ಬೆಂಗಳೂರು : ಕರ್ನಾಟಕ ರಾಜ್ಯ ಸರ್ಕಾರದ ಸಾಮಾನ್ಯ ಭವಿಷ್ಯ ನಿಧಿ (General Provident Fund) ಚಂದಾದಾರರ ಪ್ರಕರಣಗಳಲ್ಲಿ 2023-24 ನೇ ಆರ್ಥಿಕ ವರ್ಷದಲ್ಲಿ 5 ಲಕ್ಷ ರೂ.ಗಳಿಗೂ ಮೀರಿ ಜಿಪಿಎಫ್ ವಂತಿಗೆ ಕಟಾವಣೆಯಾಗಿರುವ ಮೊತ್ತಕ್ಕೆ ಬಡ್ಡಿಯನ್ನು (GPF Interest) ಪಾವತಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ:(1)ರ ಕೇಂದ್ರ ಮಂತ್ರಾಲಯದ ಕಛೇರಿ ಜ್ಞಾಪನದಲ್ಲಿ 2022-23ನೇ ಸಾಲಿನಲ್ಲಿ ಕೇಂದ್ರ ಸರ್ಕಾರಿ ನೌಕರರ ಜಿ.ಪಿ.ಎಫ್. ಖಾತೆಗಳಿಗೆ ವಾರ್ಷಿಕ ರೂ.5.00 ಲಕ್ಷಕ್ಕೂ ಮೀರಿ ಪಾವತಿಸಲಾದ ಪ್ರಕರಣಗಳಲ್ಲಿ ರೂ.5.00 ಲಕ್ಷ ಮೀರಿದ ಹೆಚ್ಚುವರಿ ಮೊತ್ತಕ್ಕೂ ಆದಾಯ ತೆರಿಗೆಯ ಅನ್ವಯಿಕೆಗೊಳಪಟ್ಟು ಬಡ್ಡಿಯನ್ನು ಪಾವತಿಸುವಂತೆ ಸ್ಪಷೀಕರಣವನ್ನು ನೀಡಿ ಅದರಂತೆ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ:(2)ರ ದಿ:17/06/2023ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಭವಿಷ್ಯ ನಿಧಿ ಚಂದಾದಾರರ ಖಾತೆಗೆ ಚಂದಾದಾರರು ಒಂದು ಆರ್ಥಿಕ ವರ್ಷದಲ್ಲಿ ಪಾವತಿಸಬಹುದಾದ ಗರಿಷ್ಠ ಮೊತ್ತವನ್ನು ರೂ. 5.00 ಲಕ್ಷಗಳಿಗೆ ಮಿತಿಗೊಳಿಸಿ ಆದೇಶಿಸಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ:(3)ರ ಪತ್ರದಲ್ಲಿ ಮಹಾಲೇಖಪಾಲರು, ಕರ್ನಾಟಕ, ಬೆಂಗಳೂರು ಇವರು ಕೇಂದ್ರ ಸರ್ಕಾರದ ದಿನಾಂಕ: 02.05.2024ರ Office Memorandum ಅನ್ನು ಲಗತ್ತಿಸಿ ಅದರಂತೆ ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ಚಂದಾದಾರರ ಪ್ರಕರಣಗಳಲ್ಲಿಯೂ ಕ್ರಮ ಕೈಗೊಳ್ಳಲು ಕೋರಿರುತ್ತಾರೆ. ಅದರಂತೆ ಪರಿಶೀಲಿಸಿದ ಸರ್ಕಾರವು ಈ ಕೆಳಗಿನಂತೆ ಆದೇಶಿಸಲಾಗಿದೆ.
2023-24ನೇ ಸಾಲಿಗೆ ಅನ್ವಯಿಸುವಂತೆ ಕರ್ನಾಟಕ ರಾಜ್ಯದ ಜಿ.ಪಿ.ಎಫ್. ಚಂದಾದಾರರ ಖಾತೆಗಳಿಗೆ ರೂ.5.00 ಲಕ್ಷಗಳಿಗೆ ಮೀರಿ ಜಮಾವಣೆ ಮಾಡಿರುವ ಮೊತ್ತಕ್ಕೆ ಆದಾಯ ತೆರಿಗೆಯ ಅನ್ವಯಿಕೆಗೊಳಪಟ್ಟು ಬಡ್ಡಿಯನ್ನು ಪಾವತಿಸಲು ಸರ್ಕಾರದ ಮಂಜೂರಾತಿಯನ್ನು ನೀಡಲಾಗಿದೆ.