ಬಳ್ಳಾರಿ : ಜೆಸ್ಕಾಂ ನಗರ ವ್ಯಾಪ್ತಿಗೆ ಬರುವ ವಿದ್ಯುತ್ ಗ್ರಾಹಕರು ಗಣೇಶ ಹಬ್ಬದ ಪ್ರಯುಕ್ತ, ಗಣೇಶ್ ವಿಗ್ರಹ ಕೂಡಿಸುವುದಕ್ಕೆ ಅನಧಿಕೃತವಾಗಿ ವಿದ್ಯುತ್ ಬಳಸದೆ, ಇಲಾಖೆಯ ನಿಯಮಾನುಸಾರ ಅನುಮೋದನೆ ಪಡೆದು ಅಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕು ಜೆಸ್ಕಾಂನ ನಗರ ಉಪವಿಭಾಗದ 1 ಮತ್ತು 2 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸೂಚನೆ ನೀಡಿದ್ದಾರೆ.
ನಿಭಂದನೆಗಳು:
ಸಾರ್ವಜನಿಕರು ಯಾವುದೇ ಹೆಚ್.ಟಿ ಅಥವಾ ಎಲ್.ಟಿ ವಿದ್ಯುತ್ ಜಾಲಗಳ ಅಡಿಯಲ್ಲಿ ಗಣೇಶ್ ಚತುರ್ಥಿಯ ಪೆಂಡಾಲ್ ನಿರ್ಮಿಸಬಾರದು. ವಿದ್ಯುತ್ ಕಂಬಗಳಿಗೆ ಅಥವಾ ಪರಿವರ್ತಕ ಕೇಂದ್ರದ ಕಂಬಗಳಿಗೆ ಶಾಮಿಯಾನ ಕಟ್ಟುವುದಾಗಲೀ ಅಥವಾ ಬ್ಯಾನರ್‌ಗಳನ್ನು ಕಟ್ಟಬಾರದು.
ನಿಯಮಗಳ ಉಲ್ಲಂಘಂನೆಯ ವಿದ್ಯುತ್‌ನಿಂದ ಆಗುವ ಅನಾಹುತಗಳಿಗೆ ಸಂಘಟನೆಯ ಮುಖ್ಯಸ್ತರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜೆಸ್ಕಾಂ ಇಲಾಖೆ ಪ್ರಕಟಣೆ ತಿಳಿಸಿದೆ.
‘ಇ-ಸ್ವತ್ತು’ ನೀಡಿಕೆಯಲ್ಲಿ ವಿಳಂಬ: ಸರಳೀಕರಣಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ
ಬೆಂಗಳೂರಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ಬಿಬಿಎಂಪಿಯಿಂದ ಸಕಲ ಸಿದ್ಧತೆ: 462 ತಾತ್ಕಾಲಿಕ ಮೊಬೈಲ್ ಟ್ಯಾಂಕ್ ವ್ಯವಸ್ಥೆ