ಬೆಂಗಳೂರು: ಜಿಬಿಎ ವ್ಯಾಪ್ತಿಯ ವಾಣಿಜ್ಯ ಸಂಕೀರ್ಣದ ಮಳಿಗೆದಾರರು ನವೀಕರಣಕ್ಕಾಗಿ ಮಳಿಗೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ಎಂಬುದಾಗಿ ಕೆ.ಎನ್ ರಮೇಶ್ ತಿಳಿಸಿದ್ದಾರೆ.
ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 280 ಬಿಬಿಎಸ್ 2023 (ಇ) 6 ಆಸ್ತಿ ನಿರ್ವಹಣೆ ನಿಯಮಗಳು-2024 ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ದಿ: 01-01-2025 ರಂತೆ ಹೊಸ ನಿಯಮ ಜಾರಿಗೆ ಬಂದಿರುತ್ತದೆ.
ಪಾಲಿಕೆಯ ಮಾಲೀಕತ್ವಕ್ಕೆ ಒಳಪಟ್ಟಿರುವ ಜಯನಗರ ನಾಲ್ಕನೇ ಬಡಾವಣೆಯಲ್ಲಿರುವ ಜಯನಗರ ವಾಣಿಜ್ಯ ಸಂಕೀರ್ಣ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ವಾಣಿಜ್ಯ ಸಂಕೀರ್ಣದಲ್ಲಿನ 251 ಮಳಿಗೆಗಳು ಮತ್ತು ಜಯನಗರ 4ನೇ `ಟಿ ‘ ಬ್ಲಾಕ್‌ನ ಮಾರುಕಟ್ಟೆ ಕಟ್ಟಡದಲ್ಲಿನ 39 ಮಳಿಗೆಗಳ ನವೀಕರಣದ ಅವಧಿಯು ಮುಕ್ತಾಯಗೊಂಡಿರುವುದರಿಂದ, ಕರ್ನಾಟಕ ಸರ್ಕಾರ ಅಧಿಸೂಚನೆ ಸಂಖ್ಯೆ:ನಅಇ 280 ಬಿಬಿಎಸ್ 2023 (ಇ) ದಿನಾಂಕ:01-01-2025ರ ನಿಯಮಾವಳಿಯಂತೆ ಸದರಿ ಮಳಿಗೆಗಳ ಗುತ್ತಿಗೆಯನ್ನು ನಿಯಮ 8 ರಂತೆ ಇನ್ನೊಂದು ಅವಧಿಗೆ ನವೀಕರಿಸಲು ಅವಕಾಶ ಕಲ್ಪಿಸಿ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿತ್ತು. ಹಾಗೂ ಈ ಸಂಬಂಧ ಪ್ರತಿಯೊಂದು ಮಳಿಗೆಯ ಮಳಿಗೆದಾರರಿಗೆ ಪ್ರತ್ಯೇಕ ಸೂಚನಾ ಪತ್ರವನ್ನು ನೀಡಲಾಗಿರುವಂತೆ, ಈಗಾಗಲೇ ಹಲವಾರು ಮಳಿಗೆದಾರರು ಅರ್ಜಿಯೊಂದಿಗೆ ದಾಖಲೆಗಳನ್ನು ಸಹ ಕಚೇರಿಗೆ ಸಲ್ಲಿಸಿರುತ್ತಾರೆ.
ಆದಾಗ್ಯೂ ಸಹ ಆಸ್ತಿ ನಿರ್ವಹಣೆ ನಿಯಮಗಳು-2024 ರಲ್ಲಿ ಗುತ್ತಿಗೆ ಅವಧಿ ಮುಕ್ತಾಯಗೊಂಡಿರುವ ಮಳಿಗೆಗಳ ಬಾಡಿಗೆ / ಗುತ್ತಿಗೆ ನವೀಕರಣಕ್ಕೆ ಅವಕಾಶ ಕಲ್ಪಿಸಿರುವುದನ್ನು ಸದುಪಯೋಗಪಡಿಸಿಕೊಂಡು ತಮ್ಮ ತಮ್ಮ ಮಳಿಗೆಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಈಗಾಗಲೇ ಸೂಚನಾ ಪತ್ರದಲ್ಲಿ ಸೂಚಿಸಿರುವಂತೆ ಅರ್ಜಿಯೊಂದಿಗೆ ಸಹಾಯಕ ಕಂದಾಯ ಅಧಿಕಾರಿ (ದಕ್ಷಿಣ-ಮಾರುಕಟ್ಟೆ) ಜಯನಗರ ವಾಣಿಜ್ಯ ಸಂಕೀರ್ಣ ರವರ ಕಛೇರಿಗೆ ಸಲ್ಲಿಸಲು ಸೂಚಿಸಿದೆ.
ಶಿವಮೊಗ್ಗ: ಸಾಗರದ ಉಳ್ಳೂರಲ್ಲಿ ಅಕ್ರಮವಾಗಿ ‘ಮರ ಕಡಿತಲೆ’ ಮಾಡಿದವರ ವಿರುದ್ಧ ಕೇಸ್ ದಾಖಲು
BIG NEWS : ‘ರಾಹುಕೇತು’ ಚಿತ್ರದಲ್ಲಿ ಕಾಂತಾರ ದೈವದ ಕೂಗಿನ ಅನುಕರಣೆಗೆ ಬ್ರೇಕ್ ಹಾಕಿದ ಸೆನ್ಸಾರ್ ಮಂಡಳಿ








