ಬೆಂಗಳೂರು: ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ವಿವಿಧ ಪಿಂಚಣಿಗಳಿಗೆ ಸಂಬಂಧಿಸಿದ ಫಲಾನುಭವಿಗಳಿಗೆ ನವೆಂಬರ್ – 2023ರ ಮಾಹೆಯವರೆಗೆ ಖಾಜಾನೆ – 2ರ ಮುಖಾಂತರ ಪಿಂಚಣಿ ಪಾವತಿ ಮಾಡಲಾಗುತ್ತಿತ್ತು. 2023ನೇ ಡಿಸೆಂಬರ್ 30ರ ಸರ್ಕಾರಿ ಆದೇಶದನ್ವಯ ಆಧಾರ್ ಆಧಾರಿತ ಪಿಂಚಣಿ ವ್ಯವಸ್ಥೆಯನ್ನು ಡಿಸೆಂಬರ್ 2023ರಿಂದ ಜಾರಿಗೆ ತರಲಾಗಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಆಧಾರ್ ಜೋಡಣೆ / NPCI Mapping ಆಗಿರುವ ಬ್ಯಾಂಕ್ / ಅಂಚೆ ಖಾತೆಗೆ ಕೇಂದ್ರೀಕೃತವಾಗಿ ಆಧಾರ್ ಆಧಾರಿತ ಡಿ.ಬಿ.ಟಿ ವ್ಯವಸ್ಥೆಯಡಿ ಡಿಸೆಂಬರ್ 2023ರ ಮಹೆಯ ಪಿಂಚಣಿ ಪಾವತಿಯಾಗಲಿದೆ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share.
Exit mobile version