ಬೆಂಗಳೂರು: ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ, ಬರ ಆವರಿಸಿತ್ತು. ಈ ಹಿನ್ನಲೆಯಲ್ಲಿ ಸರ್ಕಾರ ಬರ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ಈಗಾಗಲೇ ಬರ ಪರಿಹಾರದ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. ನಿಮ್ಮ ಖಾತೆಗೆ ಬಂದಿದ್ಯಾ ಇಲ್ವ ಅಂತ ಒಮ್ಮೆ ಈ ಕೆಳಗಿನ ವಿಧಾನದಲ್ಲಿ ಚೆಕ್ ಮಾಡಿ.
ರಾಜ್ಯ ಸರ್ಕಾರವು 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರ ಪರಿಹಾರ ಘೋಷಣೆ ಮಾಡಿತ್ತು. ಬೆಳೆಹಾನಿಗೆ ಸಂಬಂಧಿಸಿದಂತೆ ರೈತರಿಗೆ ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಪರಿಹಾರವನ್ನು ಜಮಾ ಮಾಡಿದೆ. ಮೊದಲ ಹಂತದಲ್ಲಿ ಅರ್ಹ ರೈತರಿಗೆ ರೂ.2000 ಪರಿಹಾರವನ್ನು ಪಾವತಿ ಮಾಡಿದೆ.
ಬೆಳೆ ಸಮೀಕ್ಷೆಯ ದತ್ತಾಂಶದ ಮಾಹಿತಿಯ ಮೇಲೆ FRUITS ID ಹೊಂದಿರುವಂತ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಹಂತ ಹಂತವಾಗಿ ಪರಿಹಾರವನ್ನು ಖಾತೆಗೆ ಜಮಾ ಮಾಡಲಾಗಿದೆ. ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದಂತೆ ರೈತರ ಖಾತೆಗೆ ನೇರವಾಗಿ ಬರ ಪರಿಹಾರದ ಹಣವನ್ನು ಜಮಾ ಮಾಡಲಾಗಿದೆ.
ಬರ ಪರಿಹಾರ ಬಂದಿದ್ಯಾ ಇಲ್ವ ಅಂತ ಈ ಕೆಳಗಿನ ಹಂತ ಅನುಸರಿಸಿ ಚೆಕ್ ಮಾಡಿ
-ರೈತರು ಮೊದಲು ತಮ್ಮ ಪ್ರೂಟ್ಸ್ ಐಟಿ ಇದ್ಯಾ ಇಲ್ಲವೇ ಎಂಬುದನ್ನು ಚೆಕ್ ಮಾಡಬೇಕು.
-ರೈತರು ತಮ್ಮ ಖಾತೆಗೆ NPCI ಲಿಂಕ್ ಆಗಿದ್ಯಾ ಅಂತನೂ ಚೆಕ್ ಮಾಡಬೇಕು
-ಒಂದು ವೇಳೆ ಲಿಂಕ್ ಆಗಿದ್ರೇ FRUITS ID ಹಾಗೂ NPCI ಬ್ಯಾಂಕ್ ಖಾತೆ ಇರಬೇಕು.
-ಈ ಎಲ್ಲ ಮಾಹಿತಿಯನ್ನು https://parihara.karnataka.gov.in/service92/ ಲಿಂಕ್ ಕ್ಲಿಕ್ ಮಾಡಿ, ಪರಿಶೀಲಿಸಬಹುದಾಗಿದೆ.
-ಈ ಮೇಲ್ಕಂಡ ಮಾಹಿತಿ ಎಲ್ಲ ಸರಿಯಾಗಿ ಇದ್ರೇ, ನಿಮ್ಮ ಬ್ಯಾಂಕ್ ಖಾತೆಗೆ ಸದ್ಯಕ್ಕೆ ಬಾರದೇ ಇದ್ರೇ, ಕೆಲವೇ ದಿನಗಳಲ್ಲಿ ಬರ ಪರಿಹಾರದ ಹಣ ಜಮಾ ಆಗಲಿದೆ.
-ಇನ್ನೂ ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು, ಬ್ಯಾಂಕ್ ಖಾತೆಯಲ್ಲಿ ಇರೋ ಹೆಸರು, ಪಹಣಿಯಲ್ಲಿ ಇರುವಂತ ಹೆಸರು ಒಂದೇ ಆಗಿರಬೇಕು. ಯಾವುದಾದರೂ ತಪ್ಪಿದ್ರೇ ಸರಿ ಪಡಿಸಿಕೊಂಡ್ರೇ ಜಮಾ ಆಗಲಿದೆ.
‘ಆಧಾರ್ ಕಾರ್ಡ್’ ನವೀಕರಿಸಲು ಈ ದಿನವೇ ಲಾಸ್ಟ್ ಡೇಟ್ : ಈ ಸರಳ ರೀತಿಯಲ್ಲಿ ‘ಅಪ್ ಡೇಟ್’ ಮಾಡಿಸಿಕೊಳ್ಳಿ
ಭ್ರೂಣ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ : ಉಲ್ಲಂಘಿಸಿದರೆ 3 ವರ್ಷ ಜೈಲು ಶಿಕ್ಷೆ, 10,000 ರೂ.ವರೆಗೆ ದಂಡ