ಬೆಂಗಳೂರು: 2025-26ನೇ ಸಾಲಿನ ಡಿಇಎಲ್ಇಡಿ, ಡಿಪಿಇಡಿ, ಡಿಪಿಎಸ್ಇ ಕೋರ್ಸ್ ಗಳ ಸೀಟು ಹಂಚಿಕೆ ಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ ನಿರ್ದೇಶಕರು ಮಾಹಿತಿ ನೀಡಿದ್ದು, 2025-26ನೇ ಸಾಲಿನ ಡಿ.ಇಎಲ್.ಇಡಿ/ಡಿ.ಪಿ.ಇಡಿ/ಡಿ.ಪಿ.ಎಸ್.ಇ. ಕೋರ್ಸ್‌ಗಳಿಗೆ ಸರ್ಕಾರಿ ಕೋಟಾದಡಿ ಶಿಕ್ಷಣ ಸಂಸ್ಥೆಗಳಿಗೆ ನಿಯಮಾನುಸಾರ ಸೀಟು ಹಂಚಿಕೆ ಮಾಡಿ ಹಾಗೂ ದಾಖಲಾತಿ ಪತ್ರಗಳನ್ನು ಆಯಾ ಜಿಲ್ಲಾ ಡಯೆಟ್ ಕೇಂದ್ರಗಳಿಗೆ ಕಳುಹಿಸಿದೆ ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸಿದ ಡಯಟ್ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಆಯ್ಕೆ ಮತ್ತು ಸೀಟು ಹಂಚಿಕೆಯಾದ ಶಿಕ್ಷಣ ಸಂಸ್ಥೆಯನ್ನು ಖಚಿತಪಡಿಸಿಕೊಂಡು, ನಿಗದಿಪಡಿಸಲಾದ ದಾಖಲಾತಿ ಶುಲ್ಕಕ್ಕೆ ಯಾವುದೇ ರಾಷ್ಟ್ರೀಕೃತ ಬ್ಯಾಂಕಿನ ಶಾಖೆಯಲ್ಲಿ Jaint Director CAC Bangalore ಇವರ ಹೆಸರಿನಲ್ಲಿ ಹುಂಡಿಯನ್ನು ದಿನಾಂಕ:15/07/2025 ರಿಂದ 19/07/2025 ರೊಳಗೆ ಪಡೆದು ಸಂಬಂಧಪಟ್ಟ ಡಯಟ್ ಕೇಂದ್ರದಲ್ಲಿ ಸಲ್ಲಿಸುವುದರ ಮೂಲಕ ದಾಖಲಾತಿ ಪತ್ರವನ್ನು ಪಡೆಯುವುದು ಹಾಗೂ ದಿನಾಂಕ:22/07/2025ರ ಒಳಗಾಗಿ ಸಂಬಂಧಪಟ್ಟ ಸಂಸ್ಥೆಗಳಲ್ಲಿ ದಾಖಲಾಗುವುದು. ಅಂತಿಮ ದಿನಾಂಕದ ನಂತರ ದಾಖಲಾತಿಗೆ ಅವಕಾಶವಿರುವುದಿಲ್ಲ ಎಂದು ಹೇಳಿದ್ದಾರೆ.
ನಮ್ಮೂರಿನ ರಸ್ತೆ ಮಾಡಿಸಿಕೊಡಿ: ಪ್ರಧಾನಿ ಮೋದಿಗೆ ಪತ್ರ ಬರೆದ 8ನೇ ತರಗತಿ ವಿದ್ಯಾರ್ಥಿನಿ
GOOD NEWS: ಹೊಸದಾಗಿ ನೇಮಕಗೊಂಡ ‘ಪೌರಕಾರ್ಮಿಕ’ರಿಗೆ ಬಿಬಿಎಂಪಿ ಗುಡ್ ನ್ಯೂಸ್