ಬೆಂಗಳೂರು: ಆತ್ಮೀಯ ವರ್ತಕರೇ ವಾಣಿಜ್ಯ ತೆರಿಗೆಗಳ ಇಲಾಖೆ, ಸರಕು ಮತ್ತು ಸೇವೆ ತೆರಿಗೆಗಳ ವಿಭಾಗ-05 ರಿಂದ, ಸರಕು ಮತ್ತು ಸೇವೆ ತೆರಿಗೆ ನೋಂದಣೆ ಹಾಗೂ ತೆರಿಗೆ ಬಾಧ್ಯತೆಯ ಬಗ್ಗೆ ಈ ಕೆಳಕಂಡ ವಿಚಾರಗಳನ್ನು ನಿಮ್ಮ ಗಮನಕ್ಕೆ ತರಬಯಸುತ್ತೇವೆ ಎಂಬುದಾಗಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.
1. GST ನೋಂದಣಿಯ ಬಾಧ್ಯತೆ- ಕನಿಷ್ಠ ವಾರ್ಷಿಕ ವಹಿವಾಟು
ಕೇವಲ ಸರಕುಗಳ ವಹಿವಾಟಿಗೆ- ರೂ. 40 ಲಕ್ಷ ಮೀರಿದ್ದಲ್ಲಿ ಮಾತ್ರ
ಸೇವೆಗಳ ವಹಿವಾಟಿಗೆ – ರೂ 20 ಲಕ್ಷ ಮೀರಿದ್ದಲ್ಲಿ ಮಾತ್ರ
ಒಂದು ವೇಳೆ ನಿಮ್ಮ ವಾರ್ಷಿಕ ವಹಿವಾಟು ಕೇವಲ ತೆರಿಗೆ ವಿನಾಯಿತಿಯನ್ನೊಳಗೊಂಡ ಸರಕುಗಳಾಗಿದ್ದಲ್ಲಿ ( ಉದಾಹರಣೆಗಾಗಿ ಹಾಲು, ಹಣ್ಣು, ತರಕಾರಿ ಇತ್ಯಾದಿ) ನೋಂದಣಿಯ ಅವಶ್ಯಕತೆ ಇರುವುದಿಲ್ಲ.
2. GST ತೆರಿಗೆ ಬಾಧ್ಯತೆ
ತೆರಿಗೆಗೆ ಒಳಪಡುವ ಸರಕುಗಳು/ಸೇವೆಗಳು (ಉದಾ – ತುಪ್ಪ, ಐಮ್, ಎಣ್ಣೆ ಇತ್ಯಾದಿ
ತೆರಿಗೆ ವಿನಾಯಿತಿ ಒಳಪಡುವ ಸರಕುಗಳು/ಸೇವೆಗಳು (ಉದಾ: ಹಾಲು, ಹಣ್ಣು, ಮಾಂಸ, ತರಕಾರಿ, ಸಾಲದ ಹಣ ಹಾಗೂ ಶಾಲೆಗಳು ಇತ್ಯಾದಿ)
ಒಂದು ವೇಳೆ ನೀವು ತೆರಿಗೆ ಬಾಧ್ಯತೆ ಹಾಗೂ ತೆರಿಗೆ ವಿನಾಯಿತಿ ಇರುವ ಸರಕು ಮತ್ತು ಸೇವೆಗಳ ವಹಿವಾಟು ನಡೆಸಿದ್ದಲ್ಲಿ ತೆರಿಗೆಗೆ ಒಳಪಡುವ ಸರಕು ಮತ್ತು ಸೇವೆಗಳ ಮೇಲೆ ಮಾತ್ರ ತೆರಿಗೆ ವಿಧಿಸಲಾಗುವುದು.
3.ರಾಜಿ ತೆರಿಗೆ ಐಚ್ಛಿಕ
ತಮ್ಮ ವಾರ್ಷಿಕ ವಹಿವಾಟು ಈ ಹಿಂದಿನ ಹಣಕಾಸು ವರ್ಷಗಳಲ್ಲಿ ಸರಕುಗಳಿಗೆ ಸಂಬಂಧಿಸಿದಂತೆ ರೂ. 15 ಕೋಟಿ ಹಾಗೂ ಸೇವೆಗಳಿಗೆ ಸಂಬಂಧಿಸಿದಂತೆ ರೂ. 50 ಲಕ್ಷ ಮೀರದಿದ್ದಲ್ಲಿ ಮುಂದಿನ ವರ್ಷ ರಾಜಿ ಪದ್ಧತಿಯಲ್ಲಿ ನೋಂದಣಿ ಪಡೆಯಬಹುದಾಗಿದೆ.
