ಬೆಂಗಳೂರು: ಡಿಜಿಟಲ್ ಯುಗದಲ್ಲಿ ಓದುಗರನ್ನು ಪ್ರೇರೇಪಿಸುವ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡದಿೆ. ಇದರ ಭಾಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಣಜ ಇ-ಪುಸ್ತಕ ಜಾಲತಾಣವನ್ನು ತೆರೆದಿದೆ. ಈ ಸರ್ಕಾರಿ ವೆಬ್ ಸೈಟ್ ನಲ್ಲಿ ಓದುಗರಿಗೆ ಸಾವಿರಾರು ಹಳೆಯ ಗ್ರಂಥಗಳಿಂದ ಹಿಡಿದು, ಇತ್ತೀಚಿನ ಕೃತಿಗಳವರೆಗೆ ಪುಸ್ತಕಗಳು ಓದಲು ಲಭ್ಯವಿದೆ.
ಹೌದು ಆಧುನಿಕ ಜಗತ್ತು ತಾಳೆಗರಿಯಿಂದ ಟ್ಯಾಬ್ಲೆಟ್ ಗಳವರೆಗೆ ಹರಿದು ಸಾಗುತ್ತಿದೆ. ಆಧುನಿಕ ಸಂವಹನ ಮಾಧ್ಯಮಗಳು ಬದುಕಿನ ವಿಧಾನಗಳನ್ನು ಹೊಸ ಮಾರ್ಗಗಳಲ್ಲಿ ವಿಕಸಿಸಿದ್ದಾವೆ. ಈ ಬದಲಾವಣೆಗೆ ಪೂರಕವಾಗಿ ಕರ್ನಾಟಕ ಸರ್ಕಾರವು 2016-17ನೇ ಸಾಲಿನಲ್ಲಿ ಕನ್ನಡ ಸಾಹಿತ್ಯ ಲೋಕದ ಮೌಖಿಕ ಕೃತಿಗಳನ್ನು ಆಸಕ್ತ ಓದುಗರಿಗೆ, ಸಂಶೋಧಕರಿಗೆ ಮತ್ತು ಇತಿಹಾಸ ಅಧ್ಯಯನಕಾರರಿಗೆ ಒದಗಿಸಿಕೊಡುವ ಕೆಲಸ ಮಾಡಿದೆ.
ಓದುವ ಹವ್ಯಾಸ ಹೆಚ್ಚಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕನ್ನಡ ಡಿಜಿಟಲ್ ಲೈಬ್ರರಿ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಇದರ ಭಾಗವಾಗಿ https://kanaja.karnataka.gov.in/ebook/ ಜಾಲತಾಣವನ್ನು ಆರಂಭಿಸಿದೆ.
ಈ ಮೇಲ್ಕಂಡ ವೆಬ್ ಸೈಟ್ ನಲ್ಲಿ ಓದುಗರಿಗೆ ಜನಪ್ರಿಯ ಪುಸ್ತಕಗಳು, ವೈಶಿಷ್ಟ್ಯ ಪೂರ್ಣ ಪುಸ್ತಕಗಳು, ಇತ್ತೀಚಿನ ಪುಸ್ತಕಗಳ ಪಟ್ಟಿಯಂತೆ ಪುಸ್ತಕಗಳು ಓದುವುದಕ್ಕೆ ದೊರೆಯುತ್ತದೆ. ನಿಮಗೆ ಬೇಕಿರುವಂತ ಪುಸ್ತಕಗಳನ್ನು ಬಿಡುವಿನ ಸಮಯದಲ್ಲಿ ಮೊಬೈಲ್ ನಲ್ಲಿ ಓಪನ್ ಮಾಡುವ ಮೂಲಕ ಓದಬಹುದಾಗಿದೆ.
BIG NEWS: ‘ಹೈಕೋರ್ಟ್’ಗಳಲ್ಲಿ ಬಾಕಿ ಇವೆ ’30 ವರ್ಷ’ಕ್ಕಿಂತ ಹಳೆಯದಾದ ಸುಮಾರು ’62 ಸಾವಿರ ಪ್ರಕರಣ’ಗಳು
ಪ್ರಯಾಣಿಕರೇ ದಯವಿಟ್ಟು ಗಮನಿಸಿ : ಇನ್ಮುಂದೆ ಈ ವಯಸ್ಸಿನ ಮಕ್ಕಳು ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು!