ಬೆಂಗಳೂರು: ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಿರ್ಭಯ ಯೋಜನೆಯಡಿ ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಡಿವೈಸ್ ಮತ್ತು ಎಮರ್‍ಜೆನ್ಸಿ ಬಟನ್ ಅಳವಡಿಸುವ ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ. ಈ ಕುರಿತು ವಾಹನಗಳ ಚಲನವಲನ ನಿಗಾ ವಹಿಸುವ ಸಲುವಾಗಿ ಮತ್ತು ತುರ್ತು ಸನ್ನಿವೇಶಗಳಲ್ಲಿ ಸಂದೇಶ ರವಾನೆಯ ಉದ್ದೇಶಕ್ಕಾಗಿ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನ್ನು ಸಾರಿಗೆ ಆಯುಕ್ತರ ಕಛೇರಿಯಲ್ಲಿ ಸ್ಥಾಪಿಸಿದ್ದು, 24/7 ನಿರಂತರವಾಗಿ ಮತ್ತು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಲಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಮತ್ತು ಸುದ್ದಿ ಮಾಧ್ಯಮಗಳಲ್ಲಿ ಸಾರ್ವಜನಿಕ ಸೇವಾ ವಾಹನಗಳಿಗೆ ಅಳವಡಿಸಿರುವ ಎಮರ್‍ಜೆನ್ಸಿ ಬಟನ್‍ಗಳನ್ನು ಒತ್ತಿದಾಗಲೂ ಸಾರಿಗೆ ಇಲಾಖೆಯ ಸಂಪರ್ಕ ಕೇಂದ್ರಕ್ಕೆ (ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್) ಯಾವುದೇ ಸಂದೇಶ ರವಾನೆಯಾಗುತ್ತಿಲ್ಲವೆಂದು ಪ್ರಕಟವಾಗಿದೆ.
ಈ ಬಗ್ಗೆ ಪರಿಶೀಲಿಸಲಾಗಿ, ಕೆಲವು ವಾಹನಗಳಲ್ಲಿನ ವಿಎಲ್‍ಟಿ ಸಾಧನಗಳ ವೈರ್ ತುಂಡಾಗಿರುವುದು ಮತ್ತು ಅಸಮರ್ಪಕ ಜೋಡಣೆ ಹಾಗೂ ಮೇನ್ ಪವರ್ ಸ್ವಿಚ್ ಆನ್ ಆಗದೆ ಇರುವಂತಹ ಸಂದರ್ಭಗಳಲ್ಲಿ ವಿಎಲ್‍ಟಿ ಸಾಧನಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು ಗಮನಕ್ಕೆ ಬಂದಿದೆ.
ವಾಹನ ಮಾಲೀಕರು ಯಾವುದೇ ನ್ಯೂನತೆಗಳು / ಯಾವುದೇ ತಾಂತ್ರಿಕ ದೋಷಗಳು ಕಂಡುಬಂದಲ್ಲಿ, ಇ-ಮೇಲ್ ವಿಳಾಸ surakshamitr-ka@cdac.in ಹಾಗೂ ಮೊಬೈಲ್ ಸಂಖ್ಯೆ 9059955319 ಗೆ ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳುವಂತೆ ಬೆಂಗಳೂರು ಸಾರಿಗೆ ಮತ್ತು ರಸ್ತೆ, ಸುರಕ್ಷತೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.