ಬೆಂಗಳೂರು: ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟಗೊಂಡಿದೆ. ಇಂದಿನ ಪ್ರಕಟಿತ ಪರೀಕ್ಷೆ ಫಲಿತಾಂಶದ ದತ್ತಾಂಶದಂತೆ 69,275 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಳಿಕ ಎಸ್ ಎಸ್ ಎಲ್ ಸಿ ಪರೀಕ್ಷೆ-3ಕ್ಕೆ ನೋಂದಾಯಿಸಿಕೊಳ್ಳುವ ಬಗ್ಗೆ ಪರೀಕ್ಷಾ ಮಂಡಳಿ ಮಹತ್ವದ ಮಾಹಿತಿ ನೀಡಿದೆ. ಆ ಬಗ್ಗೆ ಮುಂದೆ ಓದಿ.
ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ-2 ಪ್ರಕಟವಾದ ಬೆನ್ನಲ್ಲೇ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ-3ಕ್ಕೆ ನೋಂದಾಯಿಸಿಕೊಳ್ಳುವ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ. ಅದರಂತೆ ದಿನಾಂಕ 10-07-2024ರಿಂದ 17-07-2024ರವರೆಗೆ ಅವಕಾಶ ನೀಡಲಾಗಿದೆ ಅಂತ ತಿಳಿಸಿದೆ.
ಇನ್ನೂ ಎಸ್ ಎಸ್ ಎಲ್ ಸಿ ಪರೀಕ್ಷೆ-3ರ ಪರೀಕ್ಷೆಗಳು ದಿನಾಂಕ 02-08-2024ರಿಂದ 09-08-2024ರವರೆಗೆ ನಡೆಸಲಾಗುತ್ತದೆ ಅಂತ ಮಾಹಿತಿ ನೀಡಿದೆ.
SSLC ಪರೀಕ್ಷೆ-3ಕ್ಕೆ ಸಂಬಂಧಿಸಿದಂತೆ ಸ್ಕ್ಯಾನ್ ಪ್ರತಿ, ಮರುಎಣಿಕೆಗೆ ಮತ್ತು ಮರು ಮೌಲ್ಯ ಮಾಪನಕ್ಕೆ ಮಂಡಳಿಯಿಂದ ಮಹತ್ವದ ಮಾಹಿತಿ
ದಿನಾಂಕ 10-07-2024ರಿಂದ 15-07-2024ರವರೆಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ದಿನಾಂಕ 10-07-2024ರಿಂದ 16-07-2024ರವರೆಗೆ ಡೆಬಿಟ್, ಕ್ರೆಡಿಟ್ ಕಾರ್ಡ್, ಆನ್ ಲೈನ್ ಬ್ಯಾಂಕಿಂಗ್ ಮೂಲಕ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಿದ ನಂತ್ರ ಆಫ್ ಲೈನ್ ಚಲನ್ ಡೌಲ್ ಲೋಡ್ ಮಾಡಿಕೊಂಡು ಶುಲ್ಕವನ್ನು ಬಿ1/ಕೆ1/ ಬ್ಯಾಂಕಿಗೆ ಪಾವತಿಸಬಹುದಾಗಿದೆ.
ದಿನಾಂಕ 13-07-2024ರಿಂದ 18-07-2024ರವರೆಗೆ ಉತ್ತರ ಪತ್ರಿಕೆಗಳ ಮರುಎಣಿಕೆಗೆ ಮತ್ತು ಮರು ಮೌಲ್ಯಮಾಪನಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿ ಪಡಿಸಲಾಗಿದೆ. ಇದಕ್ಕಾಗಿ ದಿನಾಂಕ 13-07-2024ರಿಂದ 19-07-2024ರವರೆಗೆ ನಿಗದಿ ಪಡಿಸಿದಂತ ಶುಲ್ಕವನ್ನು ಪಾವತಿಸಲು ಅವಕಾಶ ನೀಡಲಾಗಿದೆ.
BREAKING : ವಾಲ್ಮೀಕಿ ಹಗರಣ ಕೇಸ್ : ಯಾವುದೇ ಕ್ಷಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಬಂಧನ ಸಾಧ್ಯತೆ!
ಹುಬ್ಬಳ್ಳಿ ನೇಹಾ ಕೊಲೆ ಕೇಸ್ : ಹತ್ಯೆಗೆ ‘ಲವ್ ಜಿಹಾದ್’ ಕಾರಣವಲ್ಲ : ಚಾರ್ಜ್ ಶೀಟ್ ನಲ್ಲಿ ಉಲ್ಲೇಖ!