗಳಲ್ಲಿ ತಿದ್ದುಪಡಿಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ತಿದ್ದುಪಡಿಯ ನಂತರ ಪರಿಷ್ಕೃತ ಕರಡು ಪ್ರವೇಶ ಮಾಡಿಕೊಳ್ಳಬಹುದಾಗಿರುತ್ತದೆ. ಪತ್ರಗಳನ್ನು ಡೌನ್‌ಲೋಡ್
7. ಶಾಲಾ ಅಭ್ಯರ್ಥಿಗಳ ಎಸ್.ಎ.ಟಿ.ಎಸ್ ನಂಬರ್ (SATS NUMBER), ಖಾಸಗಿ ಅಭ್ಯರ್ಥಿಗಳ ರೆಫರೆನ್ಸ್ ನಂಬರ್ (REFERENCE NUMBER) ಹಾಗೂ ಪುನರಾವರ್ತಿತ ಅಭ್ಯರ್ಥಿಗಳ ನೋಂದಣಿ ಸಂಖ್ಯೆಯನ್ನು (REGISTER NUMBER) ನಮೂದಿಸಿ ಅಗತ್ಯವಿದ್ದಲ್ಲಿ ತಿದ್ದುಪಡಿಗಳನ್ನು ಮಾಡಬಹುದಾಗಿರುತ್ತದೆ.
8. ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಜನ್ಮ ದಿನಾಂಕ, ಧರ್ಮ ಮತ್ತು ಲಿಂಗ ಇವುಗಳಲ್ಲಿ ಯಾವುದಾದರೂ ತಿದ್ದುಪಡಿಗಳಿದ್ದಲ್ಲಿ: ಖಾಸಗಿ ವಿದ್ಯಾರ್ಥಿಗಳ (CCEPF) ವಿವರಗಳನ್ನು ನೇರವಾಗಿ ತಿದ್ದುಪಡಿ ಮಾಡಬಹುದಾಗಿರುತ್ತದೆ. ಆದರೆ, ಶಾಲಾ ವಿದ್ಯಾರ್ಥಿಗಳ (CCERF) ವಿವರಗಳನ್ನು ಮಂಡಲಿಯ ಜಾಲತಾಣದಲ್ಲಿ ನೇರವಾಗಿ ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ. ಮೊದಲು ಎಸ್.ಎ.ಟಿ.ಎಸ್ ಡೇಟಾಬೇಸ್‌ನಲ್ಲಿ ತಿದ್ದುಪಡಿ ಮಾಡಿ ನಂತರ ಮಂಡಲಿಯ ಶಾಲಾ ಲಾಗಿನ್‌ನಲ್ಲಿ Update Latest SATS Data ಮೇಲೆ ಕ್ಲಿಕ್ ಮಾಡಿದಾಗ SATS ನಿಂದ Updated data fetch ಆಗುತ್ತದೆ. ನಂತರ save ಮಾಡಿ printout ತೆಗೆದಿಟ್ಟುಕೊಳ್ಳುವುದು.
9. ತಿದ್ದುಪಡಿ ಮಾಡಲಾದ ಪರಿಷ್ಕೃತ ಕರಡು ಪ್ರವೇಶ ಪತ್ರಗಳನ್ನು Download Provisional AT (student wise) ಆಯ್ಕೆಯ ಮೂಲಕ Individual ಆಗಿಯೇ printout ಪಡೆಯಬೇಕಾಗಿರುತ್ತದೆ. (school wise ಆಯ್ಕೆಯಲ್ಲಿ ಪರಿಷ್ಕೃತ ಮಾಹಿತಿಗಳು ಅಪಡೇಟ್ ಆಗುವುದಿಲ್ಲ)
10. ಶಾಲಾ ವಿದ್ಯಾರ್ಥಿಗಳ ಹಾಗೂ ಪುನರಾವರ್ತಿತ ಅಭ್ಯರ್ಥಿಗಳ ಫೋಟೋ ಮತ್ತು ಸಹಿಯನ್ನು ಮಂಡಲಿಯ ಶಾಲಾ ಲಾಗಿನ್‌ನಲ್ಲಿ ನೇರವಾಗಿ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಮೇಲ್ಕಂಡ ಅಂಶಗಳನ್ನು ಹೊರತುಪಡಿಸಿ ಭಾಷೆ/ವಿಷಯ, ಮಾಧ್ಯಮ, ದೈಹಿಕ ಸ್ಥಿತಿ ಹಾಗೂ ಸಾಮಾಜಿಕ ಪ್ರವರ್ಗಗಳಲ್ಲಿ ಯಾವುದಾದರೂ ಬದಲಾವಣೆಗಳಿದ್ದಲ್ಲಿ ಮಂಡಲಿಯಲ್ಲಿನ ಸಂಬಂಧಿಸಿದ ಜಿಲ್ಲೆಯ ಪರಿಶೀಲನಾ ಶಾಖಾಧಿಕಾರಿಗಳಿಗೆ ಲಿಖಿತವಾಗಿ ಮನವಿಯನ್ನು ಸಲ್ಲಿಸುವುದು. ಮುಖ್ಯ ಶಿಕ್ಷಕರ ಹಂತದಲ್ಲಿ ಕರಡು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು, ತಿದ್ದುಪಡಿಗಳನ್ನು ಮಾಡಲು ದಿನಾಂಕ: 10-02-2025 ಅಂತಿಮ ದಿನಾಂಕವಾಗಿರುತ್ತದೆ. ಈ ಅವಧಿಯಲ್ಲಿ ತಿದ್ದುಪಡಿಗಳನ್ನು ಮಾಡಿಕೊಳ್ಳದಿದ್ದಲ್ಲಿ ಸಂಬಂಧಪಟ್ಟ ಶಾಲೆಯ ಮುಖ್ಯ ಶಿಕ್ಷಕರ ಹೊಣೆಗಾರರಾಗುತ್ತಾರೆ. ಇದರ ನಂತರ ತಿದ್ದುಪಡಿಗಳಿಗಾಗಿ ಸ್ವೀಕೃತವಾಗುವ ಪ್ರಸ್ತಾವನೆಗಳಿಗೆ ನಿಯಮಾನುಸಾರ ದಂಡಶುಲ್ಕವನ್ನು ವಿಧಿಸಲಾಗುವುದು.
SHOCKING: ರಾಜ್ಯದಲ್ಲಿ ಪತ್ನಿ ಕಿರುಕುಳಕ್ಕೆ ಮತ್ತೊಂದು ಬಲಿ: ಡೆತ್ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ
SHOCKING : ಹಾಸ್ಟೆಲ್ ನಲ್ಲಿ `ಲೋ ಬಿಪಿ’ಯಿಂದ ಕುಸಿದು ಬಿದ್ದು 8 ನೇ ತರಗತಿ ವಿದ್ಯಾರ್ಥಿ ಸಾವು.!