ಬೆಂಗಳೂರು: ರಾಜ್ಯದಲ್ಲಿ ಕ್ಯಾನ್ಸರ್ ತಡೆಗೆ ಸರ್ಕಾರ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. 2025-26 ನೇ ಸಾಲಿನ ಆಯವ್ಯಯ ಘೋಷಣೆ ಕಂಡಿಕೆ ಸಂಖ್ಯೆ:142ರಲ್ಲಿ ಘೋಷಿಸಿರುವಂತೆ Karnataka Mining Environment Restoration Corporation (KMERC) ಜಿಲ್ಲೆಗಳ 10 ತಾಲ್ಲೂಕುಗಳಲ್ಲಿನ 14 ವರ್ಷದ ಹೆಣ್ಣು ಮಕ್ಕಳಿಗೆ Humam Papiloma virus (HPV) ಲಸಿಕಾಕರಣ ಅನುಷ್ಠಾನಗೊಳಿಸಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಿದ್ದು, 2025-26ನೇ ಸಾಲಿನ ಆಯವ್ಯಯ ಘೋಷಣೆ ಕಂಡಿಕೆ-142ರಲ್ಲಿ “ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟಲು ಪ್ರಥಮ ಹಂತದಲ್ಲಿ ಗಣಿಭಾದಿತ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ 20 ತಾಲ್ಲೂಕುಗಳಲ್ಲಿ 9 ಕೋಟಿ ರೂ. ವೆಚ್ಚದಲ್ಲಿ 14 ವರ್ಷದ ಹೆಣ್ಣು ಮಕ್ಕಳಿಗೆ HPV ಲಸಿಕೆಯನ್ನು ನೀಡಲಾಗುವುದು”ಎಂದು ಘೋಷಿಸಲಾಗಿದೆ.
ಈ ಯೋಜನೆಯು ಹೊಸ ಯೋಜನೆಯಾಗಿದ್ದು, ಈ ಯೋಜನೆಯನ್ನು ಕಲ್ಯಾಣ ಕರ್ನಾಟಕ ಮತ್ತು ಗಣಿಭಾದಿತ ಪ್ರದೇಶಗಳಲ್ಲಿ KKRDB ಮತ್ತು KMERC ಅನುದಾನದಲ್ಲಿ ಅನುಷ್ಠಾನಗೊಳಿಸಲು ಕ್ರಮ ವಹಿಸುವುದು ಎಂದು ತಿಳಿಸಲಾಗಿದೆ.
2025-26ನೇ ಸಾಲಿನಲ್ಲಿ ಆಯವ್ಯಯ ಘೋಷಣೆಯ ಕಂಡಿಕೆ -142ರ ಭಾಗಶಃ ಅನುಷ್ಠಾನವಾಗಿ 14ವರ್ಷದ ಹಣ್ಣು ಮಕ್ಕಳಿಗೆ HPV ಸೋಂಕಿನಿಂದ ರಕ್ಷಣೆ ನೀಡಲು ಮತ್ತು ಸಂಭಾವ್ಯ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಗಣಿಬಾಧಿತ ಈ ಕೆಳಕಂಡಂತೆ 4 ಜಿಲ್ಲೆಗಳ 8 ತಾಲ್ಲೂಕುಗಳಲ್ಲಿ ರೂ. 4.74 ಕೋಟಿಗಳ ಅನುದಾನದಲ್ಲಿ ಚುಚ್ಚುಮದ್ದು ಕಾರ್ಯಕ್ರಮವನ್ನು ಕೆಲವೊಂದು ಷರತ್ತಿಗೊಳಪಟ್ಟು ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.
