ಬೆಂಗಳೂರು: ನಗರದ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ನಿವಾಸಿಗಳಿಗೆ ಕಾವೇರಿ ನೀರು ಒದಗಿಸುವ ಸಂಬಂಧ ಕಾವೇರಿ 5ನೇ ಹಂತದ ಯೋಜನೆಗೆ ಜಾಲನೆ ನೀಡಲಾಗಿತ್ತು. ಈ ಬಳಿಕ ಬಿಬಿಎಂಪಿಯಿಂದ ಕಾವೇರಿ ನೀರು ಸಂಪರ್ಕ ಅಭಿಯಾನವನ್ನು ಆರಂಭಿಸಿದ್ದು, ಕಾವೇರಿ ನೀರು ಸಂಪರ್ಕ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ನಿವಾಸಿಗಳು ಕಾವೇರಿ ನೀರಿನ ಹೊಸ ಸಂಪರ್ಕವನ್ನು ಪಡೆಯಲು ಜಲಮಂಡಳಿಯ ಜಾಲತಾಣದ ಮೂಲಕ ಅಥವಾ ಮಂಡಳಿಯ ಸಮೀಪದ ವಲಯ ಕಚೇರಿಯಲ್ಲಿ ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ʼಸಕಾಲʼ ನಿಯಮದಂತೆ ಶುಲ್ಕ ಸಹಿತ ಅರ್ಜಿ ಸ್ವೀಕರಿಸಿದ 15 ರಿಂದ 45 ದಿನಗಳಲ್ಲಿ ನೀರಿನ ಸಂಪರ್ಕವನ್ನು ನೀಡಲಾಗುವುದು. ಈಗಾಗಲೇ 55 ಸಾವಿರ ಸಂಪರ್ಕಗಳನ್ನು ನೀಡಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ನಿವಾಸಿಗಳು ಕಾವೇರಿ ನೀರಿನ ಹೊಸ ಸಂಪರ್ಕವನ್ನು ಪಡೆಯಲು ಜಲಮಂಡಳಿಯ ಜಾಲತಾಣದ ಮೂಲಕ ಅಥವಾ ಮಂಡಳಿಯ ಸಮೀಪದ ವಲಯ ಕಚೇರಿಯಲ್ಲಿ ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ʼಸಕಾಲʼ ನಿಯಮದಂತೆ ಶುಲ್ಕ ಸಹಿತ ಅರ್ಜಿ ಸ್ವೀಕರಿಸಿದ 15 ರಿಂದ 45 ದಿನಗಳಲ್ಲಿ ನೀರಿನ ಸಂಪರ್ಕವನ್ನು ನೀಡಲಾಗುವುದು. ಈಗಾಗಲೇ 55 ಸಾವಿರ… pic.twitter.com/Ts4uPwp3Qm
— DIPR Karnataka (@KarnatakaVarthe) October 19, 2024
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ಜನರು ಹೊಸದಾಗಿ ಕಾವೇರಿ ನೀರಿನ ಸಂಪರ್ಕಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಬಿಬಿಎಂಪಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಹೇಳಿದೆ. owc.bwssb.gov.in/consumer
ಕಾವೇರಿ ನೀರಿನ ಸಂಪರ್ಕ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ
* ಮನೆಯ ಮಾಲೀಕರು ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗುವುದು
* ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ
* ಶುಲ್ಕ ಪಾವತಿಸಿ ಅರ್ಜಿ ಪಡೆಯಿರಿ
* ಅಗತ್ಯ ವಿವರಗಳೊಂದಿಗೆ ಭರ್ತಿ ಮಾಡಿ, ಪೂರಕ ದಾಖಲೆಗಳನ್ನು ಅಪ್ ಲೋಡ್ ಮಾಡಿ.
* ಕಟ್ಟದ ನಕ್ಷೆ, ಅನುಮೋದನೆಗೊಂಡಿರುವ ನಕ್ಷೆ, ಮಾಲೀಕರೊಂದಿಗಿರುವ ಕಟ್ಟಡದ ಛಾಯಾಚಿತ್ರ, 1,200 ಚದರ ಅಡಿ ಮತ್ತು ಮೇಲ್ಪಟ್ಟ ವಿಸ್ತೀರ್ಣದ ಮನೆ ಆಗಿದ್ದಲ್ಲಿ ಮಳೆ ನೀರು ಸಂಗ್ರಹಣ ವ್ಯವಸ್ಥೆ ಅಳವಡಿಸಿರುವಕ್ಕೆ ದಾಖಲೆಗಳನ್ನು ಸಲ್ಲಿಸಿ, ಅರ್ಜಿಯನ್ನು ಸಲ್ಲಿಸಬಹುದು
ವಿಶೇಷ ಸೂಚನೆ: ಮೊಬೈಲ್ ಪೋನ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ, ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿಯಬಹುದಾಗಿದೆ.