ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಎನ್ನುವಂತೆ, ನೈರುತ್ಯ ರೈಲ್ವೆಯಿಂದ ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಅಲ್ಲದೇ ಕೆಲ ರೈಲುಗಳ ಮಾರ್ಗ ಬದಲಾವಣೆಯನ್ನು ಮಾಡಲಾಗಿದೆ.
I. ರೈಲುಗಳ ಸಂಚಾರ ರದ್ದು
ವೈಟ್ ಫೀಲ್ಡ್ ಪ್ಯಾನಲ್ ಕ್ಯಾಬಿನ್ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳ ನಡುವಿನ ಸೇತುವೆ ಸಂಖ್ಯೆ 831 ರಲ್ಲಿ ಕಾಮಗಾರಿ ಕೈಗೊಳ್ಳುವುದರಿಂದ ಈ ಕೆಳಗಿನ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗುತ್ತಿದೆ.
1. ರೈಲು ಸಂಖ್ಯೆ 06527 ಬಂಗಾರಪೇಟೆ-ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮೆಮು ವಿಶೇಷ ರೈಲನ್ನು ಫೆಬ್ರವರಿ 8 & 15, 2024 ರಂದು ರದ್ದುಗೊಳಿಸಲಾಗುತ್ತಿದೆ.
2. ರೈಲು ಸಂಖ್ಯೆ 06528 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಬಂಗಾರಪೇಟೆ ಮೆಮು ವಿಶೇಷ ರೈಲನ್ನು ಫೆಬ್ರವರಿ 9 & 16, 2024 ರಂದು ರದ್ದುಗೊಳಿಸಲಾಗುತ್ತಿದೆ
II. ರೈಲುಗಳ ಭಾಗಶಃ ರದ್ದು / ಮಾರ್ಗ ಬದಲಾವಣೆ / ನಿಯಂತ್ರಣ
ಅಮರಾವತಿ ಕಾಲೋನಿ ಮತ್ತು ತೊಳಹುಣಸೆ ಯಾರ್ಡಗಳಲ್ಲಿ ಹಳಿ ನಿರ್ವಹಣಾ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದು, ಮಾರ್ಗ ಬದಲಾವಣೆ & ಮಾರ್ಗ ಮಧ್ಯದಲ್ಲಿನಿಯಂತ್ರಿಸಲಾಗುತ್ತಿದೆ. ಅವುಗಳ ಈ ಕೆಳಗಿನಂತಿವೆ:
ರೈಲುಗಳ ಭಾಗಶಃ ರದ್ದು
1. ಫೆಬ್ರವರಿ 11, 2024 ರಂದು ರೈಲು ಸಂಖ್ಯೆ 17347 ಎಸ್ಎಸ್ಎಸ್ ಹುಬ್ಬಳ್ಳಿ-ಚಿತ್ರದುರ್ಗ ಡೈಲಿ ಎಕ್ಸ್ ಪ್ರೆಸ್ ರೈಲು ಹರಿಹರ ಮತ್ತು ಚಿತ್ರದುರ್ಗ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
2. ಫೆಬ್ರವರಿ 11, 2024 ರಂದು ರೈಲು ಸಂಖ್ಯೆ 17348 ಚಿತ್ರದುರ್ಗ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ ರೈಲು ಚಿತ್ರದುರ್ಗ ಮತ್ತು ಹರಿಹರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
ಮಾರ್ಗ ಬದಲಾವಣೆ:
1. ಫೆಬ್ರವರಿ 14 & 18, 2024 ರಂದು ಹೊಸಪೇಟೆ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06245 ಹೊಸಪೇಟೆ-ಹರಿಹರ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ತೆಲಗಿ, ಅಮರಾವತಿ ಕಾಲೋನಿ, ಹರಿಹರ ಮಾರ್ಗದ ಮೂಲಕ ಸಂಚರಿಸಲಿದೆ, ಹೀಗಾಗಿ ದಾವಣಗೆರೆ ಮತ್ತು ತೋಳಹುಣಸೆ ನಿಲ್ದಾಣಗಳಲ್ಲಿ ನಿಲುಗಡೆ ತಪ್ಪಿರುತ್ತದೆ.
ನಿಯಂತ್ರಣ:
1. ಫೆಬ್ರವರಿ 11, 2024 ರಂದು ಬೆಳಗಾವಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17325 ಬೆಳಗಾವಿ-ಮೈಸೂರು ವಿಶ್ವಮಾನವ ಡೈಲಿ ಎಕ್ಸ್ ಪ್ರೆಸ್ ರೈಲನ್ನು ಮಾರ್ಗ ಮಧ್ಯದಲ್ಲಿ 55 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.
2. ಫೆಬ್ರವರಿ 14, 2024 ರಂದು ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17392 ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್ ರೈಲನ್ನು ಮಾರ್ಗ ಮಧ್ಯದಲ್ಲಿ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.
ಬೆಂಗಳೂರಲ್ಲಿ ‘ಭಾರತ್ ಅಕ್ಕಿ’ಗೆ ಯಡಿಯೂರಪ್ಪ ಚಾಲನೆ: ಇನ್ಮುಂದೆ ಸಿಗಲಿದೆ ‘ಅಕ್ಕಿ ರೂ.29’ಕ್ಕೆ