ಕೆಎನ್ಎನ್ ಸ್ಪೆಷಲ್ ಡೆಸ್ಕ್: ಜಮೀನು ಖರೀದಿಸುವುದು ಹಲವರ ಕನಸು. ಕೃಷಿಯಲ್ಲಿ ತೊಡಗಿಸಿಕೊಳ್ಳೋದಕ್ಕೆ, ತೋಟ ಮಾಡಿ, ಅಲ್ಲೊಂದು ಪುಟ್ಟ ಮನೆ ಕಟ್ಟಿಕೊಂಡು ವಾಸ ಮಾಡೋದಕ್ಕೆ ಅನೇಕರು ಬಯಸುತ್ತಾರೆ. ಹೀಗೆ ನೀವು ಜಮೀನು ಕೊಳ್ಳುವಾಗ ಮಾತ್ರ ಕೆಲ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಇಲ್ಲವಾದಲ್ಲಿ ಮುಂದೆ ಕಾನೂನು ಸಂಕಷ್ಟವನ್ನು, ತೊಂದರೆಯನ್ನು ಅನುಭವಿಸಬೇಕಾಗುತ್ತದೆ.
ಹೌದು.. ಸಾರ್ವಜನಿಕರು ಜಮೀನು ಕೊಳ್ಳುವಾಗ ಕೆಲ ಮುಖ್ಯ ದಾಖಲೆಗಳನ್ನು ಪರಿಶೀಲಿಸಲೇಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ನೀವು ಕಾನೂನು ಸಂಕಷ್ಟಕ್ಕೆ ಸಿಲುಕಿ, ತೊಂದರೆಗೆ ಒಳಗಾಗಬೇಕಾಗುತ್ತದೆ. ಹೀಗೆ ಆಗಬಾರದು ಅಂದರೇ ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಿ. ಅವುಗಳು ಸರಿಯಾಗಿದ್ದರೇ ಮಾತ್ರವೇ ಜಮೀನು ಖರೀದಿಸಿ. ಇಲ್ಲವಾದಲ್ಲಿ ಆ ಜಮೀನು ಖರೀದಿಗೆ ಕಾನೂನು ತೊಡಕಿದೆ ಎಂದೇ ಭಾವಿಸಬೇಕಾಗುತ್ತದೆ.
- ಆರ್ ಟಿ ಸಿ
- ಆಕಾರ್ಬಂದ್
- ಇಸಿ
- ಎಂ ಆರ್
- ಸೇಲ್ ಡೀಡ್
- ಮದರ್ ಡೀಡ್
- ಫಾರ್ಮ್-10
- 11ಇ ಸ್ಕೆಚ್
- ಸರ್ವೆ ಸ್ಕೆಚ್
- ಟಿಪ್ಪಣಿ
- ವಂಶವೃಕ್ಷ
- ಪಿಟಿಸಿಎಲ್
- ಸಾಗುವಳಿ ಚೀಟಿ
ಆರ್ ಟಿ ಸಿ ಅಂದರೇ Record of Rights, Tenancy, and Crops ಎಂದು ಕರೆಯುತ್ತಾರೆ. ಪಹಣಿ ಎಂಬುದಾಗಿಯೂ ಕರೆಯುವಂತ ಈ ದಾಖಲೆಯಲ್ಲಿ ಖರಬ್ ಮತ್ತು ಸಾಲಗಳು, ಹಕ್ಕು ಬದಲಾವಣೆ, ಮಾಲೀಕರು ಎಷ್ಟು ಜನ ಎಂಬುದನ್ನು ನೀವು ತಿಳಿಯಬಹುದಾಗಿದೆ.