ರಾಜಿ ತೆರಿಗೆ ಪದ್ಧತಿ ಅಡಿಯಲ್ಲಿ ಅನ್ವಯವಾಗುವ ತೆರಿಗೆ ದರಗಳು
ವರ್ತಕರು/ತಯಾರಕರು(ಸರಕು) → ತೆರಿಗೆ ದರಗಳು 1% (0.5%+ 0.5%]
ಹೋಟೆಲ್‌ಗಳು(ಮದ್ಯ ಮಾರಾಟ ಮಾಡದೇ ಇದ್ದಾಗ) → 5% (2.5% +2.5%]
ಸೇವೆಗಳು+ 6% (3%+3%]
ಲಾಭ – ಕಡಿಮೆ ತೆರಿಗೆ ದರ ಹಾಗೂ ಸುಲಭವಾಗಿ ತ್ರೈಮಾಸಿಕ ನಮೂನೆಗಳನ್ನು ಸಲ್ಲಿಸಬಹುದಾಗಿದೆ.
4. ಪರಿಶೀಲನೆ ಹಾಗೂ ವೈಯಕ್ತಿಕ ವಿಚಾರಣೆ
* ಪ್ರತಿ ವರ್ತಕರಿಗೂ ತಮ್ಮ ಪ್ರತ್ಯುತ್ತರ ಸಲ್ಲಿಸುವ ಹಾಗೂ ವೈಯಕ್ತಿಕವಾಗಿ ಅಹವಾಲು ಸಲ್ಲಿಸಲು ಅವಕಾಶ ನೀಡಲಾಗುವುದು.
* ನೀವು ನಿಮ್ಮ ವಹಿವಾಟಿಗೆ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಸಾಕ್ಷಿಗಳನ್ನು ಸಲ್ಲಿಸಬಹುದಾಗಿದೆ.
* ನೀವು ಸಲ್ಲಿಸಿದ ಸಾಕ್ಷಿ/ದಾಖಲೆಗಳ ಆಧಾರದ ಮೇಲೆ ಇಲಾಖೆಯು ನಿಮ್ಮ ವಾರ್ಷಿಕ ವಹಿವಾಟನ್ನುಪರಿಶೀಲಿಸಲಾಗುವುದು.
* ನೀವು ಸಲ್ಲಿಸಿದ ಸಾಕ್ಷಿ/ದಾಖಲೆಗಳ ಸಂಪೂರ್ಣ ಪರಿಶೀಲನೆಯ ನಂತರವೇ ನಿಮಗೆ ತೆರಿಗೆ ಬಾಧ್ಯತೆ ಇದೆಯೋ ಹಾಗೂ ನೋಂದಣಿಯ ಆವಶ್ಯಕತೆ ಇದೆಯೋ ಎಂದು ನಿರ್ಧರಿಸಲಾಗುವುದು.
ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಸಹಾಯವಾಣಿಯ ಉಪಯೋಗ ಪಡೆಯಬಹುದಾಗಿದೆ.
ಸ್ಮ.ಸ. ಸೇ.ತೆ.ಕ 35- 080-25212592 ಸ.ಸ. ಸೇತೆ.ಕ 45- 080-25212591 ಸ್ಮ.ಸ. ಸೇ.ತೆ.ಕ 57- 080-25449388 ಸ.ಸ. ಸೇತೆ.ಕ 183- 8156-263013 … 36-080-25219607.3. 46-080-25207347 … 150-080-23470382
…37-080-29912591 … 55-080-25437747 … 152-080-23470450 … 38-080-25210599 … 56-080-25440621 … 153-080-29525693
ಅವಶ್ಯವಿದ್ದಲ್ಲಿ ನೇರವಾಗಿ ಸ್ಥಳೀಯ ಸರಕು ಸೇವಾ ತೆರಿಗೆ ಕಚೇರಿಗೆ ಭೇಟಿ ನೀಡಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದು.
ಕೌನ್ಸೆಲಿಂಗ್ ಮೂಲಕ ಗ್ರಾಮ ಪಂಚಾಯತಿ ಕಾರ್ಯದರ್ಶಿ ವರ್ಗಾವಣೆ ಪ್ರಕ್ರಿಯೆ ಆರಂಭ: ಸಚಿವ ಪ್ರಿಯಾಂಕ್ ಖರ್ಗೆ
BREAKING: ಒಂದೇ ಒಂದು ದಿನದ ಮಟ್ಟಿಗೆ ‘ಪೌರಾಯುಕ್ತ’ರನ್ನು ವರ್ಗಾವಣೆ: ರಾಜ್ಯ ಸರ್ಕಾರ ಆದೇಶ