ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳು ಇಇಡಿಎಸ್ ತಂತ್ರಾಂಶದ ಮೂಲಕ ರಜೆ ಅರ್ಜಿ ಸಲ್ಲಿಸುವ ಬಗ್ಗೆ ಹಾಗೂ 7ನೇ ವೇತನ ಶ್ರೇಣಿ ಹಾಗೂ ವೇತನವನ್ನು ಇಇಡಿಎಸ್ ತಂತ್ರಾಂಶದಲ್ಲಿ ಇಂದೀಕರಿಸುವ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಡಾ.ಕೆವಿ ತ್ರಿಲೋಕ ಚಂದ್ರ ಅವರು ಮಾಹಿತಿ ಹಂಚಿಕೊಂಡಿದ್ದು, ವಿಷಯದನ್ವಯ ಇ.ಇ.ಡಿ.ಎಸ್. ತಂತ್ರಾಂಶದಲ್ಲಿ ಇದುವರೆಗೆ ಒಟ್ಟು 18 ಸೇವೆಗಳನ್ನು ನೌಕರರಿಗೆ ಕಡ್ಡಾಯಗೊಳಿಸಿದ್ದರೂ ಸಹ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಶಾಲೆ /ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳು ಇ.ಇ.ಡಿ.ಎಸ್ ತಂತ್ರಾಂಶದ ಮೂಲಕ ರಜೆ ಅನುಮತಿ ಸಲ್ಲಿಸದೆ ಇರುವುದು ಇ.ಇ.ಡಿ.ಎಸ್ ವರದಿಗಳಲ್ಲಿ ಕಂಡುಬಂದಿರುತ್ತದೆ ಎಂದು ಹೇಳಿದ್ದಾರೆ.
ಇನ್ನು ಮುಂದೆ ಶಾಲಾ/ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವರ್ಗದ ಅಧಿಕಾರಿ/ಸಿಬ್ಬಂದಿಗಳು (ಬೋದಕ/ಬೋದಕೇತರ) ರಜೆಗೆ ತೆರಳುವ ಮುಂಚಿತವಾಗಿ ಇ.ಇ.ಡಿ.ಎಸ್. ತಂತ್ರಾಂಶದ ಮೂಲಕವೇ ಎಲ್ಲಾ ರೀತಿಯ ರಜಾ ಸೌಲಭ್ಯಗಳಾದ [C.L/R.H/E.L/H.P.L /ಇತರೆ] ರಜಾ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಅದರಂತೆ ಇ.ಇ.ಡಿ.ಎಸ್ ತಂತ್ರಾಂಶದ ಮೂಲಕವೇ ರಜೆ ಅರ್ಜಿಗಳನ್ನು ಸಲ್ಲಿಸಲು ಅಗತ್ಯ ಕ್ರಮವಹಿಸಲು ಎಲ್ಲಾ ಡಿಡಿಒ ಗಳಿಗೆ ಸೂಚಿಸಿದ್ದಾರೆ.
ಇ.ಇ.ಡಿ.ಎಸ್ ತಂತ್ರಾಂಶದ ಡಿಡಿಒ ಲಾಗಿನ್ ನಲ್ಲಿ 7ನೇ ವೇತನ ಶ್ರೇಣಿ ಹಾಗೂ ಮೂಲವೇತನವನ್ನು ಇಂದೀಕರಿಸಲು ಅವಕಾಶ ಕಲ್ಪಿಸಲಾಗಿದ್ದು, ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳ ವೇತನದ ವಿವರಗಳನ್ನು ಪರಿಶೀಲಿಸಿ ಇಂದೀಕರಿಸಲು ಅಗತ್ಯ ಕ್ರಮವಹಿಸಲು ಎಲ್ಲಾ ಡಿಡಿಒ ಗಳಿಗೆ ಸೂಚಿಸಿದೆ ಹಾಗೂ ಇ.ಇ.ಡಿ.ಎಸ್ ನಲ್ಲಿ ಎಲ್ಲಾ ನೌಕರರ ಮಾಹಿತಿ ಇಂದೀಕರಣ ಮಾಡಲು ದಿನಾಂಕ:28.03.2025 ಕೊನೆಯ ದಿನಾಂಕವಾಗಿರುತ್ತದೆ ಎಂದು ಹೇಳಿದ್ದಾರೆ.
ಇ.ಇ.ಡಿ.ಎಸ್.ನಲ್ಲಿ ನೌಕರರ ಮಾಹಿತಿಯನ್ನು ತಪ್ಪಿಲ್ಲದ ಇಂದೀಕರಿಸುವ ಬಗ್ಗೆ ವಿಡಿಯೋ ಕಾನ್ಸರನ್ ಗಳಲ್ಲಿ ಮತ್ತು ಸುತ್ತೋಲೆಗಳಲ್ಲಿ ತಿಳಿಸುತ್ತಿದ್ದರೂ ಸಹ ಈ ಕಛೇರಿಗೆ ನೌಕರರ ಹೆಸರು, ಕೆ.ಜಿ.ಐ.ಡಿ ಸಂಖ್ಯೆ ಇತ್ಯಾದಿ ಮಾಹಿತಿ ತಿದ್ದುಪಡಿಗೆ ಅರ್ಜಿ ಸಲ್ಲಿಕೆಯಾಗುತ್ತಿವೆ ಎಂದಿದ್ದಾರೆ.
ಇನ್ನು ಮುಂದೆ ಈ ರೀತಿ ತಪ್ಪು ಮಾಹಿತಿ ಇಂದೀಕರಿಸಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿದರೆ ಗಂಭೀರವಾಗಿ ಪರಿಗಣಿಸಲಾಗವುದು ಹಾಗೂ ನೌಕರರ ಜನ್ಮ ದಿನಾಂಕ ತಿದ್ದುಪಡಿಗೆ ಅವಕಾಶವಿರುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಕ್ರಮವಾಗಿ ‘ಬಗರ್ ಹುಕುಂ ಜಮೀನು’ ಮಂಜೂರಾತಿ ಪಡೆದವರಿಗೆ ಬಿಗ್ ಶಾಕ್
BIG NEWS: ಸಚಿವ ರಾಜಣ್ಣ ಮಾತ್ರವಲ್ಲ ಪುತ್ರ ಎಂಎಲ್ಸಿ ರಾಜೇಂದ್ರ ಮೇಲೂ ‘ಹನಿಟ್ರ್ಯಾಪ್’