ಆಕಾರ್ಬಂದ್ ಎನ್ನುವ ದಾಖಲೆಯಲ್ಲಿ ಜಮೀನು ಖರೀದಿಸುವವರಿಗೆ ಜಮೀನಿನ ಸರಿಯಾದ ವಿಸ್ತೀರ್ಣ ಎಷ್ಟು ಎನ್ನುವುದು ದಾಖಲಾಗಿರುತ್ತದೆ. ಈ ಮಾಹಿತಿ ಪರಿಶೀಲಿಸಿ ಜಮೀನು ವಿಸ್ತೀರ್ಣ ಎಷ್ಟು ಎಂಬುದನ್ನು ತಿಳಿದು ಖರೀದಿಸುವುದು ಒಳಿತು.
EC – Encumbrance Certificate ಎಂದು ಕರೆಯಲಾಗುವಂತ ಇಸಿಯಲ್ಲಿ ಜಮೀನಿನ ಮೇಲೆ ಸಾಲ ತೆಗೆದುಕೊಂಡಿದ್ದರೇ ತಿಳಿಯಬಹುದು. ಒಂದು ವೇಳೆ ಸಾಲ ಇದ್ದರೆ ಖರೀದಿಯ ಬಗ್ಗೆ ಎಚ್ಚರಿಕೆಯ ನಡೆಯನ್ನು ನೀವು ತೋರಬೇಕಾಗುತ್ತದೆ.
M R – Mutation Record ಎಂದು ಕರೆಯಲಾಗುತ್ತದೆ. ಮ್ಯೂಟೇಷನ್ ರೆಕಾರ್ಡ್ ನಲ್ಲಿ ಜಮೀನಿನ ಹಕ್ಕು ಬದಲಾವಣೆ ಯಾರಿಂದ ಯಾರಿಗೆ ಎಷ್ಟು ಸಲ ಆಗಿದೆ ಎಂಬುವಂತ ಎಲ್ಲಾ ಮಾಹಿತಿ ಒಳಗೊಂಡಿರುತ್ತದೆ. ಇದನ್ನು ನೀವು ಜಮೀನು ಖರೀದಿಯ ಸಂದರ್ಭದಲ್ಲಿ ಪರಿಶೀಲಿಸಬೇಕು.
Sale Deed ಅಂದರೆ ಕ್ರಯಪತ್ರ. ನೀವು ಖರೀದಿಸುತ್ತಿರುವಂತ ಜಮೀನಿನ ಕ್ರಮವು ಈ ಮುಂಚೆ ಯಾರ ಹೆಸರಿನಲ್ಲಿ ಇತ್ತು.? ಹಾಗೆ ಚೆಕ್ಕುಬಂದಿ ವಿವರಗಳು ಇರುತ್ತವೆ. ಚೆಕ್ಕುಬಂದಿ ಮಾಹಿತಿ ಅನುಸಾರ ಜಮೀನು ಇದ್ಯಾ? ಯಾವ ದಿಕ್ಕಿನಲ್ಲಿ ಯಾರ ಜಮೀನು ಇದೆ ಎನ್ನುವ ಎಲ್ಲಾ ಮಾಹಿತಿಯನ್ನು ತಿಳಿಯಬೇಕಾಗುತ್ತದೆ.
Mother Deed ಅಂದರೆ ಮೂಲ ಪತ್ರ ಎಂದೇ ಕರೆಯಲಾಗುತ್ತದೆ. ನೀವು ಖರೀದಿಸುವಂತ ಜಮೀನಿನ ಮೂಲ ಮಾಲೀಕರು ಯಾರು.? ಯಾರಿಂದ ನೀವು ಖರೀದಿಸುವರಿಗೆ ಬಂದಿದೆ ಎಂದೆಲ್ಲವನ್ನು ತಿಳಿದುಕೊಳ್ಳಬಹುದಾಗಿದೆ.
Farm 10 – ಇದರಲ್ಲಿ ಒಂದು ಸರ್ವೆ ನಂಬರಿನಲ್ಲಿ ಇರುವಂತ ನಿರ್ಧಿಷ್ಟ ಹಿಸ್ಸಾ ಜಮೀನಿನ ವಿವರ ಸಿಗುತ್ತದೆ. ಇದನ್ನು ನೀವು ಪರಿಶೀಲಿಸುವುದು ಒಳಿತಾಗಿದೆ.
