ಬೆಂಗಳೂರು: ಯುಜಿ ನೀಟ್ 2024ರ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳಿಗೆ ಸಂಬಂಧಿಸಿದಂತೆ 2ನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟವಾದ ನಂತ್ರ, ಅಭ್ಯರ್ಥಿಗಳು ಈ ನಿಯಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.
ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಯುಟಿ ನೀಟ್ 2024ಕ್ಕೆ ಸಂಬಂಧಿಸಿದಂತೆ ವಿವಿಧ ಕೋರ್ಸುಗಳಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ. ಆ ನಂತ್ರ ಅಭ್ಯರ್ಥಿಗಳು ಈ ಕೆಳಕಂಡ ನಿಯಮಗಳ ಕಾರ್ಯ ವಿಧಾನಗಳನ್ನು ಅನುಸರಿಸುವಂತೆ ಸೂಚಿಸಿದೆ.
1. ಈಗಾಗಲೇ ತಿಳಿದಿರುವಂತೆ ವೈದ್ಯಕೀಯ, ದಂತವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳಿಗೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಯಾವುದೇ ಛಾಯ್ಡ್ಗಳು ಲಭ್ಯವಿರುವುದಿಲ್ಲ. ಅಂತಹ ಅಭ್ಯರ್ಥಿಗಳು ಹಂಚಿಕೆಯಾದ ಸೀಟಿಗೆ ಶುಲ್ಕವನ್ನು ಪಾವತಿಸಿ (ಶುಲ್ಕ ಪಾವತಿಸದಿದ್ದಲ್ಲಿ), ADMISSION ORDER ಡೌನ್‌ಲೋಡ್ ಮಾಡಿಕೊಂಡು ನಿಗದಿತ ದಿನಾಂಕದೊಳಗೆ ಕಾಲೇಜಿನಲ್ಲಿ ಪ್ರವೇಶ ಪಡೆಯ ತಕ್ಕದ್ದು. ವೈದ್ಯಕೀಯ, ದಂತವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳಿಗೆ ಹಿಂದಿನ ಸುತ್ತಿನಲ್ಲಿ ಈ ಮೊದಲು ಪಾವತಿಸಿದ್ದ ಶುಲ್ಕವನ್ನು ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.
2. ವೈದ್ಯಕೀಯ ಸೀಟಿಗೆ ಪಾವತಿಸಿದ್ದ CAUTION DEPOSIT ಅನ್ನು ಈ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿದ್ದಲ್ಲಿ ಮಾತ್ರ ಹೊಂದಾಣಿಕೆ ಮಾಡಲಾಗುವುದು. ವೈದ್ಯಕೀಯ ಸೀಟು ಹಂಚಿಕೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ CAUTION DEPOSIT ಅನ್ನು ಮರುಪಾವತಿಸಲಾಗುವುದು ಆದರೆ ಹಂಚಿಕೆಯಾದ ಬೇರೆ ಕೋರ್ಸುಗಳಿಗೆ CAUTION DEPOSIT ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.
3. ವೈದ್ಯಕೀಯ ಸೀಟು ಹಂಚಿಕೆಯಾದವರು ಪ್ರಾಧಿಕಾರದಲ್ಲಿ ಮೂಲ ದಾಖಲೆಗಳನ್ನು ಸಲ್ಲಿಸುವ ಬಗ್ಗೆ ನೀಡಿರುವ ಪ್ರತ್ಯೇಕವಾದ ಪ್ರಕಟಣೆಯನ್ನು ಓದಿಕೊಳ್ಳಿ, ಖಾಸಗಿ ಕಾಲೇಜುಗಳಲ್ಲಿ, ಸರ್ಕಾರಿ ಕೋಟದ ವೈದ್ಯಕೀಯ ಸೀಟುಗಳನ್ನು ಪಡೆದವರು ಅಥವಾ ಖಾಸಗಿ ಕೋಟದ ವೈದ್ಯಕೀಯ ಸೀಟುಗಳನ್ನು ಖಾಸಗಿ ಕಾಲೇಜುಗಳಲ್ಲಿ ಪಡೆದವರು, ಮೂಲ ದಾಖಲೆಗಳನ್ನು ಎರಡು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಯೊಂದಿಗೆ ಕೆಇಎ, ಬೆಂಗಳೂರು ಇಲ್ಲಿ ಸಲ್ಲಿಸಬೇಕು. (ಸಲ್ಲಿಸದೇ ಇರುವವರು ಮಾತ್ರ)
4. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯಕೀಯ ಸೀಟುಗಳನ್ನು ಪಡೆದವರು ಹಾಗು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಅಥವಾ ಮ್ಯಾನೇಜ್‌ಮೆಂಟ್ ಕೋಟದ ವೈದ್ಯಕೀಯ ಸೀಟುಗಳನ್ನು ಪಡೆದವರು ಮತ್ತು ದಂತವೈದ್ಯಕೀಯ | ಆಯುಷ್ ಸೀಟನ್ನು ಪಡೆದವರು ಮೂಲ ದಾಖಲೆಗಳನ್ನು ಕೆಇಎ, ಬೆಂಗಳೂರು ಇಲ್ಲಿ ಸಲ್ಲಿಸಬಾರದು, ಆದರೆ ಸಂಬಂಧಿಸಿದ ಕಾಲೇಜಿನಲ್ಲಿ ಪ್ರವೇಶಾತಿ ಪಡೆಯುವ ಸಮಯದಲ್ಲಿ ಆಯಾ ಕಾಲೇಜಿನಲ್ಲಿಯೇ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
5. ಹಂಚಿಕೆಯಾಗಿರುವ ವೈದ್ಯಕೀಯ ಸೀಟುಗಳು ಬೇಡವೆನಿಸಿದಲ್ಲಿ ದಿನಾಂಕ 25-09-2024 ಸಂಜೆ 5.30 ರೊಳಗೆ KEA, Bangalore ಗೆ ಖುದ್ದಾಗಿ ಬಂದು ಸೀಟು ರದ್ದು ಪಡಿಸಿಕೊಳ್ಳುವುದು. Caution Deposit amount will be forfeited.
