ಬೆಂಗಳೂರು: ನಾಡಿನ ರೈತ ಬಾಂಧವರ ಶ್ರೇಯೋಭಿವೃದ್ಧಿಗಾಗಿ ಕೃಷಿ ಇಲಾಖೆಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾದ್ರೇ ಯಾವೆಲ್ಲ ಅಂತ ಮುಂದೆ ಓದಿ.
ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭೂತಾಯಿ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಣ್ಣಿಂದ ಜೀವ, ಮಣ್ಣಿಂದ ಕಾಯ ಎಂದಿದೆ.
ಹೀಗಿದೆ ರೈತರಿಗಾಗಿ ಹಮ್ಮಿಕೊಂಡಿರುವಂತ ನೂತನ ಕಾರ್ಯಕ್ರಮಗಳ ಪಟ್ಟಿ
-ರೈತ ಸಂಪರ್ಕ ಕೇಂದ್ರಗಳಲ್ಲಿ QR ಕೋಡ್ ಬಳಸಿ ಕೃಷಿ ಉಪಕರಣಗಳ ವಿತರಣೆಯ ಕ್ರಮ ವಹಿಸಲಾಗಿದೆ. ಈ ಮೂಲಕ ಪಾರದರ್ಶಕತೆಯೊಂದಿಗೆ ನಿರ್ವಹಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
-ಭೂಸಾರ ನೂತನ ಮೊಬೈಲ್ ಆಪ್ ಬಳಸಿ 4.27 ಲಕ್ಷ ಮಣ್ಣು ಮಾದರಿಗಳ ಸಂಗ್ರಹಣೆ ಮಾಡಲಾಗಿದೆ. 1.26 ಲಕ್ಷ ಮಣ್ಣು ಆರೋಗ್ಯ ಕಾರ್ಡ್ ಸೂಕ್ತ ಶಿಫಾರಸ್ಸಿನೊಂದಿಗೆ ವಿತರಣೆ ಮಾಡಲಾಗಿದೆ.
-ಕೃಷಿ ಣಲಾಖೆಯ ನೂತನ ರೈತ ಕರೆ ಕೇಂದ್ರದಲ್ಲಿ IVRS ತಂತ್ರಾಂಶ ಸ್ಪರ್ಶ ನೀಡಲಾಗಿದೆ. ಈವರೆಗೆ 1,28,987 ಕರೆಗಳಿಗೆ ಸೂಕ್ತ ಪರಿಹಾರ ನೀಡಲಾಗಿದೆ. ರೈತ ಕರೆ ಕೇಂದ್ರದ ಸಹಾಯವಾಣಿ ಸಂಖ್ಯೆ 18004253553 ಆಗಿದೆ.
-ಇ-ಸ್ಯಾಪ್ ತಂತ್ರಾಂಶ ಬಳಸಿ 64,392 ಕೀಟ, ರೋಗ ಬಾಧೆ ಸರ್ವೇಕ್ಷಣೆ ಮಾಡಲಾಗಿದೆ. 62,916 ನಿಖಲ ವೈಜ್ಞಾನಿಕ ಸಲಹೆಗಳೊಂದಿಗೆ ನಿರ್ವಹಣೆ ಮಾಡಲಾಗಿದೆ.
ಒಟ್ಟಾರೆಯಾಗಿ ರಾಜ್ಯದ ರೈತರಿಗಾಗಿ ಕ್ಯೂ ಆರ್ ಕೋಟ್ ಅಳವಡಿಸಿ ಕೃಷಿ ಉಪಕರಣ ವಿತರಣೆ, ಭೂಸಾರ ಮೊಬೈಲ್ ತಂತ್ರಾಂಶ, ರೈತ ಕರೆ ಕೇಂದ್ರ ಸ್ಥಾಪನೆ, ಇ-ಸ್ಯಾಪ್ ತಂತ್ರಾಂಶ ಅಳವಡಿಕೆಯಂತ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ.
BREAKING: ಜಂಬೂಸವಾರಿ ವೇಳೆ ‘ಅಂಬಾರಿ’ ನೀಡಲು ‘ಅರಮನೆ’ ವಿಳಂಬ ಮಾಡಿಲ್ಲ: ರಾಜವಂಶಸ್ಥೆ ಪ್ರಮೋದಾದೇವಿ ಸ್ಪಷ್ಟನೆ
ರಾಜ್ಯ ಸರ್ಕಾರದಿಂದ ‘ಮುಜರಾಯಿ ಇಲಾಖೆ ದೇವಾಲಯ’ಗಳ ‘ಅರ್ಚಕ’ರಿಗೆ ಗುಡ್ ನ್ಯೂಸ್