11E Sketch– ಈ ದಾಖಲೆಯಲ್ಲಿ ಒಂದು ಸರ್ವೆ ನಂಬರಿನ ಜಮೀನಿಂದ ವಿಭಾಗ ಆಗಿರುವ ಭಾಗದ ಬಗ್ಗೆ ತಿಳಿಯಬಹುದು.
Survy Sketch- ಇದರಿಂದ ಜಮೀನಿನ ನಕ್ಷೆ ಜೊತೆಗೆ ಆ ಜಮೀನಿಗೆ ಇರುವಂತ ಬಂಡಿ ದಾರಿ, ಕಾಲು ದಾರಿ ಯಾವ ಕಡೆ ಇದೆ ಎನ್ನುವಂತ ಮಾಹಿತಿಯನ್ನು ನೀವು ತಿಳಿಯಬಹುದಾಗಿದೆ.
ಟಿಪ್ಪಣಿ – ಒಂದು ಸರ್ವೆ ರೆಕಾರ್ಡ್ ನಲ್ಲಿನ ದಾಖಲೆಗಳಲ್ಲಿ ಟಿಪ್ಪಣಿ ಕೂಡ ಬರೆಯಲಾಗಿರುತ್ತದೆ. ಅದರಲ್ಲಿ ಜಮೀನಿನ ಆಕಾರ, ಅಂಕಿ ಸಂಖ್ಯೆ, ಗುಣ ಲಕ್ಷಣ ತಿಳಿಯಬಹುದಾಗಿದೆ.
ವಂಶವೃಕ್ಷ- ಇದರಿಂದ ನೀವು ಭೂ ಮಾಲೀಕರು ಎಷ್ಟು ಜನ ಇದ್ದಾರೆ.? ಯಾರಿಗೆಲ್ಲ ಹಕ್ಕಿದೆ ಎನ್ನುವಂತ ಮಾಹಿತಿಯನ್ನು ತಿಳಿಯಬಹುದಾಗಿದೆ. ಇದನ್ನು ನೀವು ಗಮನಿಸುವುದು ಬಹುಮುಖ್ಯವಾಗಿದೆ.
PTCL ಅಂದರೆ Prevention of Transfer Certain Land Act ಎಂದು ಕರೆಯಲಾಗುತ್ತದೆ. ಈ ದಾಖಲೆಯ ಅನುಸಾರ ನೀವು ಖರೀದಿಸುವಂತ ಜಮೀನು ಎಸ್ಸಿ, ಎಸ್ಟಿ ವರ್ಗದವರಿಗೆ ಸೇರಿದ್ದರ ಬಗ್ಗೆ ಮಾಹಿತಿ ತಿಳಿಯಲಿದೆ.
ಸಾಗುವಳಿ ಚೀಟಿ – ಇದು ಜಮೀನು ಸರ್ಕಾರದಿಂದ ಮಂಜೂರಾಗಿದ್ದಾರೆ ಬೇಕಾಗುತ್ತದೆ.
ಕಂದಾಯ ಪಾವತಿ ರಶೀದಿಯಿಂದ ಕಂದಾಯ ಪಾವತಿ ಮಾಡಿರುವ ಬಗ್ಗೆ ತಿಳಿಯಬಹುದು. ಹಾಗೆ ಕಾನೂನು ಸಮಸ್ಯೆಗಳು ಇಲ್ಲ ಎಂಬುದನ್ನು ಸ್ಪಷ್ಟವಾಗಿ ಅರಿಯಬಹುದಾಗಿದೆ.
ಸರ್ಕಾರಿ ಶಾಲೆಗಳ ಸಬಲೀಕರಣ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ನೀಡಿ: ಸ್ಪೀಕರ್ ಗೆ ಶಾಸಕ ಸುರೇಶ್ ಕುಮಾರ್ ಪತ್ರ
ಬೆಂಗಳೂರು ಜನತೆ ಗಮನಕ್ಕೆ: ನಾಳೆ, ನಾಡಿದ್ದು ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ | Power Cut