6. ಹಂಚಿಕೆಯಾಗಿರುವ ದಂತವೈದ್ಯಕೀಯ / ಆಯುಷ್ ಸೀಟುಗಳು ಬೇಡವೆನಿಸಿದಲ್ಲಿ ದಿನಾಂಕ 25-09-2024 ಸಂಜೆ 5.30 ರೊಳಗೆ KEA, Bangalore ಗೆ ಖುದ್ದಾಗಿ ಬಂದು ರೂ.10,000/- ದಂಡ ಪಾವತಿಸಿ ಸೀಟು ರದ್ದು ಪಡಿಸಿಕೊಳ್ಳುವುದು. (Executive Director, KEA (payable at Bangalore) ಇವರ ಹೆಸರಿನಲ್ಲಿ ಪಡೆದ ಡಿಡಿ ಸಲ್ಲಿಸಬೇಕು – ಪಾವತಿ .ಇಲ್ಲದೇ ಇದ್ದಲ್ಲಿ)
7. ಈ ಮೇಲಿನ 5 ಮತ್ತು 6 ರಂತೆ ದಂಡ ಪಾವತಿಸಿ ರದ್ದು ಪಡಿಸಿಕೊಂಡ ನಂತರ Online Mop-Up Round ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. Online Mop-Up Round ನಲ್ಲಿ ಹೊಸದಾಗಿ ಸೇರಿಸುವ options ಗಳು ಸೀಟುಗಳ ಲಭ್ಯತೆಗೆ ಒಳಪಟ್ಟಿರುತ್ತದೆ, ನಿಮ್ಮ ನಂತರದ ಅಭ್ಯರ್ಥಿಗಳು ಈಗಾಗಲೇ options ಗಳನ್ನು ನಮೂದಿಸಿರಬಹುದು ಮತ್ತು ಅರ್ಹತೆಯ ಆಧಾರದ ಮೇಲೆ ಸೀಟು ಹಂಚಿಕೆಯಾಗಿರಬಹುದು.
8. ಸೀಟು ರದ್ದು ಪಡಿಸಿಕೊಳ್ಳದ ಹಾಗು ಕಾಲೇಜಿಗೂ ಸೇರ್ಪಡೆಗೊಳ್ಳದವರು ಒಂದು ವರ್ಷದ ಶುಲ್ಕ ಮತ್ತು ರೂ. 10,000/- ಪಾವತಿಸಬೇಕು ಎಂಬುದಾಗಿ ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
#UGNEET ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಣೆ ನಂತರ ಅಭ್ಯರ್ಥಿಗಳು ಅನುಸರಿಸಬೇಕಾದ ಕಾರ್ಯವಿಧಾನಗಳು ಇಂತಿವೆ. ಎಚ್ಚರಿಕೆಯಿಂದ ಓದಿ ಆ ಪ್ರಕಾರ ಮಾಡಿ.Visit #KEA website for more information.
– H Prasanna ED KEA@CMofKarnataka @drmcsudhakar pic.twitter.com/RyLXogvQFf— ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) (@KEA_karnataka) September 22, 2024
Chess Olympiad 2024: ‘ಚೆಸ್ ಒಲಿಂಪಿಯಾಡ್’ನಲ್ಲಿ ಭಾರತ ಮಹಿಳಾ ತಂಡ ಚಿನ್ನ ಗೆಲುವು
ನಿಮಗಿದು ಗೊತ್ತಾ? ಭಾರತದ ‘ನೋಟು’ಗಳಲ್ಲಿ ಈ ವಿಶೇಷಗಳಿವೆ | Indian Currency Note
ಇರಾನ್ ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ: 30 ಕಾರ್ಮಿಕರು ಸಾವು, ಹಲವರಿಗೆ ಗಾಯ | Iran coal mine blast