ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈ ಕಾರಣ ವಿದ್ಯಾರ್ಥಿಗಳ ಗೊಂದಲ, ಸಂದೇಶ ಮತ್ತು ಸಮಸ್ಯೆಗಳ ನಿವಾರಣೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಪ್ರಶ್ನೋತ್ತರಗಳ ರೂಪದಲ್ಲಿ 20 ಅಶಂಗಳ ಪರಿಹಾರಗಳನ್ನ ಸಿದ್ಧಪಡಿಸುತ್ತಿದೆ.
ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷೆ ಎನ್ ಮಂಜುಶ್ರೀ ಮಾಹಿತಿ ಹಂಚಿಕೊಂಡಿದ್ದು, ಇಲ್ಲಿಯವರೆಗೆ ವಾರ್ಷಿಕ ಪರೀಕ್ಷೆ ಮಾತ್ರವೇ ನಡೆಸಲಾಗುತ್ತಿತ್ತು. ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ಹಾಜರಾಗಿ ಮರು ಪ್ರಯತ್ನ ಮಾಡಲು ಅವಕಾಶ ನೀಡಲಾಗುತ್ತಿತ್ತು ಎಂದರು.
ಆದರೇ ಈ ಬಾರಿ ಮೂರು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪರೀಕ್ಷೆಗೆ ಕೇವಲ ಒಂದೇ ತಿಂಗಳು ಬಾಕಿ ಇರೋ ಕಾರಣ, ವಿದ್ಯಾರ್ಥಿಗಳಿಗೆ ಪರೀಕ್ಷಾ ನಿಯಮಗಳ್ನು ಮನದಟ್ಟು ಮಾಡಿಕೊಡಲು 20 ಅಂಶಗಳ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಮೂರು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಯಾವೆಲ್ಲಾ ಸಾಧಕ-ಬಾಧಕಗಳಾಗಬಹುದು ಎಂಬುದು ಪ್ರಾಯೋಗಿಕವಾಗಿ ತಿಳಿದಿಲ್ಲ. ಮೊದಲ ಪ್ರಯತ್ನವಾಗಿರೋದರಿಂದ ಜಿಲ್ಲಾ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಉ ಎದುರಿಸೋ ಪ್ರಶ್ನೆಗಳು, ಗೊಂದಲಗಳ ಆಧಾರದ ಮೇಲೆ ಈ ಪರಿಹಾರ ಕಂಡುಕೊಳ್ಳಲು ಮಂಡಳಿ ಮುಂದಾಗಿದೆ ಎಂದರು.
20 ಅಂಶಗಳಲ್ಲಿ ಏನೆಲ್ಲ ಇರಲಿದೆ.?
ಶಾಲಾ ಶಿಕ್ಷಣ ಮಂಡಳಿ ತಯಾರಿಸೋದಕ್ಕೆ ಹೊರಟಿರೋ 20 ಅಂಶಗಳಲ್ಲಿ ಎಷ್ಟು ಪರೀಕ್ಷೆಗಳು ನಡೆಯುತ್ತದೆ.? ವಾರ್ಷಿಕ ಮತ್ತು ಪೂರಕ ಪರೀಕ್ಷೆಗಳಾಗಿರುತ್ತವೆಯೋ ಅಥವಾ ಮೂರು ಪರೀಕ್ಷೆಗಳೂ ಕೂಡ ವಾರ್ಷಿಕ ಪರೀಕ್ಷೆಗಳಾಗಿತ್ತವೆಯೋ? ವಾರ್ಷಿಕ ಮತ್ತು ಪೂರಕ ಎಂದು ಕರೆಯುವ ಬದಲಾಗಿ ಮೂರು ಪರೀಕ್ಷೆಗಳೆಂದು ಕರೆಯುವ ಉದ್ದೇಶವೇನು ಸೇರಿದಂತೆ ವಿವಿಧ ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ ಎಳೆಯು ಪ್ರಶ್ನೋತ್ತರಗಳನ್ನು ಒಳಗೊಂಡಿರಲಿದೆ.