HPV ಸಂಬಂಧಿತ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ದಿನಾಂಕ:05.06.2025ರಂದು ನಡೆದ ಮೇಲುಸ್ತುವಾರಿ ಪ್ರಾಧಿಕಾರದ 21ನೇ ಸಭೆಯಲ್ಲಿ ಅನುಮೋದಿತಗೊಂಡಂತೆ KMERCOO ಪತ್ರ ಸಂಖ್ಯೆ:KMERC/CEPMIZ/H&FW/32/2022-23/368. ದಿನಾಂಕ: 18.06.2025ರನ್ವಯ ಗಣಿಬಾಧಿತ 4 ಜಿಲ್ಲೆಗಳ 8 ತಾಲೂಕುಗಳಲ್ಲಿ ರೂ.4.74 ಕೋಟಿಗಳ ಅನುದಾನದಲ್ಲಿ ಚುಚ್ಚುಮದ್ದು ಕಾರ್ಯಕ್ರಮವನ್ನು ಕೈಗೊಳ್ಳಲು ದಿನಾಂಕ:08.07.2025ರಲ್ಲಿ ಅನುಮೋದನೆ ನೀಡಲಾಗಿದೆ. KMERCಯ ಪತ O KMERC/CEPMIZ/H&FW/32/2022-23/440, ದಿನಾಂಕ:30.06.2025 ರಲ್ಲಿ ಕೆಳಕಂಡಂತೆ HPV ಚುಚ್ಚುಮದ್ದಿಗಾಗಿ ಪರಿಷ್ಕೃತ ಅನುಮೋದನೆ ನೀಡಲಾಗಿದ್ದು, ಇದರನ್ವಯ ದಿನಾಂಕ:08.07.2025ರ ಆದೇಶವನ್ನು ಪರಿಷ್ಕರಿಸುವಂತೆ ಕೋರಲಾಗಿದೆ.
1. ತುಮಕೂರು ಜಿಲ್ಲೆ- ಗುಬ್ಬಿ, ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ತಾಲ್ಲೂಕುಗಳು -ರೂ.76 ಲಕ್ಷಗಳು. 2. ಬಳ್ಳಾರಿ ಜಿಲ್ಲೆ – ಬಳ್ಳಾರಿ, ಸಂಡೂರು ತಾಲ್ಲೂಕುಗಳು – ರೂ.186 ಲಕ್ಷಗಳು.
3. ಚಿತ್ರದುರ್‌ಗ ಜಿಲ್ಲೆ – ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಮತ್ತು ಮೊಳಕಾಲೂರು ತಾಲ್ಲೂಕುಗಳು- ರೂ.136 ಲಕ್ಷಗಳು ಮತ್ತು
4. ವಿಜಯನಗರ ಜಿಲ್ಲೆ ಹೊಸಪೇಟೆ ತಾಲ್ಲೂಕು – ರೂ.56 ಲಕ್ಷಗಳು.
ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ, 2025-26ನೇ ಸಾಲಿನಲ್ಲಿ ಆಯವ್ಯಯ ಘೋಷಣೆಯ ಕಂಡಿಕೆ 142ರ ಭಾಗಶಃ ಅನುಷ್ಠಾನವಾಗಿ 14ವರ್ಷದ ಹೆಣ್ಣು ಮಕ್ಕಳಿಗೆ HPV ಸೋಂಕಿನಿಂದ ರಕ್ಷಣೆ ನೀಡಲು ಮತ್ತು ಸಂಭಾವ್ಯ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಗಣಿಬಾಧಿತ ಈ ಕೆಳಕಂಡ 4 ಜಿಲ್ಲೆಗಳ 10 ತಾಲ್ಲೂಕುಗಳಲ್ಲಿ KMERC ಅನುಮೋದಿಸಿರುವ ರೂ. 4.54 ಕೋಟಿಗಳ ಅನುದಾನದಲ್ಲಿ ಚುಚ್ಚುಮದ್ದು ಕಾರ್ಯಕ್ರಮವನ್ನು ಕೆಳಕಂಡ ಷರತ್ತಿಗೊಳಪಟ್ಟು ಕೈಗೊಳ್ಳಲು ಅನುಮೋದನೆ ನೀಡಲಾಗಿದೆ.
ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಯೋಜನೆಗಳು ಜನರ ಕಣ್ಣಿಗೆ ಕಾಣುತ್ತಿವೆ: ಡಿಸಿಎಂ ಡಿ.ಕೆ.ಶಿವಕುಮಾರ್
‘GPay, PhonePe, Paytm’ನಲ್ಲಿ ಪಾವತಿ ವಿಫಲವಾದ್ರು ಹಣ ಕಟ್ ಆಗಿದ್ಯಾ.? ಈ ಹಂತ ಅನುಸರಿಸಿ, ಮರಳಿ ಖಾತೆ ಸೇರುತ್ತೆ